ವಿಜ್ಞಾನಿಗಳಿಂದ ನೀರಿನ ಮಾದರಿ ಸಂಗ್ರಹ :ವಿಶ್ವದ ಅತಿದೊಡ್ಡ ಮಂಜುಗಡ್ಡೆಯ ಮಾರ್ಗ ದಾಟಿದ ಬ್ರಿಟಿಷ್ ನೌಕೆ

ಲಂಡನ್ (ಬ್ರಿಟನ್​):ಆರ್‌ಆರ್‌ಎಸ್ ಸರ್ ಡೇವಿಡ್ ಅಟೆನ್‌ಬರೋ ನೌಕೆಯು, ತನ್ನ ಮೊದಲ ವೈಜ್ಞಾನಿಕ ಕಾರ್ಯಾಚರಣೆಗಾಗಿ ಅಂಟಾರ್ಟಿಕಾಕ್ಕೆ ತೆರಳಿದೆ. ಶುಕ್ರವಾರ ಅಂಟಾರ್ಟಿಕ್ ಪರ್ಯಾಯ ದ್ವೀಪದ ತುದಿಯಲ್ಲಿ A23a ಎಂಬ ನೌಕೆಯು, ಬೃಹತ್ ಮಂಜುಗಡ್ಡೆ ಇರುವ ಮಾರ್ಗವನ್ನು ದಾಟಿಕೊಂಡು ಹೋಯಿತು. ”ಬ್ರಿಟನ್‌ನ ಧ್ರುವೀಯ ಸಂಶೋಧನಾ ಹಡಗು ವಿಶ್ವದ ಅತಿದೊಡ್ಡ ಮಂಜುಗಡ್ಡೆಯ ಮಾರ್ಗವನ್ನು ದಾಟಿದೆ. ಈ ಹಡಗು ಅಂಟಾರ್ಟಿಕಾ ನೀರಿನಿಂದ ಹೊರಬರುತ್ತಿರುವಾಗ ಬೃಹತ್ ಪರ್ವತದ ಸುತ್ತಲಿನ ಸಮುದ್ರದ ನೀರಿನ ಮಾದರಿಗಳನ್ನು ಸಂಗ್ರಹಿಸಲು ವಿಜ್ಞಾನಿಗಳಿಗೆ ಅನುವು ಮಾಡಿಕೊಟ್ಟಿದೆ” ಎಂದು ಬ್ರಿಟಿಷ್ ಅಂಟಾರ್ಟಿಕ್ ಸಮೀಕ್ಷೆ ಸೋಮವಾರ ತಿಳಿಸಿದೆ.ವಿಶ್ವದ ಅತಿ ದೊಡ್ಡ ಮಂಜುಗಡ್ಡೆ ಇತ್ತೀಚಿನ ಕೆಲವು ತಿಂಗಳುಗಳಿಂದ ತೇಲಲು ಪ್ರಾರಂಭಿಸಿದೆ.

ಗಾಳಿ ಮತ್ತು ಸಮುದ್ರದ ಪ್ರವಾಹಗಳಿಂದ ದಕ್ಷಿಣ ಸಾಗರಕ್ಕೆ ಚಲಿಸಲಿದೆ. ಬ್ರಿಟನ್‌ನ ‘ಆರ್‌ಆರ್‌ಎಸ್ ಸರ್ ಡೇವಿಡ್ ಅಟೆನ್‌ಬರೋ’ ಎಂಬ ಧ್ರುವ ಸಂಶೋಧನಾ ನೌಕೆಯು, ಬೃಹತ್ ಮಂಜುಗಡ್ಡೆಯ ಮಾರ್ಗವನ್ನು ದಾಟಿದೆ.ಅದರ ಸುತ್ತಲಿನ ಸಮುದ್ರದ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಬ್ರಿಟಿಷ್ ಅಂಟಾರ್ಟಿಕ್ ಸಮೀಕ್ಷೆ ತಿಳಿಸಿದೆ.

”ದಕ್ಷಿಣ ಜಾರ್ಜಿಯಾದ ಉಪ – ಅಂಟಾರ್ಟಿಕ್ ದ್ವೀಪದ ಕಡೆಗೆ ಚಲಿಸುವ ಸಾಮಾನ್ಯ ಮಾರ್ಗದಲ್ಲಿ ಬರುವ ಸಣ್ಣ ಮಂಜುಗಡ್ಡೆಗಳನ್ನು ತನ್ನತ್ತ ಸೆಳೆದುಕೊಂಡು ಈಗ ದೊಡ್ಡ ಮಂಜುಗಡ್ಡೆಯಾಗಿ ಪರಿವರ್ತನೆ ಆಗಿದ್ದು, ತೇಲುತ್ತಾ ಸಾಗುವ ಸಾಧ್ಯತೆಯಿದೆ” ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ”ವೆಡ್ಡೆಲ್ ಸಮುದ್ರದಲ್ಲಿ ಮಂಜುಗಡ್ಡೆಯು ಯೋಜಿತ ಮಾರ್ಗದಲ್ಲಿ ತೇಲುತ್ತಿದ್ದು, ಈ ಅವಕಾಶದ ಲಾಭವನ್ನು ಪಡೆಯಲು ನಾವು ಸರಿಯಾದ ತಂಡ ಹೊಂದಿದ್ದೇವೆ” ಎಂದು ಸಂಶೋಧನಾ ಹಡಗಿನ ಮುಖ್ಯ ವಿಜ್ಞಾನಿ ಆಂಡ್ರ್ಯೂ ಮೈಜರ್ಸ್ ತಿಳಿಸಿದರು.

”ಬೃಹತ್​ ಮಂಜಗಡ್ಡೆ ಇರುವ ಮಾರ್ಗದಲ್ಲಿ A23a ನೌಕೆ ಸಾಗುವಂತೆ ಮಾಡುವುದು ನಮ್ಮ ವಿಜ್ಞಾನಗಳ ಉದ್ದೇಶವಾಗಿತ್ತು. ಈ ಕಷ್ಟಕರ ಸಮಯದಲ್ಲಿ ನಮಗೆ ಯಾವುದೇ ಸಮಸ್ಯೆ ಆಗದಿರುವುದು ನಮ್ಮ ಅದೃಷ್ಟವೇ ಸರಿ. ಈ ಬೃಹತ್ ಮಂಜುಗಡ್ಡೆಯನ್ನು ವೀಕ್ಷಿಸಿರುವುದರಿಂದ ನಮಗೆ ಅದ್ಭುತ ಅನುಭವ ಆಗಿದೆ. ಅದು ಕಣ್ಣು ಹಾಯಿಸಿದಷ್ಟು ಬಹಳ ದೂರದವರೆಗೆ ವಿಸ್ತಾರವಾಗಿ ಕಾಣಿಸಿತು” ಎಂದು ಆಂಡ್ರ್ಯೂ ಮೈಜರ್ಸ್ ಆಶ್ಚರ್ಯ ವ್ಯಕ್ಯಪಡಿಸಿದರು.

ನ್ಯೂಯಾರ್ಕ್ ನಗರದ ಮೂರು ಪಟ್ಟು ಗಾತ್ರಕ್ಕೆ ಸಮನಾದ ಮತ್ತು ಗ್ರೇಟರ್ ಲಂಡನ್‌ನ ಎರಡು ಪಟ್ಟು ಹೆಚ್ಚು ಗಾತ್ರದ ಮಂಜುಗಡ್ಡೆಯು 1986ರಲ್ಲಿ ಅಂಟಾರ್ಟಿಕ್​ನ ಫಿಲ್ಚನರ್ ಐಸ್ ಶೆಲ್ಫ್‌ನಿಂದ ಬೇರ್ಪಟ್ಟ್ಟಿತ್ತು. ನಂತರ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ವೆಡ್ಡೆಲ್ ಸಮುದ್ರದಲ್ಲಿ ಇದೆ. ಇದು ಇತ್ತೀಚಿನ ಕೆಲವು ತಿಂಗಳುಗಳಿಂದ ತೇಲಲು ಪ್ರಾರಂಭಿಸಿದೆ. ಈಗ ದಕ್ಷಿಣ ಸಾಗರಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿರುವ ಮಂಜುಗಡ್ಡೆಯು ಗಾಳಿ ಮತ್ತು ಸಮುದ್ರದ ಪ್ರವಾಹಗಳ ಸಹಾಯದಿಂದ ತೇಲುತ್ತಿದೆ.

ಆರ್‌ಆರ್‌ಎಸ್ ಸರ್ ಡೇವಿಡ್ ಅಟೆನ್‌ಬರೋ ಹೆಸರಿನ ಬ್ರಿಟಿಷ್ ಹಡುಗಿನ ಮೂಲಕ 10 ದಿನಗಳವರೆಗೆ ವಿಜ್ಞಾನ ಪ್ರವಾಸ ಕೈಗೊಳ್ಳಲಾಗಿದೆ. ಇದು ಅಂಟಾರ್ಟಿಕ್ ಪರಿಸರ ವ್ಯವಸ್ಥೆಗಳು ಮತ್ತು ಸಮುದ್ರದ ಮಂಜುಗಡ್ಡೆಗಳು, ಸಾಗರ ಇಂಗಾಲದ ಚಕ್ರ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳನ್ನು ಅಧ್ಯಯನ ನಡೆಸಲು ಈ ಯೋಜನೆ ಹಾಕಿಕೊಳ್ಳಲಾಗಿದೆ. ಜೊತೆಗೆ ಹವಾಮಾನ ಬದಲಾವಣೆಯು ದಕ್ಷಿಣ ಸಾಗರ, ಅಲ್ಲಿ ವಾಸಿಸುವ ಜೀವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆಗಳು ಸಹಾಯ ಮಾಡುತ್ತವೆ. ಈ ಯೋಜನೆಗೆ 9 ಮಿಲಿಯನ್ ಪೌಂಡ್ (11.3 ಮಿಲಿಯನ್ ಡಾಲರ್​) ಮೀಸಲಿಡಲಾಗಿದೆ ಎಂದು ಬ್ರಿಟಿಷ್ ಅಂಟಾರ್ಟಿಕ್ ಸಮೀಕ್ಷೆ ಮಾಹಿತಿ ನೀಡಿದೆ.

ಸಮುದ್ರದ ಮೇಲ್ಮೈ ನೀರಿನ ಮಾದರಿ ಸಂಗ್ರಹ: ಹಡಗಿನಲ್ಲಿ ಕೆಲಸ ಮಾಡುವ ವಿಜ್ಞಾನಿ ಲಾರಾ ಟೇಲರ್ ಹಾಗೂ ತಂಡವು ಮಂಜುಗಡ್ಡೆಯ ಮಾರ್ಗದ ಸುತ್ತಲೂ ಸಮುದ್ರದ ಮೇಲ್ಮೈ ನೀರಿನ ಮಾದರಿಗಳನ್ನು ತೆಗೆದುಕೊಂಡಿತು. ಅದರ ಸುತ್ತಲೂ ಯಾವ ಜೀವಿಗಳು ರೂಪುಗೊಳ್ಳುತ್ತದೆ, ಮಂಜುಗಡ್ಡೆ ಮತ್ತು ಸಾಗರದಲ್ಲಿ ಇಂಗಾಲದಿಂದ ಹೇಗೆ ಪರಿಣಾಮ ಆಗುತ್ತದೆ ಎಂಬುದನ್ನು ನಿರ್ಧರಿಸಲು ಈ ನೀರಿನ ಮಾದರಿಗಳು ಸಹಾಯ ಮಾಡುತ್ತದೆ. ಈ ದೈತ್ಯ ಮಂಜುಗಡ್ಡೆ ಹಾದುಹೋಗುವ ಮಾರ್ಗದಲ್ಲಿರುವ ಕಡಿಮೆ ಉತ್ಪಾದಕ ಪ್ರದೇಶಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಗಳ ಅಧ್ಯಯನ ಮಾಡಲು ಸಹಾಯಕವಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.