ಜಿಲ್ಲೆಯ ಪ್ರಗತಿಗೆ ವೇಗ ತುಂಬುವಲ್ಲಿ ‘ಉಡುಪಿ ಆಟೋ ಎಕ್ಸ್‌ಪೋ’ ಸಹಕಾರಿ: ಯಶ್ ಪಾಲ್ ಸುವರ್ಣ

ಉಡುಪಿ: ಉಡುಪಿ-ಮಣಿಪಾಲವು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಅತೀ ವೇಗದಿಂದ ಪ್ರಗತಿ ಪಥದಲ್ಲಿ ಸಾಗುತ್ತಿರುವ ಉಡುಪಿ ನಗರದ ಪ್ರಗತಿಗೆ ಉಡುಪಿ ಆಟೋ ಎಕ್ಸ್ ಪೋ ಮೂಲಕ ಇನ್ನಷ್ಟು ವೇಗ ದೊರಕಿದೆ. ಉಡುಪಿಯು ಜಿಲ್ಲೆಯಾಗಿ ಮಾನ್ಯತೆ ಪಡೆದು ಇಪ್ಪತ್ತೈದು ವರ್ಷಗಳಾಗಿದ್ದು ಜಿಲ್ಲೆಯ ಕೊಡುಗೆ ಮತ್ತು ಸಾಧನೆಗಳು ಬಹಳ. ಜಿಲ್ಲೆಯು ಧಾರ್ಮಿಕತೆ, ಶೈಕ್ಷಣಿಕ ಕ್ಷೇತ್ರ, ಬ್ಯಾಂಕಿಂಗ್ , ಹೋಟೆಲ್ ಉದ್ಯಮ, ಮೀನುಗಾರಿಕೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ವಿಶ್ವದ ಮನಸ್ಸನ್ನು ಗೆದ್ದಿದೆ. ಉಡುಪಿಯಲ್ಲಿ ಹೂಡಿಕೆ ಮಾಡಲು ಉದ್ಯಮಗಳು ಮುಂದೆ ಬರುತ್ತಿವೆ ಎಂದು […]

ಗುಜರಿ ಮಾರಾಟದಿಂದ ಬರೋಬ್ಬರಿ 1,163 ಕೋಟಿ ರೂ ಗಳಿಸಿದ ಕೇಂದ್ರ ಸರ್ಕಾರ!!

ನವದೆಹಲಿ: ಈ ವರದಿಯನ್ನು ನಂಬಿದರೆ ನಂಬಿ ಅಥವಾ ಬಿಟ್ಟರೆ ಬಿಡಿ, ನರೇಂದ್ರ ಮೋದಿ ಸರ್ಕಾರವು ಇಲಾಖೆಗಳ ಕಡತ, ಕಚೇರಿ ಉಪಕರಣಗಳು ಮತ್ತು ಬಳಕೆಯಲ್ಲಿಲ್ಲದ ವಾಹನಗಳನ್ನು ಮಾರಾಟ ಮಾಡುವ ಮೂಲಕ ಬರೋಬ್ಬರಿ 1,163 ಕೋಟಿ ರೂ ಆದಾಯ ಗಳಿಕೆ ಮಾಡಿದೆ! ಆಡಳಿತ ಸುಧಾರಣಾ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಈ ಅಭಿಯಾನದ ನೇತೃತ್ವ ವಹಿಸಿದೆ. ಇದು ಭಾರತದ ಎರಡು ಚಂದ್ರಯಾನ ಯೋಜನೆಗಳಿಗೆ ಖರ್ಚು ಮಾಡಬಹುದಾದ ಒಟ್ಟು ಮೊತ್ತವಾಗಿದೆ. ಭಾರತದ ಯಶಸ್ವಿ ಚಂದ್ರಯಾನ-3 ಮಿಷನ್ ಸುಮಾರು 600 ಕೋಟಿ ರೂ […]

ಕುಶಾಲನಗರ: 10800 ಯಜ್ಞಕರ್ತರಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಕುಶಾಲನಗರ: ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಮಹೋನ್ನತ ಧಾರ್ಮಿಕ ಜಾಗತಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞಕ್ಕೆ 10800 ಯಜ್ಞಕರ್ತರನ್ನು ನೋಂದಣಿ ಕಾರ್ಯಕ್ಕೆ ಶ್ರೀಪಾದರ ಮೂಲಕ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಿರಿಯ ಸ್ವಾಮಿಜಿಗಳಾದ ಸುಶೀಂದ್ರ ತೀರ್ಥರು ಉಪಸ್ಥಿತರಿದ್ದ ಈ ಬೃಹತ್ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಕುಶಾಲನಗರದ ಸಂಕರ್ಷಣ ಪ್ರಖಂಡ ಕೋಟಿ ಗೀತಾ ಲೇಖನ ಯಜ್ಞ ಪರಿವಾರ ಆಯೋಜಿಸಿತ್ತು. ಡಿಸೆಂಬರ್ 27 ರಂದು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಖಲೆಯ1008 ಯಜ್ಞಕರ್ತರು ಭಾಗವಹಿಸಿದ್ದರು.

ಅಬುಧಾಬಿಯಲ್ಲಿ ಹಿಂದೂ ದೇವಾಲಯದ ಉದ್ಘಾಟನೆಯ ಆಹ್ವಾನಕ್ಕೆ ಪ್ರಧಾನಿ ಮೋದಿ ಅಸ್ತು

ನವದೆಹಲಿ: ಫೆಬ್ರವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ ಎಂದು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆ ತಿಳಿಸಿದೆ. ಸ್ವಾಮಿ ಈಶ್ವರಚರಣದಾಸ್ ಮತ್ತು ಸ್ವಾಮಿ ಬ್ರಹ್ಮವಿಹಾರಿದಾಸ್ ನೇತೃತ್ವದ ಬಿಎಪಿಎಸ್ ಸಂಘಟನೆಯ ಪ್ರತಿನಿಧಿಗಳು ನವದೆಹಲಿಯ ನಿವಾಸದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಫೆಬ್ರವರಿ 14 ರಂದು ಮಂದಿರದ ಉದ್ಘಾಟನೆಗೆ ಆಹ್ವಾನವನ್ನು ನೀಡಿದರು ಎಂದು ಸ್ವಾಮಿನಾರಾಯಣ ಸಂಸ್ಥೆಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅರಬ್ ದೇಶದಲ್ಲಿ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪಿಎಂ […]

8 ಮಾಜಿ ಭಾರತೀಯ ನೌಕಾಪಡೆಯ ಸಿಬಂದಿಗಳ ಮರಣದಂಡನೆಗೆ ತಡೆ ನೀಡಿದ ಕತಾರ್: ಭಾರತದ ರಾಜತಾಂತ್ರಿಕ ಪ್ರಯತ್ನಕ್ಕೆ ಮೊದಲ ಗೆಲುವು

ನವದೆಹಲಿ: ಅಕ್ಟೋಬರ್‌ ತಿಂಗಳಿನಲ್ಲಿ ಕತಾರ್ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನೌಕಾಪಡೆಯ ಸಿಬಂದಿಗಳ ಮರಣದಂಡನೆ ಶಿಕ್ಷೆಯನ್ನು ಕಡಿತಗೊಳಿಸಲಾಗಿದೆ. ಇದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಂದ ಗೆಲುವಾಗಿದೆ. COP28 ಶೃಂಗಸಭೆಯ ಬದಿಯಲ್ಲಿ ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಇನ್ನೂ ಬಹಿರಂಗವಾಗದ ಆರೋಪಗಳಿಗಾಗಿ ಮರಣದಂಡನೆಗೊಳಗಾಗಿರುವರು ಕಡಿತಗೊಂಡ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಭಾರತ ಸರ್ಕಾರ ತಿಳಿಸಿದೆ. ಮುಂದಿನ ಕ್ರಮಗಳನ್ನು ನಿರ್ಧರಿಸಲು ಕಾನೂನು […]