ಪಾಕ್ ಗಡಿಯಿಂದ ಉಗ್ರರ ಒಳನುಸುಳುವಿಕೆಗೆ ಯತ್ನಿಸಿದ ಇಬ್ಬರ ಉಗ್ರರ ಹತ್ಯೆ
ಕುಪ್ವಾರ (ಜಮ್ಮು ಮತ್ತು ಕಾಶ್ಮೀರ): ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಉಗ್ರರು ನುಸುಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.ಕುಪ್ವಾರ ಜಿಲ್ಲೆಯ ಮಚ್ಚಲ್ ಸೆಕ್ಟರ್ನಲ್ಲಿ ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಇನ್ನಷ್ಟು ಉಗ್ರರು ನುಸುಳುತ್ತಿರುವ ಮಾಹಿತಿಯ ಮೇಲೆ ಕಾರ್ಯಾಚರಣೆ ಮುಂದುವರಿಸಲಾಗಿದೆ.ಪಾಕ್ ಗಡಿಯಿಂದ ಉಗ್ರರ ಒಳನುಸುಳುವಿಕೆಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಸದೆಬಡಿಯಲಾಗಿದೆ. ಉಗ್ರರ ಗಡಿ ನುಸುಳುವಿಕೆಯ ಬಗ್ಗೆ ಮುಂಜಾನೆ ಮಾಹಿತಿ ತಿಳಿದ ತಕ್ಷಣ ಜಾಗೃತಗೊಂಡ ಸೇನೆ, ಕುಪ್ವಾರ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ […]
ರಾಮಮಂದಿರ ನಿರ್ಮಾಣ ಕಾರ್ಯದ ವಿಡಿಯೋ ಬಿಡುಗಡೆ ಮಾಡಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ
ಅಯೋಧ್ಯಾ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಕಳೆದ 500 ವರ್ಷಗಳಿಂದ ವಿಶ್ವದಾದ್ಯಂತದ ಭಕ್ತರು ಕಾಯುತ್ತಿರುವ ಘಳಿಗೆಗೆ ಶುಭ ಮುಹೂರ್ತ ಕೂಡಿ ಬಂದಿದೆ. 500 वर्षों के संघर्ष की परिणति pic.twitter.com/z5OTXivUFL — Shri Ram Janmbhoomi Teerth Kshetra (@ShriRamTeerth) October 26, 2023 ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ 22 ಜನವರಿ 2024 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ […]
ತೆಂಕುಪೇಟೆ: ಶಾರದಾ ಮಾತೆಯ ಮೂರ್ತಿ ವಿಸರ್ಜನೆ
ತೆಂಕುಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ದೇವಿಗೆ ವಿಸರ್ಜನಾ ಪೂಜೆಯನ್ನು ದೇವಳದ ಅರ್ಚಕರಾದ ದಯಾಘನ್ ಭಟ್ ನೆರವೇರಿಸಿದರು. ನರಸಿಂಹ ಕಿಣಿ ಬಳಗದವರಿಂದ ಭಜನೆ ಸೇವೆ ನಡೆಯಿತು. ಬಳಿಕ ತೆಪ್ಪೋತ್ಸವ ನೆಡೆಸಿ ಮಂಗಳಾ ವಾದ್ಯ ವೇದ ಘೋಶದೊಂದಿಗೆ ದೇವಾಲಯದ ಪದ್ಮ ಸರೋವರದಲ್ಲಿ ಶಾರದಾ ಮೂರ್ತಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ವಸಂತ್ ಕಿಣಿ, ಮುರಳೀಧರ್ ಭಟ್ , ಮಟ್ಟಾರ್ ಗಣೇಶ ಕಿಣಿ , ನರಹರಿ ಪೈ, ವಿಶಾಲ್ ಶೆಣೈ, ,ಶಾಮ್ ಪ್ರಸಾದ್ […]
ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಸಾಕ್ಷಾತ್ಕರಿಸಿದ ಅನ್ನಪೂರ್ಣೆ
ದೊಡ್ಡಣಗುಡ್ಡೆ: ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಧರ್ಮದರ್ಶಿ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ಶರನ್ನವರಾತ್ರಿ ಪರ್ವಕಾಲದಲ್ಲಿ ಸಹಸ್ರಾರು ಭಕ್ತರಿಗೆ ಬೆಳಗ್ಗಿನಿಂದ ರಾತ್ರಿಯವರೆಗೆ ಉಪಾಹಾರದೊಂದಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ತರಕಾರಿ ಮುಹೂರ್ತದಿಂದ ಹಿಡಿದು ಮಹಾಸಂಪ್ರೋಕ್ಷಣೆ ತನಕ ನಡೆದ ಸಮಾರಾಧನೆಯೂ ಭಕ್ತರನ್ನು ಸಂತೃಪ್ತಿಗೊಳಿಸಿದ್ದಲ್ಲದೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಚ್ಚುಕಟ್ಟಿನ ವ್ಯವಸ್ಥೆ ಕುಡಿಯುವ ನೀರಿನಿಂದ ಹಿಡಿದು ಮಜ್ಜಿಗೆಯ ತನಕ ಗುಣಮಟ್ಟದ ಶುಚಿ-ರುಚಿಯಾದ ಪಂಚಭಕ್ಷ್ಯ ಸಹಿತವಾಗಿ ಮೃಷ್ಟಾನ್ನ ಭೋಜನವನ್ನು ಬಾಳೆ ಎಲೆಯಲ್ಲಿ ನೀಡಲಾಯಿತು. ಅನ್ನಪೂರ್ಣ […]
ದೊಡ್ಡಣ್ಣಗುಡ್ಡೆ: ಅ.28 ರಂದು ಚಂದ್ರಗ್ರಹಣ; ಶ್ರೀ ಕ್ಷೇತ್ರ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ಗ್ರಹಣ ಶಾಂತಿ
ದೊಡ್ಡಣ್ಣ ಗುಡ್ಡೆ: ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಗ್ರಹಣ ಶಾಂತಿಯನ್ನು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಅ. 28ರ ಶನಿವಾರ ಹುಣ್ಣಿಮೆಯ ಕಾಲದಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನಿಗೆ ರಾಹು ಗ್ರಹಣವು ಸಂಭವಿಸಲಿದೆ. ಇದರಿಂದ ಅಶ್ವಿನಿ ಮಖ, ಮೂಲಾ, ರೇವತಿ ಭರಣಿ ನಕ್ಷತ್ರದವರಿಗೂ ಮೇಷ ವೃಷಭ ಕನ್ಯಾ ವೃಶ್ಚಿಕ ರಾಶಿಯವರಿಗೂ ಅನಿಷ್ಟಕರವಾಗಿದೆ. ರಾತ್ರಿ ಗಂಟೆ 12. 57ಕ್ಕೆ ಗ್ರಹಣ ಸ್ಪರ್ಶವಾಗಲಿದ್ದು ಬೆಳಗ್ಗಿನ ಜಾವ 1.30ಕ್ಕೆ […]