ಇಸ್ರೊ ಅಧ್ಯಕ್ಷ ಸೋಮನಾಥ್ ಹೇಳಿಕೆ : 2024ರ ಚಂದ್ರಯಾನಕ್ಕಾಗಿ ನಾಲ್ವರು IAF ಪೈಲಟ್​ಗಳ ನಿಯೋಜನೆ

ತಿರುವನಂತಪುರಂ : ಭಾರತೀಯ ವಾಯುಪಡೆಯ ನಾಲ್ವರು ಪೈಲಟ್​ಗಳನ್ನು ಪರೀಕ್ಷಾರ್ಥ ಗಗನಯಾತ್ರಿಗಳಾಗಿ ಆಯ್ಕೆ ಮಾಡಲಾಗಿದೆ.2040ರ ವೇಳೆಗೆ ಮೊದಲ ಬಾರಿಗೆ ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಕಳುಹಿಸುವ ಯೋಜನೆಯ ಸಿದ್ಧತೆ ವೇಗವಾಗಿ ನಡೆಯುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎಸ್.2040ರ ವೇಳೆಗೆ ಚಂದ್ರನ ಮೇಲೆ ಮಾನವರನ್ನು ಕಳುಹಿಸುವ ಯೋಜನೆ ವೇಗವಾಗಿ ಸಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಸೋಮನಾಥ್ ಹೇಳಿದ್ದಾರೆ. ದೇಶದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ ಗಗನಯಾನವು ಮಾನವ-ರೇಟೆಡ್ (ಮಾನವರನ್ನು ಸುರಕ್ಷಿತವಾಗಿ ಸಾಗಿಸುವ ಸಾಮರ್ಥ್ಯ) ಉಡಾವಣಾ ವಾಹನ (ಎಚ್‌ಎಲ್ವಿಎಂ 3), ಕ್ರೂ […]

ಬೈಂದೂರು: ಡಿ. 13 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ

ಬೈಂದೂರು: ಉಡುಪಿ ಲೋಕಾಯುಕ್ತ ವಿಭಾಗದ ವತಿಯಿಂದ ಜಿಲ್ಲಾ ಲೋಕಾಯುಕ್ತ ವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ನಿರೀಕ್ಷಕರು ಮತ್ತು ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು ಡಿಸೆಂಬರ್ 13 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಬೈಂದೂರು ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ ನಡೆಸಲಿದ್ದಾರೆ. ಉಳಿದ ದಿನಗಳಲ್ಲಿಯೂ ಸಹ ಸಾರ್ವಜನಿಕರು ಅಹವಾಲುಗಳಿದ್ದಲ್ಲಿ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 0820-2958881, ಮೊ.ನಂ: 9364062581, ಪೊಲೀಸ್ ನಿರೀಕ್ಷಕರು-1 ದೂ.ಸಂಖ್ಯೆ: 0820-2536661, ಮೊ.ನಂ: 9364062695 ಹಾಗೂ […]

ಬಿಳಿಗಡ್ಡೆಗೂ ಬಂತು ರಾಜಯೋಗ: ಸತತ ಏರಿಕೆಯ ಹಾದಿಯಲ್ಲಿ ಬೆಳ್ಳುಳ್ಳಿ

ಬೆಂಗಳೂರು: ಟೊಮೆಟೊ ಆ ಬಳಿಕ ಈರುಳ್ಳಿ ಇದೀಗ ಬೆಳ್ಳುಳ್ಳಿಗೂ ರಾಜಯೋಗ ಬಂದಿದೆ. ಬೆಳ್ಳುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೆಲವೆಡೆ ಕಿಲೋ ಬೆಳ್ಳುಳ್ಳಿ 400 ರೂ. ತಲುಪಿದೆ ತಲುಪಿದೆ. ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಬೆಳೆಗಳು ಹಾನಿಗೀಡಾಗಿದ್ದು ಬೆಳ್ಳುಳ್ಳಿ ಬೆಲೆ ಏರಿಕೆಯತ್ತ ಸಾಗಿದೆ. ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೂ ಬೆಲೆ ಏರಿಕೆ ಜಾರಿಯಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ 6 ವಾರಗಳಿಂದ ಬೆಳ್ಳುಳ್ಳಿ ಬೆಲೆ ದುಪ್ಪಟ್ಟಾಗಿದೆ. ವರದಿಗಳ ಪ್ರಕಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು […]

ಕುಂದಾಪುರ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ಹುದ್ದೆಗಾಗಿ ಅರ್ಜಿ ಆಹ್ವಾನ

ಕುಂದಾಪುರ: ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ಹೆರಿಗೆ ತಜ್ಞರು-01 ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ರಾಷ್ಟೀಯ ಆರೋಗ್ಯ ಅಭಿಯಾನ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ. ಸಂಘದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿದಿಯೂರು ಹೋಟೆಲ್ ವತಿಯಿಂದ ಡಿ. 27 ರವರೆಗೆ ಗೀತಾ ಪ್ರವಚನ ಕಾರ್ಯಕ್ರಮ

ಉಡುಪಿ: ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ, ಕಿದಿಯೂರು ಹೋಟೆಲ್ ಪ್ರಾಯೋಜಕತ್ವದಲ್ಲಿ ಗೀತಾ ಜಯಂತಿ ಪ್ರಯುಕ್ತ 26 ನೇ ವರ್ಷದ ಪ್ರವಚನ ಕಾರ್ಯಕ್ರಮವು ವಿದ್ವಾನ್ ಬ್ರಹ್ಮಣ್ಯಾಚಾರ್ಯ ಇವರಿಂದ ಡಿ.10 ರಿಂದ 27 ರವರೆಗೆ 18 ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 7ರ ವರಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಜೀವನ ಪಾವನವಾಗಲು ಗೀತೆ ಸಹಕಾರಿ. ಇಂತಹ ಪ್ರವಚನಗಳ ಮೂಲಕ ಶ್ರೀಕೃಷ್ಣನ ಸಂದೇಶ ಎಲ್ಲರ […]