ಜನವರಿ ಅಂತ್ಯದೊಳಗೆ ತೆರಿಗೆ ಪಾವತಿಸಿ: ನಗರಸಭೆ ಸೂಚನೆ

ಉಡುಪಿ: ನಗರಸಭಾ ವ್ಯಾಪ್ತಿಯ ಕಟ್ಟಡ ಮಾಲೀಕರು ಹಾಗೂ ಅಧಿಭೋಗದಾರರು ನಗರಸಭಾ ವ್ಯಾಪ್ತಿಯಲ್ಲಿರುವ ವಸತಿ, ವಾಣಿಜ್ಯ, ಕೈಗಾರಿಕೆ ಹಾಗೂ ತೆರಿಗೆಯಿಂದ ವಿನಾಯಿತಿ ಇರುವ ಕಟ್ಟಡ ಹೊರತುಪಡಿಸಿ, ಉಳಿದ ಕಟ್ಟಡಗಳ ಆಸ್ತಿ ತೆರಿಗೆ, ನೀರಿನ ಕರ, ಉದ್ದಿಮೆ ಪರವಾನಿಗೆ ಬಾಕಿ ಇರುವುದು ಕಂಡುಬಂದಿದ್ದು, ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ಕರ, ಉದ್ದಿಮೆ ಪರವಾನಿಗೆ ಮತ್ತು ಎಸ್.ಡಬ್ಲ್ಯೂ.ಎಮ್ ಶುಲ್ಕವನ್ನು 2024 ರ ಜನವರಿ ಅಂತ್ಯದೊಳಗೆ ನಗರಸಭಾ ಕಚೇರಿಗೆ ಪಾವತಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮನ್ವಯ್ ಬುಟೀಕ್ ಹೋಟೇಲಿನಲ್ಲಿ ಉದ್ಯೋಗಾವಕಾಶ

ಉಡುಪಿ: ಇಲ್ಲಿನ ಕಿನ್ನಿಮೂಲ್ಕಿಯಲ್ಲಿರುವ ಪ್ರಸಿದ್ದ ಸಮನ್ವಯ್ ಬುಟೀಕ್ ಹೋಟೇಲಿಗೆ ಮ್ಯಾನೇಜರ್, ರಿಸೆಪ್ಷನಿಸ್ಟ್(ಪುರುಷ), ರೂಂ ಬಾಯ್ಸ್ ಬೇಕಾಗಿದ್ದು ಆಸಕ್ತರು 9686277001 ಅನ್ನು ಸಂಪರ್ಕಿಸಬಹುದು.
ಭಾರತದಲ್ಲಿ ಗೂಗಲ್ ಸೇರಿದಂತೆ ಅನೇಕ ಟೆಕ್ ಕಂಪೆನಿಗಳಿಂದ ನೇಮಕಾತಿ ಕುಂಠಿತ

ನವದೆಹಲಿ : 2022 ಕ್ಕೆ ಹೋಲಿಸಿದರೆ ಭಾರತದಲ್ಲಿ ಗೂಗಲ್ ಸೇರಿದಂತೆ ಅನೇಕ ಟೆಕ್ ಕಂಪೆನಿಗಳು ನೇಮಕಾತಿಯು 90 ಪ್ರತಿಶತದಷ್ಟು ಕುಸಿದಿವೆ. ಕಂಪನಿಗಳು ಭಾರತದಲ್ಲಿ 200 ಮುಕ್ತ ಸ್ಥಾನಗಳನ್ನು ಹೊಂದಿವೆ, ಇದು ಅವರ ವಿಶಿಷ್ಟ ನೇಮಕಾತಿ ಪ್ರಕಿಯೆಯಲ್ಲಿ 98 ಪ್ರತಿಶತ ಇಳಿಕೆಯಾಗಿದೆ ಎಂದು ತಿಳಿಸಿದೆ.ಗೂಗಲ್, ಅಮೆಜಾನ್, ಮೆಟಾ, ಆಪಲ್ ಸೇರಿದಂತೆ ಅನೇಕ ಟೆಕ್ ಕಂಪೆನಿಗಳು ತಮ್ಮ ನೇಮಕಾತಿ ಪ್ರಕ್ರಿಯೆಗಳನ್ನು ನಿಧಾನಗೊಳಿಸುತ್ತಿದ್ದು, ಮುಂದೆಯೂ ಉದ್ಯೋಗಾವಕಾಶಗಳ ಕೊರತೆ ಕಂಡು ಬರಲಿದೆ ಎಂದು ವರದಿಗಳು ತಿಳಿಸಿವೆ. ಎಕನಾಮಿಕ್ ಟೈಮ್ಸ್ (ಇಟಿ) ನ ಇತ್ತೀಚಿನ […]
ಹೊಸ ವರ್ಷದ ಸಂಭ್ರಮ : ಚಾಲಕ ಮತ್ತು ನಿರ್ವಾಹಕರಿಗೆ ಸಿಹಿಸುದ್ದಿ ಕೊಟ್ಟ ಬಿಎಂಟಿಸಿ

ಬೆಂಗಳೂರು ಹೊಸ ವರುಷದ ಆಚರಣೆ ಹಾಗೂ 25ನೇ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ತನ್ನ ಚಾಲಕ ಮತ್ತು ನಿರ್ವಾಹಕರಿಗೆ ಸಿಹಿಸುದ್ದಿ ನೀಡಿದೆ. ಹೌದು, ಬೆಂಗಳೂರು ಮಹಾನಗರ ಸಾರಿಗೆ ಬಿಎಂಟಿಸಿಯ ಚಾಲಕರ ಮತ್ತು ನಿರ್ವಾಹಕರ ಕೇಸ್ಗಳು ಖುಲಾಸೆ ಮಾಡಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಆದೇಶ ಹೊರಡಿಸಿದ್ದು, ಇಂದಿನಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ಚಾಲನೆ ವೇಳೆ ಮೊಬೈಲ್ ಬಳಕೆ, ಟಿಕೆಟ್ ಸರಿಯಾಗಿ ನೀಡದಿರುವುದು, ಗೈರು ಹಾಜರಿ, ಸಂಚಾರಿ […]
ಬೆಂಗಳೂರಲ್ಲಿ ಹುಚ್ಚುನಾಯಿ ಹಾವಳಿಗೆ ಬಾಲಕರು ಸೇರಿ 7 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಬೆಂಗಳೂರಿನ ಯಲಹಂಕದ ಕೊಂಡಪ್ಪ ಲೇಔಟ್ ಬಳಿ ರಸ್ತೆಯಲ್ಲಿ ಹೋಗುವವರ ಮೇಲೆ ಹುಚ್ಚುನಾಯಿಯೊಂದು ದಾಳಿ ಮಾಡಿ ಕಚ್ಚುತ್ತಿದ್ದು, ಜನರನ್ನು ಭಯಗೊಳಿಸಿದೆ. ಹುಚ್ಚುನಾಯಿಗಳ ಹಾವಳಿ ಜನರ ನಿದ್ದೆಗೆಡಿಸಿದೆ. ಹುಚ್ಚುನಾಯಿಗಳ ದಾಳಿಗೆ ಬಾಲಕರು ಸೇರಿ 7 ಮಂದಿ ಗಾಯಗೊಂಡಿದ್ದಾರೆ. ಸಂಜೆ ವಾಕಿಂಗ್ ಹೋಗುವವರ ಮೇಲೆ ಹುಚ್ಚುನಾಯಿ ದಾಳಿ ನಡೆಸಿದ್ದು, ಸಿಕ್ಕ ಸಿಕ್ಕ ಕಡೆ ದಾಳಿ ನಡೆಸುತ್ತಿರುವ ಹುಚ್ಚು ನಾಯಿಯನ್ನು ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದಾರೆ. ಹುಚ್ಚು ನಾಯಿಗಳು ಹೆಚ್ಚಾಗಿ ಮಕ್ಕಳನ್ನೇ ಕಚ್ಚುತ್ತಿದ್ದು, ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಹುಚ್ಚುನಾಯಿ ಕಚ್ಚಿ […]