ಛತ್ತೀಸ್‌ಗಢದ ಮೊದಲ ಬುಡಕಟ್ಟು ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ: ಮಧ್ಯಪ್ರದೇಶ ಹಾಗೂ ರಾಜಸ್ಥಾನ ಮು.ಮಂ. ಘೋಷಣೆ ಶೀಘ್ರ

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ವೀಕ್ಷಕರು ಮಧ್ಯಪ್ರದೇಶದ ಭೋಪಾಲ್‌ಗೆ ತಲುಪಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರ ರಾಜ್ಯಕ್ಕೆ ಮುಖ್ಯಮಂತ್ರಿ ಹೆಸರನ್ನು ನಿರ್ಧರಿಸಲು ಸಭೆ ನಡೆಯಲಿದೆ. ರಾಜಸ್ಥಾನ ಸಿಎಂ ಬಗ್ಗೆಯೂ ಕುತೂಹಲ ಮುಂದುವರಿದಿದ್ದು, ನಾಳೆ ಬಿಜೆಪಿ ಸಭೆ ನಡೆಯಲಿದೆ. ಮಧ್ಯಪ್ರದೇಶದ ಬಿಜೆಪಿ ವೀಕ್ಷಕರು, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿ ಸಂಸದ ಕೆ ಲಕ್ಷ್ಮಣ್ ಅವರು ಭೋಪಾಲ್‌ನಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದರು. ಅವರನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬರಮಾಡಿಕೊಂಡರು. ರಕ್ಷಣಾ ಸಚಿವ […]

ಮೂಡಬಿದಿರೆ: ಡಿ.14 ರಿಂದ 17 ರವರೆಗೆ ನಡೆಯಲಿದೆ ಆಳ್ವಾಸ್ ವಿರಾಸತ್ 2023

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ಕಾರ್ಯಕ್ರಮವು ಡಿ.14 ರಿಂದ 17ರವರೆಗೆ ಮೂಡಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದೊಂದಿಗೆ ನಡೆಯುವ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ […]

ಜಮ್ಮು-ಕಾಶ್ಮೀರ 370 ನೇ ವಿಧಿ ರದ್ದತಿಗೆ ಸುಪ್ರೀಂ ಮೊಹರು: 370 ನೇ ವಿಧಿ ತಾತ್ಕಾಲಿಕ ನಿಬಂಧನೆ; ಶೀಘ್ರವೆ ಚುನಾವಣೆ ನಡೆಸಿ ಎಂದ ಮುಖ್ಯ ನ್ಯಾಯಮೂರ್ತಿಗಳು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಲಾಗಿದ್ದು, ಇಂದು ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿದೆ. 370 ನೇ ವಿಧಿ ತಾತ್ಕಾಲಿಕ ನಿಬಂಧನೆಯಾಗಿದೆ. ರಾಷ್ಟ್ರಪತಿ ಆಳ್ವಿಕೆಯಲ್ಲಿ ರಾಜ್ಯದ ಪರವಾಗಿ ಕೇಂದ್ರವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸಿಜೆಐ ಚಂದ್ರಚೂಡ್ ಸೋಮವಾರ ತಮ್ಮ ತೀರ್ಪನ್ನು ಓದುವಾಗ ಹೇಳಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ […]

ಉಡುಪಿ ಭಾರತ್‌ ಮಾರ್ಕೆಟಿಂಗ್‌ 16ನೇ ವರ್ಷಕ್ಕೆ ಪಾದಾರ್ಪಣೆ: ಎಲೆಕ್ಟ್ರಿಕಲ್ ಉಪಕರಣಗಳ ಮಾರಾಟದಲ್ಲಿ ಅತ್ಯಂತ ವಿಶ್ವಾಸಾರ್ಹತೆ ಹೊಂದಿದ ಸಂಸ್ಥೆ

ಉಡುಪಿ: ಉಡುಪಿಯ ಬನ್ನಂಜೆ ನಾರಾಯಣಗುರು ಸಂಕೀರ್ಣ ದಲ್ಲಿರುವ ಗುಣಮಟ್ಟದ ಅತ್ಯಾಧುನಿಕ ಬೃಹತ್‌ ಸಂಗ್ರಹದ ವಿದ್ಯುತ್‌ ಜೋಡಣೆ ಸಾಮಗ್ರಿಗಳ ಹವಾನಿಯಂತ್ರಿತ ಜಿಎಂ ಬ್ರ್ಯಾಂಡ್‌ ಶೋರೂಂ ‘ಭಾರತ್‌ ಮಾರ್ಕೆಟಿಂಗ್‌’ ಬ್ರ್ಯಾಂಡೆಡ್‌ ಎಲೆಕ್ಟ್ರಿಕಲ್ ಸರಕುಗಳ ಮಾರಾಟದ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿ ನೂತನ ಮನೆ, ಸಭಾಂಗಣ, ಮಾಲ್, ಮಳಿಗೆ, ಸಮುಚ್ಚಯ ನಿರ್ಮಾಣದಲ್ಲಿ ಬಳಸುವ ಜಿಎಂ, ಹ್ಯಾವೆಲ್, ಫಿನೊಲೆಕ್ಸ್‌, ವಿ-ಗಾರ್ಡ್‌, ಲಿಗ್ರೆಂಡ್‌, ಆರ್‌ಆರ್‌, ಲ್ಯೂಕರ್, ಹಿಲ್ಸ್ ಕ್ಯಾಬ್, ಪ್ಯಾಸೋಲೈಟ್, ಸ್ಟ್ಯಾಂಡರ್ಡ್ ಕಂಪೆನಿಗಳ ಕೇಬಲ್ಸ್, ವಯರ್, ಎಲ್ಇಡಿ ಫಿಟ್ಟಿಂಗ್ಸ್‌, ಹವೆಲ್ಸ್ ಕಂಪೆನಿಯ ಇಲೆಕ್ಟ್ರಿಕಲ್ ಸಾಮಗ್ರಿಗಳಾದ […]

ಶುಲ್ಕ ಪಾವತಿಸದ ಮೊಬೈಲ್ ಟವರ್‌ ಗಳ ಮೇಲೆ ದಂಡ ಪ್ರಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ರಾಜ್ಯದಾದ್ಯಂತ ಅಕ್ರಮವಾಗಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿರುವ ಸಂಸ್ಥೆಗಳಿಗೆ ದಂಡ ವಿಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಕ್ರಮವಾಗಿ ಟವರ್‌ಗಳನ್ನು ಅಳವಡಿಸಿರುವ ಟೆಲಿಕಾಂ ಸೇವಾ ಪೂರೈಕೆದಾರರಿಗೆ ರಾಜ್ಯ ಸರ್ಕಾರ ದಂಡ ವಿಧಿಸಬೇಕು. ಆ ಮೂಲಕ ರಾಜ್ಯವು 7,000 ಕೋಟಿ ರೂ. ಗಳನ್ನು ಸಂಗ್ರಹಿಸಬಹುದು ಎಂದು ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಬಾಬು ಅವರು ಪತ್ರ ಬರೆದ ನಂತರ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದ್ದಾರೆ. ಕರ್ನಾಟಕ ಇನ್‌ಸ್ಟಾಲೇಶನ್ ಆಫ್ ನ್ಯೂ ಟೆಲಿಕಮ್ಯುನಿಕೇಷನ್ ಇನ್ಫ್ರಾಸ್ಟ್ರಕ್ಚರ್ ಟವರ್ಸ್ ನಿಯಮಾವಳಿ […]