ಇಂದು ಸಂಜೆ ಕೊಡವೂರು ತುಡರ್ ಗ್ರಾಮ ಸಮಿತಿ ವತಿಯಿಂದ ‘ತುಡರ್’ ಕಾರ್ಯಕ್ರಮ

ಕೊಡವೂರು: ಸಮಾಜದ ಎಲ್ಲಾ ಬಂಧುಗಳು ಸಾಮರಸ್ಯದಿಂದ ಬದುಕಬೇಕು, ಈ ಮೂಲಕ ದೇಶ ಮತ್ತು ಧರ್ಮ ಕಾರ್ಯವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ನ.11 ಶನಿವಾರದಂದು ಸಂಜೆ 5.30 ಕ್ಕೆ ಕೊಡವೂರು ವಾರ್ಡಿನ ಶಿವಾಜಿ ಪಾರ್ಕಿನಲ್ಲಿ ತುಡರ್ ಗ್ರಾಮ ಸಮಿತಿ ಕೊಡವೂರು ವತಿಯಿಂದ ತುಡರ್ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಲು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮಿಜಿ ಮತ್ತು ಕರ್ನಾಟಕ ರಾಜ್ಯದ ಭಾಜಪ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ ಬೌದ್ಧಿಕ ನೀಡಲು ಬರಲಿದ್ದು, ಕಿರು ಶೋಭಾ ಯಾತ್ರೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೊಡವೂರು ವಾರ್ಡಿನ ನಗರಸಭಾ ಸದಸ್ಯ ಕೆ. ವಿಜಯ್ ಕೊಡವೂರು ತಿಳಿಸಿದ್ದಾರೆ.