ಸಿಯಾಚಿನ್ ಗ್ಲೇಸಿಯರ್‌ನ 15 ಸಾವಿರ ಅಡಿ ಎತ್ತರದಲ್ಲಿ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿಯಾಗಿ ನಿಯೋಜನೆಗೊಂಡ ಕ್ಯಾ. ಫಾತಿಮಾ ವಾಸಿಮ್

ನವದೆಹಲಿ: ಉತ್ತರ ಭಾರತದ ಸಿಯಾಚಿನ್ ಗ್ಲೇಸಿಯರ್ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾಗಿದೆ.ಇದು ಇಂಡೋ-ಪಾಕ್ ನಿಯಂತ್ರಣ ರೇಖೆಯ ಸಮೀಪದಲ್ಲಿದೆ. ಇದರ ಎತ್ತರ 20,062 ಅಡಿ. ಭಾರತದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಹಿಮನದಿ ಇಲ್ಲಿ ಹರಿಯುತ್ತದೆ. ಈಗ ದೇಶದ ಹೆಣ್ಣು ಮಕ್ಕಳನ್ನೂ ಸಿಯಾಚಿನ್‌ನಲ್ಲಿ ನಿಯೋಜಿಸಲಾಗುತ್ತಿದೆ. ಕ್ಯಾಪ್ಟನ್ ಫಾತಿಮಾ ವಾಸಿಂ ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕಾರ್ಯಾಚರಣೆ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳಾ ಕ್ಯಾಪ್ಟನ್ ಫಾತಿಮಾ ವಾಸಿಂ ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ […]

ಕ್ರೇಜಿಸ್ಟಾರ್​ ವಿ.ರವಿಚಂದ್ರನ್ ಅವರಿಂದ ಅಪೂರ್ವ ನಿರ್ದೇಶನದ ‘ಓ ನನ್ನ ಚೇತನ’ ಚಿತ್ರದ ಟ್ರೇಲರ್​ ಅನಾವರಣ

ಮಕ್ಕಳ ಕುರಿತ ಕಥೆಯಾಧಾರಿತ ಈ ಸಿನಿಮಾದ ಟ್ರೇಲರ್​ ಅನ್ನು ಅವರು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಬಳಿಕ ಮಾತನಾಡಿದ ಕ್ರೇಜಿಸ್ಟಾರ್​, ‘ಓ ನನ್ನ ಚೇತನ’ ಸಿನಿಮಾದ ಟ್ರೇಲರ್​ ಪ್ರೇಮಲೋಕ, ಶಾಂತಿ ಕ್ರಾಂತಿಯ ಚಿತ್ರದ ಅದ್ಭುತ ಸನ್ನಿವೇಶಗಳನ್ನು ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್, ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ. ‘ಅಪೂರ್ವ’ ಕ್ರೇಜಿಸ್ಟಾರ್​ ವಿ.ರವಿಚಂದ್ರನ್​ ನಟಿಸಿ ನಿರ್ದೇಶಿಸಿದ ಸಿನಿಮಾ. ಈ ಚಿತ್ರದಲ್ಲಿ ಅಪೂರ್ವ ಎಂಬ ಪ್ರತಿಭಾವಂತ ಕಲಾವಿದೆಯನ್ನು ಕನ್ನಡ ಚಿತ್ರರಂಗಕ್ಕೆ […]

ಸಚಿವ ಸಿಂಧಿಯಾ ಹೇಳಿಕೆ : 2030ಕ್ಕೆ 42 ಕೋಟಿಗೆ ಏರಲಿದೆ ವಿಮಾನ ಪ್ರಯಾಣಿಕರ ಸಂಖ್ಯೆ

ರಾಜಮಂಡ್ರಿ : ರಾಜಮಂಡ್ರಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು, “ಇಂದು 14.5 ಕೋಟಿ ಇರುವ ವಿಮಾನ ಪ್ರಯಾಣಿಕರ ದಟ್ಟಣೆ 2030ರ ವೇಳೆಗೆ 42 ಕೋಟಿಗೆ ಬೆಳೆಯಲಿದೆ ಮತ್ತು ನಾಗರಿಕ ವಿಮಾನಯಾನವು ದೇಶದಲ್ಲಿ ಸಾರಿಗೆಗೆ ಅಡಿಪಾಯವಾಗಲಿದೆ” ಎಂದರು. 2030ರ ವೇಳೆಗೆ ಭಾರತದ ವಿಮಾನ ಪ್ರಯಾಣಿಕರ ಸಂಖ್ಯೆ 42 ಕೋಟಿಗೆ ಏರಿಕೆಯಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.ಭಾರತದ ವಿಮಾನ ಪ್ರಯಾಣಿಕರ ಸಂಖ್ಯೆ 2030ರ ವೇಳೆಗೆ 42 ಕೋಟಿಗೆ […]

ಗೋಕರ್ಣ ಪರ್ತಗಾಳಿ ಮಠಾಧೀಶರಿಂದ ಹಾರಾಡಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ

ಹಾರಾಡಿ: ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ಸ್ವಾಮೀಜಿಯವರು ಆದಿತ್ಯವಾರದಂದು ಹಾರಾಡಿ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನಕ್ಕೆ ಪ್ರಥಮ ಬಾರಿ ಭೇಟಿ ನೀಡಿದರು. ಶ್ರೀಗಳನ್ನು ವಿಧಿವತ್ ಧಾರ್ಮಿಕ ಪೂಜಾ ವಿಧಾನಗಳಿಂದ ಬರಮಾಡಿಕೊಳ್ಳಲಾಯಿತು. ಪ್ರಧಾನ ಅರ್ಚಕ ಮಂಜುನಾಥ ಭಟ್ ದೇವರಿಗೆ ಮಂಗಳಾರತಿ ಬೆಳಗಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಹೆಚ್. ಕೃಷ್ಣ ಗಡಿಯಾರ, ಮಂಡಳಿಯ ಸದಸ್ಯ ಮಾಧವರಾಯ ಪ್ರಭು, ಬಾಬುರಾಯ ಶೆಣೈ , ಶ್ರೀಕಾಂತ್ ಪೈ , ಡಾ. ಸತೀಶ್ ಪೈ , ಲಕ್ಷ್ಮಣ್ ಗಡಿಯಾರ, ಜಿ ಎಸ್ […]

ಭಾಷಣ ಸ್ಪರ್ಧೆ: ಶ್ರೀ ವೆಂ. ಪ. ಪೂ. ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಶ್ರೀ ಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ವತಿಯಿಂದ ಡಿ.10 ರಂದು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದಿವೀಶ್ ಪ್ರಥಮ ಸ್ಥಾನ, ತನುಶ್ರೀ ದ್ವಿತೀಯ ಸ್ಥಾನ ಹಾಗೂ ಭಗವದ್ಗೀತಾ ಕಂಠ ಪಾಠದಲ್ಲಿ ವರ್ಷಾ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.