ಚೀನಾ ಮೇಲೆ ಹದ್ದಿನ ಕಣ್ಣಿಡಲು ಭಾರತ ತಯಾರಿ: LAC ಬಳಿ ಹೆದ್ದಾರಿ ಯೋಜನೆಯ ನಿರ್ಮಾಣಕ್ಕಾಗಿ ಮೊದಲ ಟೆಂಡರ್‌ ಆಹ್ವಾನ

ನವದೆಹಲಿ: ಒಂದು ಪ್ರಮುಖ ಕ್ರಮದಲ್ಲಿ, ಸರ್ಕಾರವು ಅಂತಿಮವಾಗಿ ದೇಶದ ಅತ್ಯಂತ ಸವಾಲಿನ ಮತ್ತು ಕಾರ್ಯತಂತ್ರದ ಯೋಜನೆಯನ್ನು ನೈಜ ನಿಯಂತ್ರಣ ರೇಖೆಯ (LAC) ಪಕ್ಕದಲ್ಲಿ ಪ್ರಾರಂಭಿಸಿದೆ. ಅರುಣಾಚಲ ಪ್ರದೇಶದ ಫ್ರಾಂಟಿಯರ್ ಹೆದ್ದಾರಿ ಯೋಜನೆಯ ನಿರ್ಮಾಣಕ್ಕಾಗಿ ಮೊದಲ ಟೆಂಡರ್‌ಗಳನ್ನು ಸರ್ಕಾರ ಗುರುವಾರ ಆಹ್ವಾನಿಸಿದ್ದು, 2027 ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ನ್ಯೂಸ್ 18 ವರದಿ ಹೇಳಿದೆ.

ಸರ್ಕಾರವು ಆಹ್ವಾನಿಸಿದ ಮೊದಲ ಟೆಂಡರ್‌ಗಳು ಸುಮಾರು 2,200 ಕೋಟಿ ರೂ.ಮೌಲ್ಯದ್ದಾಗಿದೆ. LAC ಪಕ್ಕದಲ್ಲಿ ಹುನ್ಲಿ ಮತ್ತು ಹಯುಲಿಯಾಂಗ್ ನಡುವೆ ಸುಮಾರು 121 ಕಿಮೀ ಉದ್ದದ ಪ್ರಮುಖ ಹೆದ್ದಾರಿ ವಿಸ್ತರಣೆಯನ್ನು ನಿರ್ಮಿಸಲಾಗುವುದು. ಹುನ್ಲಿ ಮತ್ತು ಇಥುನ್ ನಡುವೆ 17 ಕಿಮೀ ಉದ್ದದ ಆಯಕಟ್ಟಿನ ಸೇತುವೆ ಮತ್ತು ಟುಟಿನ್‌ನಿಂದ ಜಿಡೋವರೆಗೆ 13 ಕಿಮೀ ರಸ್ತೆಯನ್ನು ನಿರ್ಮಿಸಲಾಗುವುದು.

ಅರುಣಾಚಲ ಪ್ರದೇಶದ ಸುಮಾರು 1,700 ಕಿಮೀ ಉದ್ದದ ಫ್ರಾಂಟಿಯರ್ ಹೈವೇ ಯೋಜನೆಯು ಗಡಿಯಾಚೆಗಿನ ಚೀನಾದ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡುವುದರ ಜೊತೆಗೆ LAC ಪ್ರದೇಶದ ಮಿಲಿಟರಿ ಚಲನೆಗೆ ಸಹಾಯ ಮಾಡುವ ಪ್ರಮುಖ ಕಾರ್ಯತಂತ್ರದ ಯೋಜನೆಯಾಗಿದೆ. 2016 ರಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಿದ್ದಾಗ ಚೀನಾ ಆಕ್ಷೇಪಿಸಿತ್ತು. ಆದರೆ ಇದೀಗ ಭಾರತವು ನಿಯಂತ್ರಣ ರೇಖೆಯ ಪಕ್ಕದಲ್ಲಿ ರಸ್ತೆ ನಿರ್ಮಿಸುವುದು ಖಚಿತವಾಗಿದ್ದು ಇದು ಚೀನಾದ ನಡೆಗಳಿಗೆ ಭಾರತದ ಪ್ರಮುಖ ಉತ್ತರವಾಗಲಿದೆ.