ಜೈಲರ್ ಚಿತ್ರದ ನಟ, ನಿರ್ದೇಶಕ ಜಿ ಮಾರಿಮುತ್ತು ಹೃದಯಾಘಾತದಿಂದ ನಿಧನ

ಚೆನ್ನೈ: ಜನಪ್ರಿಯ ತಮಿಳು ನಟ ಮತ್ತು ನಿರ್ದೇಶಕ ಜಿ ಮಾರಿಮುತ್ತು ಅವರು ಶುಕ್ರವಾರ, ಸೆಪ್ಟೆಂಬರ್ 8 ರಂದು ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾದರು. ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ, ತಮ್ಮ ದೂರದರ್ಶನ ಕಾರ್ಯಕ್ರಮ ‘ಎಥಿರ್ನೀಚಲ್’ ನ ಡಬ್ಬಿಂಗ್ ಮಾಡುವಾಗ ಕುಸಿದು ಬಿದ್ದಿದ್ದಾರೆ. ನಟನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಮಾರಿಮುತ್ತು ಅವರು ಯೂಟ್ಯೂಬ್ ಸೆನ್ಸೇಷನ್ ಆಗಿದ್ದರು ಮತ್ತು ‘ಜೈಲರ್’ ಮತ್ತು ‘ರೆಡ್ ಸ್ಯಾಂಡಲ್ ವುಡ್’ ಚಿತ್ರದಲ್ಲಿನ […]
ಯುಕೆ ಯಿಂದ ತಾಯ್ನಾಡಿಗೆ ಮರಳಲಿದೆ ಛತ್ರಪತಿ ಶಿವಾಜಿ ಮಹಾರಾಜರ ‘ವಾಘ್ ನಖ್’ ಕಠಾರಿ: ತಿಳುವಳಿಕೆ ಒಪ್ಪಂದಕ್ಕೆ ಶೀಘ್ರ ಅಂಕಿತ

ನವದೆಹಲಿ: ಬಿಜಾಪುರ ಸುಲ್ತಾನರ ಸೇನಾಪತಿಯನ್ನು ಕೊಲ್ಲಲು ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ ‘ವಾಘ್ ನಖ್’ (ಹುಲಿಯ ಉಗುರಿನಂತಹ ಆಯುಧ) ಅನ್ನು ಹಿಂದಿರುಗಿಸಲು ಯುಕೆ ಅಧಿಕಾರಿಗಳು ಒಪ್ಪಿಕೊಂಡ ನಂತರ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಈ ತಿಂಗಳ ಕೊನೆಯಲ್ಲಿ ಲಂಡನ್‌ಗೆ ಭೇಟಿ ನೀಡಲಿದ್ದಾರೆ. ವಾಘ್ ನಖ್ ಹುಲಿ ಉಗುರುಗಳ ಆಕಾರದ ಕಠಾರಿಯಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರು 1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ […]
ತ್ರಿಶಾ ಹಾಗೂ ಕ್ರಿಯೇಟಿವ್ ಕಾಲೇಜು ವತಿಯಿಂದ ಶಿಕ್ಷಕರ ದಿನಾಚರಣೆ; ಮೊಸರು ಕುಡಿಕೆ ಉತ್ಸವ

ಉಡುಪಿ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ‘ಕ್ರಿಯೇಟಿವ್ ಗುರು ದೇವೋಭವ’ ಕಾರ್ಯಕ್ರಮವನ್ನು ಸೆ.07ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಮೃತ ರೈ ಮಾತನಾಡಿ, ವಿದ್ಯಾರ್ಥಿಗಳು ಜೀವನ ಪರ್ಯಂತ ತನ್ನ ಜೀವನೋಪಾಯಕ್ಕೆ ಮಾರ್ಗದರ್ಶನವನ್ನು ನೀಡಿರುವ ಸಮಾಜದಲ್ಲಿ ತನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದ ಗುರುವನ್ನು ಎಂದಿಗೂ ಮರೆಯಬಾರದು. ಬಾಗುವುದು ನಮ್ಮತನವಾಗಬೇಕೆ ಹೊರತು ಬೀಗುವುದರಿಂದ ನಮಗೇನು ಸಿಗಲಾರದು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಸಂಸ್ಥೆಯ ಸಹಸಂಸ್ಥಾಪಕ ಡಾ. ಗಣನಾಥ ಶೆಟ್ಟಿ […]
ಹುಲಿ ಕುಣಿತ ಸಂದರ್ಭದಲ್ಲಿ ವೇಷಧಾರಿಯ ಮೈಮೇಲೆ ಆವೇಶ!!

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹುಲಿವೇಷಧಾರಿಯೊಬ್ಬರ ಮೈಮೇಲೆ ಆವೇಶವಾಗಿದೆ. ಹುಲಿಕುಣಿತದ ಸಂದರ್ಭದಲ್ಲಿ ವೇದಿಕೆಯ ಕುಣಿಯುತ್ತಿದ್ದ ಹೊತ್ತಿನಲ್ಲೇ ಮೈಮೇಲೆ ಆವೇಶವಾಗಿರುವ ವಿಡೀಯೋ ವೈರಲ್ ಆಗಿದೆ. ಬುಧವಾರದಂದು ಕೊರಂಗ್ರಪಾಡಿಯ ಜೂನಿಯರ್ ಫ್ರೆಂಡ್ಸ್ ತಂಡದವರು ನಿಟ್ಟೂರಿನಲ್ಲಿ ವೇದಿಕೆಯ ಮೇಲೆ ಹುಲಿಕುಣಿತ ಪ್ರದರ್ಶಿಸುತ್ತಿದ್ದರು. ಈ ಸಮಯದಲ್ಲಿ ಅಖಿಲೇಶ್ ಎಂಬವರು ಮೈಮೇಲೆ ಆವೇಶಭರಿತರಾಗಿ ವೇದಿಕೆ ಮೇಲೆ ಹಾಕಿದ್ದ ಹಾಸುಗಂಬಳಿಯನ್ನು ಕಚ್ಚಿ ಎಳೆದಿದ್ದಾರೆ. ಆ ಕೂಡಲೇ ಎಚ್ಚೆತ್ತ ತಂಡದವರು ಅವರನ್ನು ಹತೋಟಿಗೆ ತರಲು ಯತ್ನಿಸಿದ್ದಾರೆ ಮತ್ತು ತಾಸೆ ನಿಲ್ಲಿಸಿ ಅವರಿಗೆ ಶೈತ್ಯೋಪಚಾರ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ […]
ಸೆ.11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

ಉಡುಪಿ: ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿ ಜಿಲ್ಲೆ ಹಾಗೂ ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಸಂಘ (ರಿ) ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಸೆ.11 ರಂದು ಬೆಳಗ್ಗೆ 10.30 ಕ್ಕೆ ನಗರದ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಲಿದೆ. ಕಾರ್ಯಕಮ್ರವನ್ನು ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ ಕರಿಕಾಳನ್ ಉದ್ಘಾಟಿಸಲಿದ್ದು, […]