ದಿನಪತ್ರಿಕೆ ವಿತರಕರಿಗೆ ವಿಮಾ ಯೋಜನೆ: ನೋಂದಣಿಗೆ ಸೂಚನೆ
ಉಡುಪಿ: ಕಾರ್ಮಿಯ ಇಲಾಖೆಯು ದಿನಪತ್ರಿಕೆ ವಿತರಕ ಕಾರ್ಮಿಕರಿಗೆ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಇ-ಶ್ರಮ್ ನಲ್ಲಿ ನೋಂದಣಿಯಾದ ದಿನಪತ್ರಿಕೆ ವಿತರಕ ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. 16 ರಿಂದ 59 ವರ್ಷದೊಳಗಿನ ದಿನಪತ್ರಿಕೆ ವಿತರಕ ಕಾರ್ಮಿಕರು ಇದುವರೆಗೂ ಇ-ಶ್ರಮ್ ನಲ್ಲಿ ನ್ಯೂಸ್ ಪೇಪರ್ ಬಾಯ್ ಎಂದು ನೋಂದಣಿ ಮಾಡದೇ ಇದ್ದರೆ, ಈ ಕೂಡಲೇ ಇ-ಶ್ರಮ್ ಪೋರ್ಟಲ್ www.eshram.gov.in ನಲ್ಲಿ ಸ್ವಯಂ ಆಗಿ ಅಥವಾ ಹತ್ತಿರದ ಸೇವಾ ಕೇಂದ್ರಗಳಲ್ಲಿ […]
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ವೀಳ್ಯ ನೀಡುವ ಮೂಲಕ ಸಮ್ಮೇಳನಕ್ಕೆ ಆಹ್ವಾನ
ಉಡುಪಿ: 14ನೆ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷರಾದ ಎಚ್. ಶಾಂತರಾಜ ಐತಾಳ್ ಅವರನ್ನು ಸ್ವಗೃಹದಲ್ಲಿ ಡಿಸೆಂಬರ್ 22 ಶುಕ್ರವಾರದಂದು ವೀಳ್ಯ ನೀಡುವ ಮೂಲಕ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಡಿಸೆಂಬರ್ 30ರಂದು ಮಣಿಪಾಲದ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನಡೆಸಲಾಗುವುದು ಎಂದು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್. ಪಿ ತಿಳಿಸಿದರು. ಈ ಸಂದರ್ಭದಲ್ಲಿ ರಾಗಿಣಿ ಎಸ್ ಐತಾಳ್, ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಮಾಜಿ ಅಧ್ಯಕ್ಷ ಡಾ. ಗಣನಾಥ್ […]
ಕಣ್ಣೀರಿಟ್ಟ ವಿನೇಶ್ ಫೋಗಟ್ : ಮಹಿಳಾ ಕುಸ್ತಿಪಟುಗಳು ಕಿರುಕುಳ ಎದುರಿಸುವುದು ಮುಂದುವರಿಯಲಿದೆ ಎಂದು ಹೇಳಿಕೆ
ಹೊಸದಿಲ್ಲಿ: “ಫೆಡರೇಷನ್ ಅಧ್ಯಕ್ಷರಾಗಿ ಸಂಜಯ ಸಿಂಗ್ ಆಯ್ಕೆಯಾಗಿರುವುದರಿಂದ ಮಹಿಳಾ ಕುಸ್ತಿಪಟುಗಳು ಕಿರುಕುಳ ಎದುರಿಸುವುದು ಮುಂದುವರಿಯಲಿದೆ,” ಎಂದು ವಿನೇಶ್ ಫೋಗಟ್ ಹೇಳಿದರು. “ದೇಶದಲ್ಲಿ ನ್ಯಾಯ ಹೇಗೆ ಪಡೆದುಕೊಳ್ಳುವುದು ಎಂದು ತಿಳಿದಿಲ್ಲ,” ಎಂದು ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆಯಾಗಿರುವ ಫೋಗಟ್ ಹೇಳಿದರು. ಭಾರತದ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿದ ಕುಸ್ತಿಪಟು ವಿನೇಶ್ ಫೋಗಟ್, ಗುರುವಾರ ಫೆಡರೇಷನ್‌ಗೆ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಗೆಲುವು […]
‘ಲೋಕಸಭಾ ಚುನಾವಣೆ’ಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ 2024ರ ಜನವರಿಯಲ್ಲಿ ‘ಬಿಡುಗಡೆ’
ನವದೆಹಲಿ: ಈ ಬಾರಿ ಕೂಡ ಮೋದಿಯೇ ಎನ್‌ಡಿಎ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿದ್ದು, ದೇಶದಲ್ಲಿ ಮೊದಲ ಬಾರಿಗೆ ಮೂರನೇ ಬಾರಿಗೆ ಹ್ಯಾಟ್ರಿಕ್ ಪ್ರಧಾನಿಯಾಗುವುದಕ್ಕೆ ನರೇಂದ್ರ ಮೋದಿಯವರು ಕೂಡ ಮುಂದಾಗಿದ್ದಾರೆ. 2024ರ ಜನವರಿಯಲ್ಲಿ ‘ಲೋಕಸಭಾ ಚುನಾವಣೆ’ಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ‘ಬಿಡುಗಡೆ’ ಮಾಡಲಿದೆ ಎನ್ನಲಾಗಿದೆ. ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಹುಮ್ಮಸ್ಸಿನಲ್ಲಿರುವ ಬಿಜೆಪಿಯು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಎಲ್ಲಾ ಸಿದ್ದತೆಯನ್ನು ನಡೆಸಿದೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಿಗೆ ಲೋಕಸಭಾ […]
ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಹಿನ್ನೆಲೆ : ತುರ್ತು ಸಭೆ ಕರೆದ ಡಿಸಿಎಂ
ಕೆಲ ದಿನಗಳ ಹಿಂದಷ್ಟೇ ಕೋಲಾರದ ಮಾಲೂರಿನಲ್ಲಿ ಶಾಲಾ ಮಕ್ಕಳನ್ನು ಶೌಚಗುಂಡಿಗೆ ಇಳಿಸಿದ ಪ್ರಕರಣ ಬೆಳಕಿಗೆ ಬಂದಿತ್ತು.ಈ ಪ್ರಕರಣ ಮಾಸುವ ಮುನ್ನವೇ ಇಂದು ಬೆಂಗಳೂರಿನ ಅಂದ್ರಹಳ್ಳಿ ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಟಾಯ್ಲೆಟ್ ತೊಳೆಸಲಾಗಿದೆ. ರಾಜ್ಯದಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ತೊಳೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿ, ಶಿಕ್ಷಣ ಇಲಾಖೆ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಶೌಚಾಲಯ ತೊಳೆಸುವುದು ಸರಿಯಲ್ಲ. ಈ ಅಧಿಕಾರವನ್ನು ಯಾವ ಶಿಕ್ಷಕರಿಗೂ ನೀಡಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ವರದಿ […]