ಉಡುಪಿ-ಮಣಿಪಾಲ ಜಂಕ್ಷನ್ ಗೆ ಉದಯವಾಣಿ ವೃತ್ತ ನಾಮಕರಣ: ಆಕ್ಷೇಪಣೆ/ಸಲಹೆ ಆಹ್ವಾನ
ಉಡುಪಿ: ನಗರಸಭಾ ವ್ಯಾಪ್ತಿಯ ಉಡುಪಿ-ಮಣಿಪಾಲ ಜಂಕ್ಷನ್‌ನಲ್ಲಿ ಜಿಲ್ಲಾಧಿಕಾರಿ ಕಛೇರಿ ಕಡೆಗೆಹೋಗುವ ರಸ್ತೆ ಮತ್ತು ಮಣಿಪಾಲದ ಅನಂತನಗರದ ಕಡೆಗೆ ಹೋಗುವ ಇನ್ನೊಂದು ರಸ್ತೆ ಸಂಧಿಸುವ ವೃತ್ತಕ್ಕೆ ಉದಯವಾಣಿ ವೃತ್ತ ಎಂದು ನಾಮಕರಣ ಮಾಡುವ ಕುರಿತು ಆಕ್ಷೇಪಣೆ ಅಥವಾ ಸಲಹೆಗಳು ಇದ್ದಲ್ಲಿ 30 ದಿನಗಳ ಒಳಗೆ ನಗರಸಭೆಯ ಕಛೇರಿಗೆ ಸಲ್ಲಿಸಬಹುದಾಗಿದೆ ಎಂದು ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಜ. 8 ರಿಂದ 31 ರವರೆಗೆ ಕೋವಿಡ್ ಬೂಸ್ಟರ್ ಡೋಸ್ ಕೋರ್ಬೆವ್ಯಾಕ್ಸ್ ಲಸಿಕಾ ಅಭಿಯಾನ
ಉಡುಪಿ: ಕೊವ್ಯಾಕ್ಸಿನ್ ಅಥವಾ ಕೋವಿಶಿಲ್ಡ್ 2 ನೇ ಡೋಸ್ ಲಸಿಕೆ ಪಡೆದು 6 ತಿಂಗಳು (26 ವಾರ)ಆಗಿರುವ 18 ವರ್ಷ ಮೇಲ್ಪಟ್ಟವರಿಗೆ ಕೋರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ಲಸಿಕೆಯು ಜನವರಿ 8 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿಟ್ಟೆ ಸರ್ಕಾರಿ ಆರೋಗ್ಯ ಕೇಂದ್ರ ಮತ್ತು ಕೆಮ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 20 ಹಾಗೂ ಕಾರ್ಕಳ ತಾಲೂಕು ಆಸ್ಪತೆಯಲ್ಲಿ 40 ಡೋಸ್, ಜ. 10 ರಂದು ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 20, ಜ. […]
ಮಂಗಳೂರು: ಕಚ್ಚೂರು ಸೊಸೈಟಿಯ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ (ಲಿ.), ಬೆಂದೂರುವೆಲ್, ಕಂಕನಾಡಿ, ಮಂಗಳೂರು ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಜ. 07 ರಂದು ಸುಮಸದನ ಮಂಗಳೂರು ಇಲ್ಲಿ ನಡೆಯಬೇಕಾಗಿದ್ದ ಚುನಾವಣೆ ಇರುವುದಿಲ್ಲ ಎಂದು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ ‘ವಿದ್ಯಾರ್ಥಿ ಮಿತ್ರ’ ಸಿ.ಇ.ಟಿ ಅರ್ಜಿ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಉಡುಪಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಉಡುಪಿ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ “ವಿದ್ಯಾರ್ಥಿ ಮಿತ್ರ” ಸಿ.ಇ.ಟಿ. ಅರ್ಜಿ- 2024, ಇದನ್ನು ತುಂಬುವ ವಿಷಯದಲ್ಲಿ ತರಬೇತಿ ಕಾರ್ಯಕ್ರಮವು ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಉಡುಪಿ ಜಿಲ್ಲೆಯ ಖಾಸಗಿ, ಅನುದಾನಿತ, ಸರ್ಕಾರಿ, ಸಿ.ಬಿ.ಎಸ್.ಇ ಹಾಗೂ ಐ.ಸಿ.ಎಸ್.ಇ 11 ಮತ್ತು 12ನೇ ತರಗತಿಯ ವಿಜ್ಞಾನ ವಿಷಯದ ಎಲ್ಲಾ ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮವನ್ನು ಉಡುಪಿ […]
ಚೀನಾ ಮೇಲೆ ಹದ್ದಿನ ಕಣ್ಣಿಡಲು ಭಾರತ ತಯಾರಿ: LAC ಬಳಿ ಹೆದ್ದಾರಿ ಯೋಜನೆಯ ನಿರ್ಮಾಣಕ್ಕಾಗಿ ಮೊದಲ ಟೆಂಡರ್ ಆಹ್ವಾನ
ನವದೆಹಲಿ: ಒಂದು ಪ್ರಮುಖ ಕ್ರಮದಲ್ಲಿ, ಸರ್ಕಾರವು ಅಂತಿಮವಾಗಿ ದೇಶದ ಅತ್ಯಂತ ಸವಾಲಿನ ಮತ್ತು ಕಾರ್ಯತಂತ್ರದ ಯೋಜನೆಯನ್ನು ನೈಜ ನಿಯಂತ್ರಣ ರೇಖೆಯ (LAC) ಪಕ್ಕದಲ್ಲಿ ಪ್ರಾರಂಭಿಸಿದೆ. ಅರುಣಾಚಲ ಪ್ರದೇಶದ ಫ್ರಾಂಟಿಯರ್ ಹೆದ್ದಾರಿ ಯೋಜನೆಯ ನಿರ್ಮಾಣಕ್ಕಾಗಿ ಮೊದಲ ಟೆಂಡರ್‌ಗಳನ್ನು ಸರ್ಕಾರ ಗುರುವಾರ ಆಹ್ವಾನಿಸಿದ್ದು, 2027 ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ನ್ಯೂಸ್ 18 ವರದಿ ಹೇಳಿದೆ. ಸರ್ಕಾರವು ಆಹ್ವಾನಿಸಿದ ಮೊದಲ ಟೆಂಡರ್‌ಗಳು ಸುಮಾರು 2,200 ಕೋಟಿ ರೂ.ಮೌಲ್ಯದ್ದಾಗಿದೆ. LAC ಪಕ್ಕದಲ್ಲಿ ಹುನ್ಲಿ ಮತ್ತು ಹಯುಲಿಯಾಂಗ್ ನಡುವೆ ಸುಮಾರು […]