ಇಸ್ರೋ : ಚಂದ್ರನ ಕಕ್ಷೆಯಿಂದ ಭೂ ಕಕ್ಷೆಗೆ ಮರಳಿದ ಚಂದ್ರಯಾನ-3ರ ಪ್ರೊಪಲ್ಷನ್​ ಮಾಡ್ಯೂಲ್​

ನವದೆಹಲಿ: ಚಂದ್ರನ ಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಿದ್ದ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಭೂಕಕ್ಷೆಗೆ ಸ್ಥಳಾಂತರಿಸುವ ವಿಶಿಷ್ಟ ಪ್ರಯೋಗದಲ್ಲಿ ಯಶಸ್ವಿಯಾಗಿದೆ.ಚಂದ್ರಯಾನ-3 ಯೋಜನೆಯಲ್ಲಿನ ವಿಕ್ರಮ್​ ಲ್ಯಾಂಡರ್​ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸಿ ಬಾಹ್ಯಾಕಾಶ ಸಂಶೋಧನೆಗಳಲ್ಲಿ ಚರಿತ್ರೆ ಸೃಷ್ಟಿಸಿದ್ದ ಇಸ್ರೋ, ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.ಚಂದ್ರನ ಸುತ್ತ ಕಾರ್ಯಾಚರಣೆ ನಡೆಸುತ್ತಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್ ಯಶಸ್ವಿಯಾಗಿ ಭೂಮಿಯ ಕಕ್ಷೆಗೆ ಮರಳಿದೆ. ಮಾಡ್ಯೂಲ್​ನಲ್ಲಿ ಹೆಚ್ಚುವರಿ ಇಂಧನ: ಚಂದ್ರಯಾನ-3ರ ಎಲ್ಲ ಯೋಜಿತ ಉದ್ದೇಶಗಳು ಸಂಪೂರ್ಣವಾಗಿ ಯಶಸ್ಸು […]

ವಿಜ್ಞಾನಿಗಳಿಂದ ನೀರಿನ ಮಾದರಿ ಸಂಗ್ರಹ :ವಿಶ್ವದ ಅತಿದೊಡ್ಡ ಮಂಜುಗಡ್ಡೆಯ ಮಾರ್ಗ ದಾಟಿದ ಬ್ರಿಟಿಷ್ ನೌಕೆ

ಲಂಡನ್ (ಬ್ರಿಟನ್​):ಆರ್‌ಆರ್‌ಎಸ್ ಸರ್ ಡೇವಿಡ್ ಅಟೆನ್‌ಬರೋ ನೌಕೆಯು, ತನ್ನ ಮೊದಲ ವೈಜ್ಞಾನಿಕ ಕಾರ್ಯಾಚರಣೆಗಾಗಿ ಅಂಟಾರ್ಟಿಕಾಕ್ಕೆ ತೆರಳಿದೆ. ಶುಕ್ರವಾರ ಅಂಟಾರ್ಟಿಕ್ ಪರ್ಯಾಯ ದ್ವೀಪದ ತುದಿಯಲ್ಲಿ A23a ಎಂಬ ನೌಕೆಯು, ಬೃಹತ್ ಮಂಜುಗಡ್ಡೆ ಇರುವ ಮಾರ್ಗವನ್ನು ದಾಟಿಕೊಂಡು ಹೋಯಿತು. ”ಬ್ರಿಟನ್‌ನ ಧ್ರುವೀಯ ಸಂಶೋಧನಾ ಹಡಗು ವಿಶ್ವದ ಅತಿದೊಡ್ಡ ಮಂಜುಗಡ್ಡೆಯ ಮಾರ್ಗವನ್ನು ದಾಟಿದೆ. ಈ ಹಡಗು ಅಂಟಾರ್ಟಿಕಾ ನೀರಿನಿಂದ ಹೊರಬರುತ್ತಿರುವಾಗ ಬೃಹತ್ ಪರ್ವತದ ಸುತ್ತಲಿನ ಸಮುದ್ರದ ನೀರಿನ ಮಾದರಿಗಳನ್ನು ಸಂಗ್ರಹಿಸಲು ವಿಜ್ಞಾನಿಗಳಿಗೆ ಅನುವು ಮಾಡಿಕೊಟ್ಟಿದೆ” ಎಂದು ಬ್ರಿಟಿಷ್ ಅಂಟಾರ್ಟಿಕ್ ಸಮೀಕ್ಷೆ ಸೋಮವಾರ […]

ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳಿಂದ ರಾಜ್ಯದ 63 ಕಡೆಗಳಲ್ಲಿ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ, ಲಂಚಕ್ಕೆ ಬೇಡಿಕೆಯ ದೂರುಗಳು ಬಂದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಹದಿಮೂರು ಅಧಿಕಾರಿಗಳ ಮನೆಗಳು, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿದೆ.ರಾಜ್ಯದ 63 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ.ಅಕ್ರಮ ಆಸ್ತಿಗಳಿಕೆಯ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ಸೇರಿ ರಾಜ್ಯದ 63 ಕಡೆ ದಾಳಿ ಮಾಡಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ 3 ಕಡೆ ದಾಳಿ: ಬೆಂಗಳೂರಿನಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. […]

19 ತಿಂಗಳ ಗರಿಷ್ಠ ಮಟ್ಟಕ್ಕೇರಿದ ಬಿಟ್ ಕಾಯಿನ್ ಮೌಲ್ಯ

ನವದೆಹಲಿ: ಬಿಟ್​ ಕಾಯಿನ್ ಭವಿಷ್ಯದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಬಹುದಾದರೂ ಅಲ್ಪಾವಧಿಯಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು ಎಂಬುದು ಕೆಲ ವಿಶ್ಲೇಷಕರ ಅಭಿಪ್ರಾಯವಾಗಿದೆ.ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೌಲ್ಯ 42,000 ಡಾಲರ್​ಗೆ ತಲುಪಿದೆ ಎಂದು ವರದಿಗಳು ಮಂಗಳವಾರ ತಿಳಿಸಿವೆ.ಬಿಟ್ ಕಾಯಿನ್ ಮೌಲ್ಯ 19 ತಿಂಗಳ ಗರಿಷ್ಠ ಮಟ್ಟಕ್ಕೇರಿದ್ದು, ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳುತ್ತಿದೆ.ಇದು ಬಿಟ್​ ಕಾಯಿನ್​ ಮೌಲ್ಯದ 19 ತಿಂಗಳ ಗರಿಷ್ಠ ಮಟ್ಟವಾಗಿದೆ. ಬಿಟ್ ಕಾಯಿನ್ ಮೌಲ್ಯದಲ್ಲಿ ಗರಿಷ್ಠ ಏರಿಕೆಯ ಕಾರಣದಿಂದ ಮೇ 2022ರ ನಂತರ ಇದೇ […]

ಹೈಕೋರ್ಟ್ : ಅರಣ್ಯಭೂಮಿಯಲ್ಲಿ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು: ಅಜ್ಜಂಪುರ ತಾಲೂಕಿನ ಬುಕ್ಕಂಬುದಿ ಗ್ರಾಮದ ನಿವಾಸಿಗಳಾದ ಎಸ್‌. ಶಿವಕುಮಾರ್‌ ಮತ್ತು ಡಿ. ಮಂಜುನಾಥ್‌ ಎಂಬುವರು ಸಲ್ಲಿಸಿದ್ದ ತಕರಾರು ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಜಮೀನನ್ನು ಸಕ್ರಮಗೊಳಿಸಲು ಕೋರಿ ಚಿಕ್ಕಮಗಳೂರಿನ ಇಬ್ಬರು ಖಾಸಗಿ ವ್ಯಕ್ತಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿ ಆದೇಶಿಸಿದೆ. ಒಮ್ಮೆ ಯಾವುದೇ ಜಾಗ ಅರಣ್ಯ ಇಲಾಖೆಗೆ ವರ್ಗಾವಣೆಯಾದ ನಂತರ, […]