ಧಾರವಾಡ ಜಿಲ್ಲೆಗೆ 50.298 ಕೋಟಿ ರೂ. ಗಳ ಮಧ್ಯಂತರ ಬೆಳೆ ವಿಮೆ ಮಂಜೂರು

ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲೆಯಲ್ಲಿ 63,566 ಜನ ರೈತರಿಗೆ 50.298 ಕೋಟಿ ರೂ.ಗಳ ಮಧ್ಯಂತರ ವಿಮೆ ಮಂಜೂರಾಗಿದೆ ಎಂದು ತಿಳಿಸಿದ್ದಾರೆ. ಜೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾ ನಾಳೆ (ಡಿಸೆಂಬರ್ 7) ಓಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.ನಿನ್ನೆ ಸಂಜೆ ನಡೆದ ‘ದಿ ಆರ್ಚೀಸ್’ ಪ್ರೀಮಿಯರ್ ಈವೆಂಟ್​ಬನಲ್ಲಿ ಬಾಲಿವುಡ್​​ ಸೂಪರ್​ ಸ್ಟಾರ್​ಗಳು ​​ ಭಾಗಿಯಾಗಿದ್ದರು.ಈ ಹಿನ್ನೆಲೆ ನಿನ್ನೆ (ಡಿಸೆಂಬರ್​ 5) ಮುಂಬೈನಲ್ಲಿ ‘ದಿ ಆರ್ಚೀಸ್’ ಪ್ರೀಮಿಯರ್ ಈವೆಂಟ್​ ಆಯೋಜನೆಗೊಂಡಿತ್ತು. ಬಚ್ಚನ್​​ ಮೊಮ್ಮಗ, ಕಿಂಗ್​​ ಖಾನ್​​​ […]

ಅಂಬೇಡ್ಕರ್ ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ; ಮಹಾಪರಿನಿರ್ವಾಣ ದಿನ

ನವದೆಹಲಿ : ಶೋಷಿತ ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಪಿಎಂ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಇಂದು ದೇಶಾದ್ಯಂತ ಮಹಾಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತದೆ. ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಸ್ಮರಣಾರ್ಥ ಇಂದು ದೇಶದಲ್ಲಿ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ಸಂಸತ್ತಿನ ಸಂಕೀರ್ಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿ ನಿಮಿತ್ತ ಶ್ರದ್ಧಾಂಜಲಿ […]

ಹೆಚ್ಚಿದ ಸಾವು ನೋವು, ಸುರಂಗಗಳಲ್ಲಿ ನೀರು ತುಂಬಿಸುತ್ತಿರುವ ಇಸ್ರೇಲ್​ : ರಕ್ತಸಿಕ್ತವಾದ ಖಾನ್​ ಯೂನಿಸ್​ ನಗರ

ಗಾಜಾ: ನೂರಾರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಮತ್ತು ಖಾಸಗಿ ಕಾರುಗಳಲ್ಲಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.ಆಂಬ್ಯುಲೆನ್ಸ್‌ಗಳು ಹತ್ತಾರು ಗಾಯಾಳುಗಳನ್ನು ನಾಸರ್ ಆಸ್ಪತ್ರೆಗೆ ಸಾಗಿಸಿದವು.ಗಾಜಾದ ಎರಡನೇ ಅತಿದೊಡ್ಡ ನಗರ ಖಾನ್ ಯೂನಿಸ್ ರಕ್ತಸಿಕ್ತವಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಇಸ್ರೇಲ್​ ನಡೆಸಿರುವ ಭಾರಿ ಬಾಂಬ್ ದಾಳಿಗೆ ಬೆಚ್ಚಿ ಬಿದ್ದಿದೆ. ಈ ದಾಳಿಯಲ್ಲಿ ಗಾಯಗೊಂಡಿದ್ದ ನೂರಾರು ಜನರನ್ನು ಆಂಬ್ಯುಲೆನ್ಸ್ ಮತ್ತು ಖಾಸಗಿ ಕಾರುಗಳಲ್ಲಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಗಾಜಾದ ಮೇಲಿನ ದಾಳಿಯನ್ನು ಇಸ್ರೇಲ್​ ಹೆಚ್ಚಿಸುತ್ತಿದೆ. ಗಾಜಾದ ಖಾನ್ ಯೂನಿಸ್ ಮೇಲೆ ಭಾರಿ ಬಾಂಬ್ ದಾಳಿ ನಡೆದಿದ್ದು, […]

2023ರ ವಿಕಿಪೀಡಿಯಾದ ಟಾಪ್​ 25 ಲೇಖನಗಳ ಪಟ್ಟಿ ಬಿಡುಗಡೆ: ಕ್ರಿಕೆಟ್​, ಬಾಲಿವುಡ್​ ಸಿನಿಮಾ, ಭಾರತದ ಬಗ್ಗೆ ಹೆಚ್ಚು ಸರ್ಚ್​​

ಸ್ಯಾನ್ ಫ್ರಾನ್ಸಿಸ್ಕೋ: 2023 ರಲ್ಲಿ ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಹೆಚ್ಚು ವೀಕ್ಷಿಸಿದ ಲೇಖನಗಳ ವಾರ್ಷಿಕ ಪಟ್ಟಿಯನ್ನು ವಿಕಿಮೀಡಿಯಾ ಫೌಂಡೇಶನ್ ಮಂಗಳವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮೊದಲನೇ ಸ್ಥಾನ ಚಾಟ್‌ಜಿಪಿಟಿ (AI) ಪಡೆದುಕೊಂಡರೆ, 2ನೇಯದು ಸಾವುಗಳ ಕುರಿತು ಮತ್ತು ಕ್ರಿಕೆಟ್‌ ಕ್ರೇಜ್​ ಮೂರನೇ ಸ್ಥಾನದಲ್ಲಿದೆ. ಹಾಗೇ ಸಿನಿಮಾ ಕುರಿತು ಹೆಚ್ಚಿನ ಹುಡುಕಾಟ ನಡೆಸಿದ್ದಾರೆ. ಹಾಲಿವುಡ್​ನ ಬಾರ್ಬಿಯಿಂದ ಹಿಡಿದು ಬಾಲಿವುಡ್‌ವರೆಗೆ ಮತ್ತು ದಿನದಿಂದ ದಿನಕ್ಕೆ ಬದಲಾಗುತ್ತಿರುವ ಪ್ರಪಂಚದ ಬಗ್ಗೆ ತಿಳಿದುಕೊಳ್ಳುವಲ್ಲಿ ಜನರು ಸಕ್ರಿಯರಾಗಿದ್ದಾರೆ ಎಂಬ ಅಂಶ ಈ ಪಟ್ಟಿಯಿಂದ ಹೊರಬಿದ್ದಿದೆ.ವಿಕಿಪೀಡಿಯಾದಲ್ಲಿ ಹೆಚ್ಚು […]

ಭಾರತದ ಮಹಿಳಾ, ಪುರುಷ ತಂಡಗಳಿಗೆ ಗೆಲುವಿನ ಸಿಹಿ : ಜೂನಿಯರ್ ಹಾಕಿ ವಿಶ್ವಕಪ್​

ಕೌಲಾಲಂಪುರ್/ಸ್ಯಾಂಟಿಯಾಗೊ: ಮಲೇಷ್ಯಾದಲ್ಲಿ ನಡೆಯುತ್ತಿರುವ ಪುರುಷರ ಜೂನಿಯರ್ ಹಾಕಿ ವಿಶ್ವಕಪ್​-2023ರಲ್ಲಿ ಭಾರತ ತಂಡ ಗೆಲುವಿನ ಶುಭಾರಂಭ ಕಂಡಿದೆ. ಮೊದಲ ಪಂದ್ಯದಲ್ಲಿ ಫಾರ್ವರ್ಡ್ ಆಟಗಾರ ಅರೈಜೀತ್ ಸಿಂಗ್ ಹುಂಡಾಲ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತದ ಜೂನಿಯರ್ ಪುರುಷರ ಹಾಕಿ ತಂಡವು ಏಷ್ಯಾ ತಂಡವಾದ ಕೊರಿಯಾವನ್ನು 4-2 ಗೋಲುಗಳ ಅಂತರದಿಂದ ಸೋಲಿಸಿತು. ಜೂನಿಯರ್ ಹಾಕಿ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಮಹಿಳಾ ಮತ್ತು ಪುರುಷ ತಂಡಗಳು ಗೆಲುವು ಸಾಧಿಸಿವೆ. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಪುರುಷರ ಪಂದ್ಯಾವಳಿಯಲ್ಲಿ ಭಾರತ ತಂಡ ಕೊರಿಯಾವನ್ನು 4-2 […]