ಮತ್ಸ್ಯಾಶ್ರಯ ಯೋಜನೆಯಡಿ ವಸತಿ ಸೌಲಭ್ಯ ಅರ್ಜಿ ಆಹ್ವಾನ

ಉಡುಪಿ: ಮೀನುಗಾರಿಕೆ ಇಲಾಖೆಯ 2022-23 ನೇ ಸಾಲಿನಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ ವಸತಿ ಕಲ್ಪಿಸಲು ಬಿ.ಪಿ.ಎಲ್ ಅಥವಾ ಆರ್ಥಿಕವಾಗಿ ಹಿಂದುಳಿದ, ಸ್ವಂತ ನಿವೇಶನ ಹೊಂದಿರುವ, ಹುಟ್ಟಿನಿಂದ ಅಥವಾ ವೃತ್ತಿಯಲ್ಲಿ ಮೀನುಗಾರರಾಗಿರುವ, ವಿವಾಹಿತ, ವಿಧವೆ, ವಿಧುರ ಹಾಗೂ ಮೀನುಗಾರ ಸಹಕಾರಿ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಒಟ್ಟು 98 (ಸಾಮಾನ್ಯ-74, ಪ.ಜಾ-17,ಪ.ಪಂ-7) ಗುರಿಗಳನ್ನು ಸರ್ಕಾರದ ಆದೇಶದಂತೆ ನಿಗಧಿ ಪಡಿಸಿದ್ದು, ಈಗಾಗಲೇ ಒಟ್ಟು 47(ಸಾಮಾನ್ಯ -43, ಪ.ಜಾ-1, […]

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಪುತ್ತಿಗೆ ಶ್ರೀ

ಬೆಳ್ತಂಗಡಿ: ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳು ಜ.11ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಸ್ವಾಮೀಜಿಗಳನ್ನು ಧರ್ಮಸ್ಥಳ ಮಹಾದ್ವಾರದ ಬಳಿ ಕ್ಷೇತ್ರದ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಶ್ರೀಗಳು ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಬಳಿಕ ಸ್ವಾಮೀಜಿಯವರು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಕ್ಷೇತ್ರದ ಪರವಾಗಿ ಯತಿವರ್ಯರಿಂದ ಶ್ರೀಗಳ ಪಾದಪೂಜೆ ನೆರವೇರಿತು. ಡಾ. […]

ಬ್ರಹ್ಮಾವರ: ರಸ್ತೆ ಅಪಘಾತ – ಬೈಕ್ ಸವಾರ ಸಾವು.

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀದ ಉಪ್ಪೂರು ಬಳಿ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟ ಘಟನೆ ನಡೆದಿದೆ. ಸಾವನ್ನಪ್ಪಿದವರು ಅಂಪಾರು ಮೂಡುಬಗೆಯ ಚೇತನ್‌ (18) ಎಂದು ತಿಳಿದು ಬಂದಿದೆ. ಪುನೀತ್‌ ಅವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಉಡುಪಿ ಕಡೆ ತೆರಳುತ್ತಿದ್ದ ವೇಳೆ ಉಪ್ಪೂರು ಬಳಿ ಹೆದ್ದಾರಿ ದಾಟುತ್ತಿದ್ದ ಗಣೇಶ ಯು. ಸೇರ್ವೆಗಾರ್‌ ಅವರಿಗೆ ಢಿಕ್ಕಿ ಹೊಡೆದ ಬೈಕ್‌ ಬಳಿಕ ಡಿವೈಡರ್‌ ಮೇಲೇರಿ ಪಲ್ಟಿಯಾಯಿತು. ತೀವ್ರವಾಗಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಪುತ್ತಿಗೆ ಪರ್ಯಾಯ: ಎಣ್ಣೆಹೊಳೆ ಶಾಲಾ ಶಿಕ್ಷಕ ಗಣೇಶ್ ರಚಿತ “ಗೀತೋಪದೇಶ” ಚಿತ್ರ ವಿನ್ಯಾಸದ ಆಮಂತ್ರಣ ಪತ್ರಿಕೆ ಆಯ್ಕೆ

ಕಾರ್ಕಳ: ಎಣ್ಣೆಹೊಳೆ ರಾಧಾ ನಾಯಕ್ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಗಣೇಶ್ ಇವರ “ಗೀತೋಪದೇಶ” ಸಾರುವ ಚಿತ್ರ ವಿನ್ಯಾಸ ಈ ಬಾರಿಯ ಉಡುಪಿ ಪುತ್ತಿಗೆ ಪರ್ಯಾಯದ ಆಮಂತ್ರಣ ಪತ್ರಿಕೆಗೆ ಆಯ್ಕೆಯಾಗಿದೆ. ಗಣೇಶ್ ಒಬ್ಬ ಅದ್ಭುತ ಕಲಾವಿದ. ಚಿಂತನಾಶೀಲ ಶಿಕ್ಷಕ. ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲವರು. ಮಿತಭಾಷಿ ಸ್ನೇಹಜೀವಿ. ರಾಧಾ ನಾಯಕ್ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಪಾಲಿನ ಪ್ರೀತಿಯ ಪ್ರತಿಭಾನ್ವಿತ ಶಿಕ್ಷಕ. ವಿವಿಧ ಪ್ರಾಕಾರಗಳ ಸಂಗೀತ, ಸಾಹಿತ್ಯ, ಚಿತ್ರಕಲೆ, ವಿನ್ಯಾಸ, ತಾಂತ್ರಿಕ ಕೌಶಲ್ಯ ಎಲ್ಲವೂ ಗಣೇಶ್ […]

ಪುತ್ತಿಗೆ ಪರ್ಯಾಯ: ಕರ್ನಾಟಕ ಬ್ಯಾಂಕ್ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಹೊರೆ ಕಾಣಿಕೆ ಸಮರ್ಪಣೆ

ಉಡುಪಿ: ಪುತ್ತಿಗೆ ಮಠದ ಪರ್ಯಾಯವು (Puttige Paryaya) ಜ.18ರಂದು ನಡೆಯಲಿದ್ದು ಪರ್ಯಾಯ ಸಂಭ್ರಮದ ಪೂರ್ವಭಾವಿಯಾಗಿ ಕಳೆದ ಮೂರು ದಿನಗಳಿಂದ ವಿವಿಧ ಸಂಘಟನೆಗಳು ಹಾಗೂ ಗ್ರಾಮಗಳ ವತಿಯಿಂದ ಹಸಿರು ಹೊರೆ ಕಾಣಿಕೆ ಸಮರ್ಪಣಾ ಕಾರ್ಯ ನಡೆಯುತ್ತಿದ್ದು, ಗುರುವಾರದಂದು ಕರ್ನಾಟಕ ಬ್ಯಾಂಕ್ ವತಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕರ್ನಾಟಕ ಬ್ಯಾಂಕ್ ಮಾತ್ರವಲ್ಲದೇ, ಪುತ್ತಿಗೆ ಮೂಲಮಠ, ಕಾರ್ಕಳ ತಾಲೂಕು, ಹೆಬ್ರಿ ತಾಲೂಕು, ಪೆರ್ಡೂರು ವಲಯ, ಆತ್ರಾಡಿ ವಲಯ, ಹಿರಿಯಡ್ಕ ವಲಯ, ಪರ್ಕಳ ವಲಯ, […]