ಹಸೆಮಣೆ ಏರಿದ ವಾಸುಕಿ ವೈಭವ್ : ಬಹುಕಾಲದ ಗೆಳತಿ ಬೃಂದಾ ವಿಕ್ರಮ್

ರಾಮಾ ರಾಮಾ ರೇ ಸಿನಿಮಾದ ಸಕ್ಸಸ್ ಜೊತೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ವಾಸುಕಿ ವೈಭವ್ ಅವರೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಬೃಂದಾ ವಿಕ್ರಮ್ ಜೊತೆ ವಾಸುಕಿ ವೈಭವ್ ಅವರ ಕಲ್ಯಾಣ ಜರುಗಿದೆ. ಬಹುಕಾಲದ ಗೆಳತಿ ಜೊತೆ ಬಹಳ ಸರಳವಾಗಿ ಹಿಂದೂ ಸಂಪ್ರದಾಯದ ಪ್ರಕಾರ ವಾಸುಕಿ ವೈಭವ್​ ಮದುವೆ ಆಗಿದ್ದಾರೆ.’ರಾಮಾ ರಾಮಾ ರೇ’ ಸಿನಿಮಾ ಮೂಲಕ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವಾಸುಕಿ ವೈಭವ್ ತಮ್ಮ ಬಹುಕಾಲದ […]

ವಾಟ್ಸ್​ಪ್ : ಮಾಸಿಕ 500 ಮಿಲಿಯನ್ ಬಳಕೆದಾರರನ್ನು ದಾಟಿದ ವಾಟ್ಸ್​ಪ್

ನವದೆಹಲಿ: ವಾಟ್ಸ್​ಆಯಪ್​ನಲ್ಲಿ ಜನ ತಾವು ಫಾಲೋ ಮಾಡುವ ಜನರು, ಸಂಸ್ಥೆಗಳು ಮತ್ತು ತಂಡಗಳಿಂದ ನಿರಂತರವಾಗಿ ಅಪ್ಡೇಟ್​ಗಳನ್ನು ಪಡೆಯಲು ಚಾನೆಲ್​ ಫೀಚರ್ ಹೊಸ ಮಾರ್ಗವಾಗಿದೆ.ಇತ್ತೀಚೆಗೆ ಆರಂಭಿಸಲಾದ ವಾಟ್ಸ್​ಆಯಪ್ ಚಾನೆಲ್​ ಫೀಚರ್ ಮಾಸಿಕ 500 ಮಿಲಿಯನ್ ಬಳಕೆದಾರರನ್ನು ಮೀರಿದೆ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜೂಕರ್​ಬರ್ಗ್ ಬುಧವಾರ ಘೋಷಿಸಿದರು.ಇತ್ತೀಚೆಗೆ ಜಾರಿಯಾದ ವಾಟ್ಸ್​​ಆಪ್ ಚಾನೆಲ್ 500 ಮಿಲಿಯನ್​ಗೂ ಅಧಿಕ ಸಕ್ರಿಯ ಬಳಕೆದಾರರನ್ನು ಪಡೆದು ಕೊಂಡಿದೆ. “ನಾವು ಚಾನೆಲ್ ಗಳಲ್ಲಿ ಸ್ಟಿಕ್ಕರ್ ಗಳನ್ನು ಪ್ರಾರಂಭಿಸಿದ್ದೇವೆ. ಬಳಕೆದಾರರು ತಾವು ಫಾಲೋ ಮಾಡುವ […]

ಮುರುಘಾ ಶ್ರೀ ಬಿಡುಗಡೆ: ಇಂದು ಚಿತ್ರದುರ್ಗ ಜೈಲಿನಿಂದ ಬಿಡುಗಡೆ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರು ಇಂದು ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.ಮುರುಘಾ ಶ್ರೀ ವಿರುದ್ಧದ ಎರಡು ಪೋಕ್ಸೋ ಪ್ರಕರಣಗಳ ಪೈಕಿ ಒಂದರಲ್ಲಿ ಈಗಾಗಲೇ ಜಾಮೀನು ದೊರೆತಿದೆ. ಚಿತ್ರದುರ್ಗ ಜೈಲಿನಿಂದ ಶ್ರೀಗಳು ನಿನ್ನೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಿತ್ರದುರ್ಗದ ಕೋರ್ಟ್​ಗೆ ಹಾಜರಾಗಿದ್ದರು. ಬುಧವಾರ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯ ಹೈಕೋರ್ಟ್​ ವಿಧಿಸಿದ್ದ ಷರತ್ತುಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಜಿಲ್ಲಾ ಕಾರಾಗೃಹದ ಅಧಿಕಾರಿಗಳಿಗೆ ಶ್ರೀಗಳನ್ನು […]

ಮೈಕ್ರೊಸಾಫ್ಟ್​: ಮಾನವರಂತೆ ಮಾತನಾಡುವ ಟೆಕ್ಸ್ಟ್​ ಟು ಸ್ಪೀಚ್​ ಪರಿಚಯ

ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ದೃಷ್ಟಿ ಸಾಮರ್ಥ್ಯದೊಂದಿಗೆ ಹೊಸ ಟೆಕ್ಸ್ಟ್​ – ಟು – ಸ್ಪೀಚ್ ವೈಶಿಷ್ಟ್ಯ ಪರಿಚಯಿಸಿದೆ.ಇದರ ಮೂಲಕ ಟೆಕ್ಸ್ಟ್​ ಅನ್ನು ಇನ್​ಪುಟ್​ ಮಾಡಿ ಅದರಂತೆ ಮಾತನಾಡುವ ಅವತಾರ್ ವಿಡಿಯೋಗಳನ್ನು ರಚಿಸಬಹುದು ಮತ್ತು ಮಾನವರ ಚಿತ್ರಗಳನ್ನು ಬಳಸಿಕೊಂಡು ತರಬೇತಿ ಪಡೆದ ನೈಜ – ಸಮಯದ ಸಂವಾದಾತ್ಮಕ ಬಾಟ್​ಗಳನ್ನು ನಿರ್ಮಿಸಬಹುದು. ಅಜುರ್ ಎಐ ಸ್ಪೀಚ್ ಟೆಕ್ಸ್ಟ್ ಎಂದು ಕರೆಯಲ್ಪಡುವ ಮತ್ತು ಸಾರ್ವಜನಿಕರಿಗೆ ಪರಿಶೀಲನೆಗೆ ಮುಕ್ತವಾಗಿರುವ ಈ ಸಾಫ್ಟ್​ವೇರ್ ಗ್ರಾಹಕರಿಗೆ 2 ಡಿ ಫೋಟೋರಿಯಲಿಸ್ಟಿಕ್ ಅವತಾರ್​ನಲ್ಲಿ ಮಾತನಾಡುವ ಸಂಶ್ಲೇಷಿತ […]

ತಮಿಳುನಾಡಿನ ವಿದ್ಯಾರ್ಥಿಯಿಂದ ಕಡಿಮೆ ಬಜೆಟ್​ನಲ್ಲಿ ವಾಯುಮಾಲಿನ್ಯ ಅಳೆಯುವ ಸಾಧನ ತಯಾರು

ಜಯಪ್ರಕಾಶ್ ತಮ್ಮ ಜಾಣ್ಮೆಯಿಂದ ಭೂಮಿಯ ಮೇಲ್ಮೈಯಿಂದ 10 ರಿಂದ 20 ಕಿಲೋಮೀಟರ್ ಒಳಗೆ ಟ್ರೋಪೋಸ್ಪಿಯರ್​ನಲ್ಲಿ ವಾಯುಮಾಲಿನ್ಯದ ಮಟ್ಟವನ್ನು ಪತ್ತೆಹಚ್ಚಬಹುದಾದ ಸಣ್ಣ ಉಪಗ್ರಹ ಅಭಿವೃದ್ಧಿಪಡಿಸಿದ್ದಾನೆ. ಕೋಟಿ ವೆಚ್ಚದ ಸಾಂಪ್ರದಾಯಿಕ ಉಪಗ್ರಹಗಳಿಗಿಂತ ಭಿನ್ನವಾಗಿ ಇದು ಕೇವಲ ಒಂದು ಸಾವಿರ ರೂಪಾಯಿಗಳ ಅಲ್ಪ ಬಜೆಟ್​ನಲ್ಲಿ ಉಪಗ್ರಹದ ಕಾರ್ಯಗಳನ್ನು ಮಾಡುತ್ತದೆ. ಚಹಾ ಮಾರುವವನ ಪುತ್ರ 16 ವರ್ಷದ ಜಯಪ್ರಕಾಶ್ ಎಂಬಾತ ಕಡಿಮೆ ಬಜೆಟ್ ಉಪಗ್ರಹವನ್ನು ಬಳಸಿಕೊಂಡು ವಾಯುಮಾಲಿನ್ಯ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಆಧುನಿಕ ಸಾಧನ ತಯಾರಿಸಿದ್ದಾರೆ. ವಿಜ್ಞಾನ ಶಿಕ್ಷಕ ರಾಮಚಂದ್ರನ್ ಮತ್ತು ಪರಣಿ […]