ದಸರಾ ಆಚರಣೆಗೆ ₹30 ಕೋಟಿ ಅನುದಾನ: ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿಕೆ
ಮೈಸೂರು: “ಈ ಬಾರಿ ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು 30 ಕೋಟಿ ರೂ ಅನುದಾನ ಕೇಳಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.”ಈ ಹಿಂದೆ ಸಾಂಪ್ರದಾಯಿಕವಾಗಿ 9 ಆನೆಗಳನ್ನು ವೀರನಹೊಸಳ್ಳಿಯಿಂದ ಸ್ವಾಗತಿಸಿ, ಕಾಲ್ನಡಿಗೆಯ ಗಜಪಡೆ ಅರಮನೆ ಪ್ರವೇಶ ಮಾಡುತ್ತಿತ್ತು. ಆದರೆ ಕಾಲ್ನಡಿಗೆಯಲ್ಲಿಯೇ ಕರೆದುಕೊಂಡು ಬಂದರೆ ದಣಿವಾಗುತ್ತದೆ ಎಂದು 2004ರಿಂದ ವಾಹನದ ಮೂಲಕ ಕರೆತರಲಾಗುತ್ತಿದೆ. ಇಂದು ಒಂಬತ್ತು ಆನೆಗಳು ಬರುತ್ತವೆ. ಇನ್ನೂ ಐದು ಆನೆಗಳು […]
ರಾಜ್ಯದಲ್ಲಿ ದಕ್ಷಿಣ ಒಳನಾಡಿನ 8 ಜಿಲ್ಲೆಗಳಿಗೆ ನಾಳೆಯಿಂದ ಭಾರಿ ಮಳೆ: ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ನಾಳೆಯಿಂದ ಸೆಪ್ಟೆಂಬರ್ 7 ರವರೆಗೆ ರಾಜ್ಯದಲ್ಲಿ ಭಾರಿ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೆಪ್ಟೆಂಬರ್ 2ರಿಂದ 7ರವರೆಗೆ ರಾಜ್ಯದಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 6 ದಿನ ಭಾರಿ ಮಳೆ: ರಾಜ್ಯದಲ್ಲಿ ನೈರುತ್ಯ ಮುಂಗಾರು ಸಕ್ರಿಯಗೊಂಡಿದೆ. ಹೀಗಾಗಿ ಮುಂದಿನ 6 ದಿನಗಳ ಕಾಲ ಜೋರು ಮಳೆ ಬೀಳುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದ್ದು, ಉತ್ತರ ಒಳನಾಡು ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ. […]
‘ಜೈಲರ್’ ನಿರ್ಮಾಪಕ ಕಲಾನಿಧಿ ಮಾರನ್ ಅವರಿಂದ ರಜನಿಕಾಂತ್ಗೆ BMW ಕಾರು ಗಿಫ್ಟ್
ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರ ಜಾಗತಿಕ ಮಟ್ಟದಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.’ಜೈಲರ್’ ನಿರ್ಮಾಪಕ ಕಲಾನಿಧಿ ಮಾರನ್ ಅವರು ರಜನಿಕಾಂತ್ ಅವರಿಗೆ ಹೊಚ್ಚ ಹೊಸ BMW X7 ಕಾರು ಉಡುಗೊರೆ ನೀಡಿದ್ದಾರೆ. ತೆರೆಕಂಡು 3 ವಾರ ಕಳೆದರೂ ಹಲವೆಡೆ ಉತ್ತಮ ಪ್ರದರ್ಶನ ಮುಂದುವರೆಸಿದೆ. ಬಹುದಿನಗಳ ಬಳಿಕ ತೆರೆ ಮೇಲೆ ಬಂದ ‘ತಲೈವಾ’ನ ಹೊಸ ಅವತಾರ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. […]
ಕಳೆದ ವರ್ಷಕ್ಕಿಂತ ಆಗಸ್ಟ್ ಜಿಎಸ್ಟಿ ಆದಾಯ 1,59,069 ಕೋಟಿ ರೂ.;ಶೇ 11ರಷ್ಟು ಹೆಚ್ಚಳ
ನವದೆಹಲಿ: ಆಗಸ್ಟ್ನಲ್ಲಿ ದೇಶದ ಒಟ್ಟು ಜಿಎಸ್ಟಿ ಆದಾಯ 1,59,069 ಕೋಟಿ ರೂ.ಗಳಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಇದು ಜುಲೈನಲ್ಲಿ ಸಂಗ್ರಹವಾದ 1,65,105 ಕೋಟಿ ರೂ.ಗಿಂತ ಶೇ 3.6ರಷ್ಟು ಕಡಿಮೆಯಾಗಿದೆ. ಆದಾಗ್ಯೂ, ಆಗಸ್ಟ್ 2022ರಲ್ಲಿ ಬಂದಿದ್ದ ಜಿಎಸ್ಟಿ ಆದಾಯ 1,43,612ಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್ ಜಿಎಸ್ಟಿ ಆದಾಯ ಶೇಕಡಾ 11 ರಷ್ಟು ಹೆಚ್ಚಾಗಿರುವುದು ಗಮನಾರ್ಹ.ಈ ವರ್ಷದ ಆಗಸ್ಟ್ ತಿಂಗಳಲ್ಲಿ ದೇಶದ ಜಿಎಸ್ಟಿ ಆದಾಯ 1,59,069 ಕೋಟಿ ರೂಪಾಯಿಗಳಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ. .ಸರ್ಕಾರವು ಸಿಜಿಎಸ್ಟಿಗೆ […]
19,400ಕ್ಕೆ ತಲುಪಿದ ನಿಫ್ಟಿ, ಬಿಎಸ್ಇ ಸೆನ್ಸೆಕ್ಸ್ 556 ಅಂಕ ಏರಿಕೆ
ಮುಂಬೈ: ದೇಶೀಯ ಷೇರು ಮಾರುಕಟ್ಟೆಗಳು ಗಮನಾರ್ಹ ಏರಿಕೆಯೊಂದಿಗೆ ವಾರವನ್ನು ಕೊನೆಗೊಳಿಸಿವೆ. ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 555.75 ಪಾಯಿಂಟ್ ಅಥವಾ ಶೇಕಡಾ 0.86 ರಷ್ಟು ಏರಿಕೆ ಕಂಡು 65,387.16 ಕ್ಕೆ ತಲುಪಿದ್ದರೆ, ವಿಶಾಲ ಎನ್ಎಸ್ಇ ನಿಫ್ಟಿ-50 181.50 ಪಾಯಿಂಟ್ ಅಥವಾ ಶೇಕಡಾ 0.94 ರಷ್ಟು ಏರಿಕೆ ಕಂಡು 19,400 ಕ್ಕೆ ತಲುಪಿದೆ. ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರದಂದು ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ವಾರವನ್ನು ಕೊನೆಗೊಳಿಸಿವೆ. ಎನ್ಟಿಪಿಸಿ, ಜೆಎಸ್ಡಬ್ಲ್ಯೂ ಸ್ಟೀಲ್, ಜಿಯೋ ಫೈನಾನ್ಷಿಯಲ್, ಒಎನ್ಜಿಸಿ, ಟಾಟಾ […]