ಜೈಲರ್ ಚಿತ್ರದ ನಟ, ನಿರ್ದೇಶಕ ಜಿ ಮಾರಿಮುತ್ತು ಹೃದಯಾಘಾತದಿಂದ ನಿಧನ

ಚೆನ್ನೈ: ಜನಪ್ರಿಯ ತಮಿಳು ನಟ ಮತ್ತು ನಿರ್ದೇಶಕ ಜಿ ಮಾರಿಮುತ್ತು ಅವರು ಶುಕ್ರವಾರ, ಸೆಪ್ಟೆಂಬರ್ 8 ರಂದು ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾದರು. ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ, ತಮ್ಮ ದೂರದರ್ಶನ ಕಾರ್ಯಕ್ರಮ ‘ಎಥಿರ್ನೀಚಲ್’ ನ ಡಬ್ಬಿಂಗ್ ಮಾಡುವಾಗ ಕುಸಿದು ಬಿದ್ದಿದ್ದಾರೆ. ನಟನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಮಾರಿಮುತ್ತು ಅವರು ಯೂಟ್ಯೂಬ್ ಸೆನ್ಸೇಷನ್ ಆಗಿದ್ದರು ಮತ್ತು ‘ಜೈಲರ್’ ಮತ್ತು ‘ರೆಡ್ ಸ್ಯಾಂಡಲ್ ವುಡ್’ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಪ್ರಶಂಸೆಯ ವಿಮರ್ಶೆಗಳನ್ನು ಪಡೆದಿದ್ದರು. ಅವರ ಹಠಾತ್ ಸಾವಿಗೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.