ಕ್ರಿಶ್ಚಿಯನ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್: ಉಡುಪಿಯ ರಾಯ್ ರಾಕರ್ಸ್ ಪ್ರಥಮ; ಮಂಗಳೂರಿನ ಶಟಲ್ ಬ್ಲಾಕರ್ಸ್ ರನ್ನರ್ಸ್ ಅಪ್

ಮಂಗಳೂರು: ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮೊದಲ ಕ್ರಿಶ್ಚಿಯನ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಜ. 14 ರಂದು ಫಾದರ್  ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಂ ಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಮತ್ತು ಲೆಕ್ಸಾ ಲೈಟೆನಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರೊನಾಲ್ಡ್ ಡಿಸೋಜಾ ಭಾಗವಹಿಸಿದ್ದರು.

ಮೆಲ್ವಿನ್ ಪೆರಿಸ್ ನಿರೂಪಿಸಿದರು. ಅಜಯ್ ಟೆರೆನ್ಸ್ ಸ್ವಾಗತಿಸಿದರು. ಅರುಣ್ ಬ್ಯಾಪ್ಟಿಸ್ಟ್ ಪಂದ್ಯಾವಳಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಜಾನ್ ಪೈಸ್ ವಂದಿಸಿದರು.

ಲಾರೆನ್ಸ್ ಕ್ರಾಸ್ತಾ, ಅನಿಲ್ ಪಿಂಟೋ ಮತ್ತು ಆಗ್ನೆಲ್ ಡಿಸೋಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ಟೆಲ್ಲರ್ ಸ್ಮಾಷರ್ಸ್, ರೆಡ್ ಇಂಡಿಯನ್ಸ್, ಶಟಲ್ ಬ್ಲಾಕರ್ಸ್, ಪೈಸ್ ಶಟ್ಲರ್ಸ್ , ರಾಯ್ ರಾಕರ್ಸ್, ಸ್ಪೋರ್ಟ್ಸ್ ಗ್ಯಾರೇಜ್  ಆರು ಉತ್ಸಾಹಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ರೋಚಕ ಅಂತಿಮ ಪಂದ್ಯದಲ್ಲಿ, ಉಡುಪಿಯ ರಾಯ್ ರಾಕರ್ಸ್ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ವಿಜಯಶಾಲಿಯಾಯಿತು. ಮಂಗಳೂರಿನ ಶಟಲ್ ಬ್ಲಾಕರ್ಸ್ ತಂಡವು ರನ್ನರ್ಸ್-ಅಪ್ ಆಗಿ ಹೊರಹೊಮ್ಮಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಾವೊ ಕೆಟರರ್ಸ್ ನ ಮಾಲಕ ಐವನ್ ಪತ್ರಾವೊ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಬಹುಮಾನ ವಿತರಿಸಿದರು.

ರಾಷ್ಟ್ರ ಮಟ್ಟದ ಆಟಗಾರ ಕ್ರಿಸ್ ಅಂಜನ್ ಬ್ಯಾಪ್ಟಿಸ್ಟ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಕ್ರೀಡಾಸ್ಫೂರ್ತಿ ಮತ್ತು ಸೌಹಾರ್ದತೆಯ ಮನೋಭಾವನೆಗೆ ಪಂದ್ಯಾಟ ಸಾಕ್ಷಿಯಾಯಿತು.