ಉಡುಪಿ: ಜಯಲಕ್ಷ್ಮೀ ಸಿಲ್ಕ್ಸ್ ನಲ್ಲಿ ಮಿಸ್ ಫೈರಿಂಗ್ ಪ್ರಕರಣ: ಪಿಸ್ತೂಲ್ ವಾರಸುದಾರರ ಪತ್ತೆ.

ಉಡುಪಿ: ಉಡುಪಿಯ ಪ್ರತಿಷ್ಠಿತ ಜಯಲಕ್ಷ್ಮೀ ಸಿಲ್ಕ್ಸ್ ಬಟ್ಟೆ ಮಳಿಗೆಯಲ್ಲಿ ಇಂದು ಮಧ್ಯಾಹ್ನ ಪತ್ತೆಯಾದ ಪಿಸ್ತೂಲಿನ ವಾರಿಸುದಾರರನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅದೊಂದು ಪರವಾನಿಗೆ ಹೊಂದಿದ ಪಿಸ್ತೂಲ್ ಎಂದು ತಿಳಿದುಬಂದಿದೆ. ಮಂಗಳೂರಿನ ಜಯಪ್ರಕಾಶ್ ಎಂಬವರಿಗೆ ಸೇರಿದ ಪಿಸ್ತೂಲ್ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇವರು ಬಟ್ಟೆ ಮಳಿಗೆಯ ಮೊದಲನೇ ಮಹಡಿಯ ಪುರುಷರ ಶೌಚಾಲಯದ ಬಳಿ ಪಿಸ್ತೂಲನ್ನು ಮರೆತು ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಸ್ವಚ್ಛತಾ ಸಿಬ್ಬಂದಿಯೋರ್ವರಿಗೆ ಪಿಸ್ತೂಲ್ ಸಿಕ್ಕಿದ್ದು, ಇನ್ನೋರ್ವ ಸಿಬ್ಬಂದಿ ಪರೀಕ್ಷಿಸಲು ಪಡೆದುಕೊಂಡು ಕಾಕ್‌ ಮಾಡಿದ್ದಾನೆ. ಈ ವೇಳೆ […]

ಜ.02 ರಿಂದ 3 ನೇ ಸುತ್ತಿನ ಕೋವಿಡ್ ಲಸಿಕಾ ಅಭಿಯಾನ ಆರಂಭ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನ JN.1 ರೂಪಾಂತರಿ ಸೋಂಕು ಹೆಚ್ಚಳವಾಗುತ್ತಿದ್ದು, ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಜ.02 ರಿಂದ ರಾಜ್ಯದಲ್ಲಿ ಕೋರ್ಬಿವ್ಯಾಕ್ಸ್ ಲಸಿಕೆಯನ್ನು ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಮುನ್ನೆಚ್ಚರಿಕಾ ಲಸಿಕೆ(ಬೂಸ್ಟರ್ ಡೋಸ್) ಯನ್ನು ಶೇ. 27% ಜನರು ಮಾತ್ರ ಪಡೆದಿದ್ದಾರೆ. ರಾಜ್ಯದಲ್ಲಿ 1.5 ಕೋಟಿಗೂ ಅಧಿಕ ಜನರು ಮುನ್ನೆಚ್ಚರಿಕಾ ವ್ಯಾಕ್ಸಿನ್ ಪಡೆಯಲು ಅಹರ್ತೆ ಹೊಂದಿದ್ದಾರೆ. ಇವರ್ಯಾರೂ […]

ಉಡುಪಿ: ಮಂಗಳೂರು- ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಅದ್ದೂರಿ ಸ್ವಾಗತ

ಉಡುಪಿ: ಕರಾವಳಿ ಜನತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊಡುಗೆಯಾಗಿ ನೀಡಿರುವ ಮಂಗಳೂರು- ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಥಮ ಪ್ರಯಾಣ ಹಿನ್ನೆಲೆಯಲ್ಲಿ ಡಿಸೆಂಬರ್ 30 ರಂದು ಉಡುಪಿಯಲ್ಲಿ ಅದ್ದೂರಿ ಸ್ವಾಗತ ಸಮಾರಂಭ ಆಯೋಜಿಸಲಾಯಿತು. ಕರಾವಳಿ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಚಾಲನೆ ನೀಡಿದ್ದು, ಉಡುಪಿ ರೈಲ್ವೇ ನಿಲ್ದಾಣದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ […]

ಮಲ್ಪೆ: ಇಸ್ಪೀಟು ಆಟ ಆಡುತ್ತಿರುವಾಗ ದಾಳಿ – ನಾಲ್ಕು ಮಂದಿ ಪೊಲೀಸ್ ವಶಕ್ಕೆ.

ಮಲ್ಪೆ: ಇಸ್ಪೀಟು ಆಟ ಆಡುತ್ತಿರುವಾಗ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನ ಒಳಗೆ ನಡೆದಿದೆ. ಬಂಧಿಸಿದ ವ್ಯಕ್ತಿಗಳಲ್ಲಿ ಸತ್ಯನಂದನ, ಯಮುನಪ್ಪ, ರಂಜಿತ್, ರಾಮ್ ದಾಸ್ ಎಂದು ತಿಳಿದು ಬಂದಿದೆ. ಮಲ್ಪೆ ಪೊಲೀಸರು ಬಂಧಿತರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಘಟನೆ ವಿವರ: ಮಲ್ಪೆ: ದಿನಾಂಕ 29/12/2023 ರಂದು ಗುರುನಾಥ ಬಿ ಹೆಚ್‌ , ಪೊಲೀಸ್‌ ಉಪನಿರೀಕ್ಷಕರು, ಮಲ್ಪೆ ಪೊಲೀಸ್‌ ಠಾಣೆ ಇವರಿಗೆ ಮಲ್ಪೆ ಬಂದರಿನ ಹೊಸ […]

ಜಯಲಕ್ಷ್ಮೀ ಸಿಲ್ಕ್‌ನಲ್ಲಿ ಅಜ್ಞಾತ ವ್ಯಕ್ತಿಯ ಗನ್ ನಿಂದ ಮಿಸ್ ಫೈರಿಂಗ್: ಒಬ್ಬ ಸಿಬ್ಬಂದಿಗೆ ಗಾಯ

ಉಡುಪಿ: ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್‌ನಲ್ಲಿ ಇಂದು ಮಧ್ಯಾಹ್ನ ಗನ್ ನಿಂದ ಮಿಸ್‌ ಫೈರಿಂಗ್‌ ಆದ ಪರಿಣಾಮ ಸಿಬ್ಬಂದಿಯೋರ್ವರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಮಳಿಗೆಯಲ್ಲಿಅಜ್ಞಾತ ವ್ಯಕ್ತಿ ಬಿಟ್ಟು ಹೋಗಿದ್ದ ಗನ್‌ ಪತ್ತೆಯಾಗಿತ್ತು. ಅದನ್ನು ಎತ್ತಿಕೊಂಡ ಸಿಬ್ಬಂದಿ ಗನ್ ಅನ್ನು ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡು ತಗುಲಿದ್ದು, ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ದೌಡಾಯಿಸಿದ್ದು, ಗನ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಗನ್‌ ಯಾರದ್ದು? […]