ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರಕ್ತದಾನ ಶಿಬಿರ

ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ, ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಕುಂದಾಪುರ ಘಟಕದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜಯಕರ ಶೆಟ್ಟಿ ಮತ್ತು ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸುಬ್ರಹ್ಮಣ್ಯ ಇವರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 100 ಕ್ಕೂ ಅಧಿಕ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ರಕ್ತದಾನ ಮಾಡಿದರು. ದೀಕ್ಷಾ ಎಚ್ ಡಿ ಎಫ್ ಸಿ ಬ್ಯಾಂಕ್ ಮ್ಯಾನೇಜರ್ , ಸೀತಾರಾಮ್ […]

ಇಂದು ಸಂಜೆ ಕೊಡವೂರು ತುಡರ್ ಗ್ರಾಮ ಸಮಿತಿ ವತಿಯಿಂದ ‘ತುಡರ್’ ಕಾರ್ಯಕ್ರಮ

ಕೊಡವೂರು: ಸಮಾಜದ ಎಲ್ಲಾ ಬಂಧುಗಳು ಸಾಮರಸ್ಯದಿಂದ ಬದುಕಬೇಕು, ಈ ಮೂಲಕ ದೇಶ ಮತ್ತು ಧರ್ಮ ಕಾರ್ಯವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ನ.11 ಶನಿವಾರದಂದು ಸಂಜೆ 5.30 ಕ್ಕೆ ಕೊಡವೂರು ವಾರ್ಡಿನ ಶಿವಾಜಿ ಪಾರ್ಕಿನಲ್ಲಿ ತುಡರ್ ಗ್ರಾಮ ಸಮಿತಿ ಕೊಡವೂರು ವತಿಯಿಂದ ತುಡರ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಲು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮಿಜಿ ಮತ್ತು ಕರ್ನಾಟಕ ರಾಜ್ಯದ ಭಾಜಪ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ ಬೌದ್ಧಿಕ ನೀಡಲು ಬರಲಿದ್ದು, […]