ಉದ್ಯಮಿ ನಂದ್ಯಾಲ ರಘುವೀರ್ ಶೆಣೈ ಉಡುಪಿ ಭೇಟಿ

ಉಡುಪಿ: ಉದ್ಯಮಿ ನಂದ್ಯಾಲ ರಘುವೀರ್ ಶೆಣೈ ಅವರು ಆಂಧ್ರ ಪ್ರದೇಶದ ಹೋಟೆಲ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ನಂತರ ಪ್ರಥಮ ಬಾರಿ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು ಅವರನ್ನು ಗೌರವಿಸಿ ಆಶೀರ್ವದಿಸಿದರು ಪರ್ಯಾಯದ ಆಹ್ವಾನ ಪತ್ರಿಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಆದಾಯ ಶಾಖಾ ಅಧಿಕಾರಿ ಆನಂದ ಶೆಟ್ಟಿ, ಉದ್ಯಮಿ ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ ಉಪಸ್ಥಿತರಿದ್ದರು.

ಹಮಾಸ್ ನ ಭದ್ರಕೋಟೆಗಳನ್ನು ಸುತ್ತುವರಿದ ಇಸ್ರೇಲ್: ಕದನ ಅಂತಿಮ ಹಂತಕ್ಕೆ; ತುರ್ತು ಸಭೆ ಕರೆದ ವಿಶ್ವಸಂಸ್ಥೆ

ಟೆಲ್ ಅವೀವ್: ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಉತ್ತರ ಗಾಜಾದಲ್ಲಿ ಪ್ಯಾಲೆಸ್ತೀನ್ ಬೆಂಬಲಿತ ಹಮಾಸ್‌ ಉಗ್ರಗಾಮಿಗಳನ್ನು ಮಟ್ಟ ಹಾಕುವ ಕಾರ್ಯ ತನ್ನ ಅಂತಿಮ ಘಟ್ಟದಲ್ಲಿದೆ ಎಂದು ಹೇಳಿದ್ದಾರೆ. ಜಬಲಿಯಾ ಮತ್ತು ಶೆಜೈಯಾ ಬೆಟಾಲಿಯನ್‌ ನ ಹಮಾಸ್ ಸದಸ್ಯರು ಶರಣಾಗುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. “ನಾವು ಜಬಾಲಿಯಾ ಮತ್ತು ಶೆಜೈಯಾದಲ್ಲಿನ ಹಮಾಸ್‌ನ ಅಂತಿಮ ಭದ್ರಕೋಟೆಗಳನ್ನು ಸುತ್ತುವರೆದಿದ್ದೇವೆ, ಅಜೇಯವೆಂದು ಪರಿಗಣಿಸಲ್ಪಟ್ಟ ಬೆಟಾಲಿಯನ್‌ಗಳು, ನಮ್ಮೊಂದಿಗೆ ಹೋರಾಡಲು ವರ್ಷಗಳ ಕಾಲದಿಂದ ಸಿದ್ಧತೆ ನಡೆಸಿವೆ, ಈಗ ಅವು ಕಿತ್ತುಹಾಕಲ್ಪಡುವ ಅಂಚಿನಲ್ಲಿದೆ,” ಎಂದು ಗ್ಯಾಲಂಟ್ […]

ಬಂಟ್ವಾಳ: ಮಡಿವಾಳರ ಸಂಘದ ವಾರ್ಷಿಕ ಕ್ರೀಡೋತ್ಸವ ಸಂಪನ್ನ

ಬಂಟ್ವಾಳ: ಸಾಮಾಜಿಕ ಕಾಳಜಿ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವ ಅಗತ್ಯವಿದೆ. ಕ್ರೀಡೋತ್ಸವ ಸಮಾಜವನ್ನು ಮತ್ತಷ್ಟು ಒಗ್ಗೂಡಿಸುತ್ತದೆ ಎಂದು ಮಂಗಳೂರು ವಿಶೇಷ ಆರ್ಥಿಕ ವಲಯ ಪ್ರಬಂಧಕ ಯೋಗೀಶ ಕಲಸಡ್ಕ ಅಭಿಪ್ರಾಯಪಟ್ಟರು. ಅವರು ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ಇದರ 32ನೇ ವಾರ್ಷಿಕ ಮಹೋತ್ಸವ ಪ್ರಯುಕ್ತ ಮಡಿವಾಳ ಯುವ ಬಳಗ ಪ್ರಾಯೋಜಕತ್ವದ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲಾ ಸರಕಾರಿ ಪ್ರಧಾನ ವಕೀಲ ನವೀನ್ ಕುಮಾರ್ ಎಂ.ಜಿ. ಮಾತನಾಡಿ, ಶುಭಹಾರೈಸಿದರು. ಸಂಘದ ಅಧ್ಯಕ್ಷ ಎನ್.ಕೆ. ಶಿವ ಅಧ್ಯಕ್ಷತೆ ವಹಿಸಿದರು. […]

ಕುತೂಹಲಕ್ಕೆ ತೆರೆ ಎಳೆದ ಭಾಜಪ: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಆಯ್ಕೆ

ಭೋಪಾಲ್: ಮೋಹನ್ ಯಾದವ್ ಅವರು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷವು ಘೋಷಿಸಿದ್ದು, ಹಲವು ದಿನಗಳ ಊಹಾಪೋಹಗಳಿಗೆ ತೆರೆ ಎಳೆದಿದೆ. ಉಜ್ಜಯಿನಿಯಿಂದ ಮೂರು ಬಾರಿ ಶಾಸಕರಾಗಿದ್ದ 58 ವರ್ಷದ ಯಾದವ್ ಅವರು ಶಿವರಾಜ್ ಸಿಂಗ್ ಚೌಹಾಣ್ ಅವರ ಸಚಿವ ಸಂಪುಟದ ಭಾಗವಾಗಿದ್ದರು. ಜಗದೀಶ್ ದೇವದಾ ಮತ್ತು ರಾಜೇಂದ್ರ ಶುಕ್ಲಾ ಉಪಮುಖ್ಯಮಂತ್ರಿಗಳಾಗಿ ಹಾಗೂ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. “ನಾನು ಪಕ್ಷದ ಸಣ್ಣ ಕಾರ್ಯಕರ್ತ, ನಿಮ್ಮೆಲ್ಲರಿಗೂ, ರಾಜ್ಯ ನಾಯಕತ್ವ ಮತ್ತು […]