ಮಲ್ಪೆ: ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ ಮತ್ತು ಆಹಾರ ಮಳಿಗೆ ಪ್ರದರ್ಶನ

ಉಡುಪಿ: ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ – 2024 ರ ಅಂಗವಾಗಿ ಗ್ರಾಹಕರಲ್ಲಿ ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ ಹಾಗೂ ಸಿರಿಧಾನ್ಯ ಆಹಾರ ಮಳಿಗೆಗಳ ಪ್ರದರ್ಶನ ಕಾರ್ಯಕ್ರಮವು ಡಿಸೆಂಬರ್ 31 ರಂದು ಸಂಜೆ 4.30 ಕ್ಕೆ ಮಲ್ಪೆ ಬೀಚ್ ನಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ನಿಯೋಜಿತ ಸ್ಥಳದಲ್ಲಿ ಹಾಜರಿರುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ಕುವೆಂಪುರವರ ಸಾಹಿತ್ಯದ ಪರಿಕಲ್ಪನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ಅಪರ ಜಿಲ್ಲಾಧಿಕಾರಿ

ಉಡುಪಿ: ಇಡೀ ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯದ ಪರಿಕಲ್ಪನೆಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು. ಅವರು ಇಂದು ನಗರದ ಸರಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಪ್ರಯುಕ್ತ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು […]

ಕಾಪು: ಕೋಳಿ‌ ಅಂಕಕ್ಕೆ ದಾಳಿ – ಏಳು ಮಂದಿ ವಶಕ್ಕೆ

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ಅಕ್ರಮವಾಗಿ ಕೋಳಿಯಂಕ ನಡೆಯುತ್ತಿದ್ದ ಕಾಪು ಮಲ್ಲಾರಿನ ಗರಡಿ ಪ್ರದೇಶಕ್ಕೆ ದಾಳಿ ಮಾಡಿದ ಕಾಪು ಪೊಲೀಸರು ಒಂಭತ್ತು ಕೋಳಿ ಸಹಿತ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್ ಬಲೆಗೆ ಬಿದ್ದವರು ಕೈಪುಂಜಾಲು ನಿವಾಸಿಗಳಾದ ವಿಜಿಸ್ಟನ್(42), ಫೆಡ್ರಿಕ್ ಅನ್ಮಣ್ಣ(32), ಕಟ್ ಹೌಸ್ ಮಲ್ಲಾರು ನಿವಾಸಿ ಸಂದೇಶ್(37), ಬೆಳಪು ನಿವಾಸಿ ನಿತಿನ್(30), ಇನ್ನಂಜೆ ನಿವಾಸಿ ಅಭಿಷೇಕ್ (21), ಉಡುಪಿ ಕೊಡವೂರು ನಿವಾಸಿ ಸಚಿನ್ ಕೋಟ್ಯಾನ್ (26) ಹಾಗೂ ಮಲ್ಲಾರು ನಿವಾಸಿ […]

ಕಾಪು: ನಾಳೆ(ಡಿ.30) ಮೀನು ಮಾರಾಟ ಫೆಡರೇಶನ್ ನ ಬ್ಯಾಂಕಿಂಗ್ ವಿಭಾಗ ಹಾಗೂ ಮತ್ಸ್ಯ ಕ್ಯಾಂಟೀನ್ ಉದ್ಘಾಟನೆ

ಕಾಪು: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನ ಕಾಪು ಶಾಖೆಯ ಬ್ಯಾಂಕಿಂಗ್ ವಿಭಾಗ ಮತ್ತು ಮತ್ಸ್ಯ ಕ್ಯಾಂಟೀನ್ ಇದರ ಉದ್ಘಾಟನೆಯು ಡಿ.30 ರಂದು ಮಧ್ಯಾಹ್ನ 3 ಗಂಟೆಗೆ ಕಾಪು ತಾಲೂಕು ಕಚೇರಿ ಬಳಿಯ ಮತ್ಸ್ಯ ಸೌಧದಲ್ಲಿ ಜರಗಲಿದೆ ಎಂದು ಫೆಡರೇಶನ್ ನ ಅಧ್ಯಕ್ಷ, ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ.ಜಿ.ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ […]

ಗ್ರಾಹಕರಿಗೆ ಶುಭ ಸುದ್ದಿಯ ಸೂಚನೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 10 ರೂ ನಷ್ಟು ಇಳಿಸಲು ಕೇಂದ್ರ ಸರ್ಕಾರದ ಚಿಂತನೆ

ನವದೆಹಲಿ: ದೇಶಾದ್ಯಂತ ಗ್ರಾಹಕರಿಗೆ ಸಂತೋಷದ ಸುದ್ದಿಯಾಗಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಭಾರೀ ಕಡಿತವನ್ನು ಮಾಡಲು ಯೋಜಿಸುತ್ತಿದೆ. ಈ ಕ್ರಮವು ಮುಂದಿನ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬರುವ ನಿರೀಕ್ಷೆಯಿದೆ. ಪ್ರಸ್ತುತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ, ಇದು ಭಾರತದಲ್ಲಿ ಇಂಧನ ಬೆಲೆಗಳನ್ನು ಕಡಿತಗೊಳಿವ ನಿರ್ಧಾರಕ್ಕೆ ಕಾರಣವಾಗಿದೆ. ಕೇಂದ್ರ ಹಣಕಾಸು ಸಚಿವಾಲಯವು ಶೀಘ್ರದಲ್ಲೇ ಬೆಲೆ ಕಡಿತವನ್ನು ಮಾಡಲಿದೆ ಎಂದು ನ್ಯೂಸ್ […]