15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಕೋರಿಕೆ ಮೇರೆಗೆ ಮಾತುಕತೆ ಎಂಬ ಹೇಳಿಕೆ ನೀಡಿದ ಚೀನಾ: ಹೇಳಿಕೆ ತಿರಸ್ಕರಿಸಿದ ಭಾರತ

ನವದೆಹಲಿ: 15ನೇ ಬ್ರಿಕ್ಸ್ ಶೃಂಗಸಭೆಯ ನಡುವಲ್ಲೇ ಕೋರಿಕೆ ಮೇರೆಗೆ ಭಾರತ-ಚೀನಾ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದೆ ಎಂಬ ಚೀನಾ ಹೇಳಿಕೆಯನ್ನು ಭಾರತ ಸರ್ಕಾರ ಸಾರಾಸಗಟಾಗಿ ತಳ್ಳಿ ಹಾಕಿದೆ. ಚೀನಾ-ಭಾರತ ಮಾತುಕತೆಗಳು ನಂತರದ ಕೋರಿಕೆಯ ಮೇರೆಗೆ ದ್ವಿಪಕ್ಷೀಯ ಮಾತುಕತೆ ನಡೆದವು ಎಂದು ಚೀನಾ ಇತ್ತೀಚೆಗೆ ಮಾಡಿದ ಹೇಳಿಕೆಯನ್ನು ಭಾರತೀಯ ಮೂಲಗಳು ತಳ್ಳಿಹಾಕಿವೆ. ಚೀನಾದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಅಧ್ಯಕ್ಷ ಕ್ಸಿ ಜಿನ್ಪಿಂಗ್ […]
ಎಣ್ಣೆಹೊಳೆ ಸರಸ್ವತಿ ನಾಯಕ್ ನಿಧನ

ಕಾರ್ಕಳ:ಎಣ್ಣೆಹೊಳೆಯ ಗಣೇಶ್ ಭವನ್ ಹೋಟೆಲ್ ಮಾಲಕಿ,ದಿlನರಸಿಂಹ ಅವರ ಪತ್ನಿ ಸರಸ್ವತಿ ನಾಯಕ್ (82) ಆ.19ರಂದು ನಿಧನ ಹೊಂದಿದರು. ಎಣ್ಣೆಹೊಳೆ ಗಣೇಶ್ ಭವನ್ ಹೋಟೆಲ್ ಮಾಲಕಿ ಸರಸ್ವತಿ ನಾಯಕ್ ನಿಧನ ದಿl ನರಸಿಂಹ ನಾಯಕ್ ಅವರ ನಿಧನ ನಂತರ ಸರಸ್ವತಿ ನಾಯಕ್ ಹೋಟೆಲ್ ನಡೆಸುತ್ತಿದ್ದರು.ಮೃತರು ನಾಲ್ವರು ಪುತ್ರಿಯರನ್ನು ಹಾಗೂ ಪುತ್ರರಾದ ಗಣೇಶ್ ನಾಯಕ್,ನ್ಯಾಯಾಧೀಶ ಮಂಜುನಾಥ ನಾಯಕ್ ಅವರನ್ನು ಅಗಲಿದ್ದಾರೆ.
ಸುಡಾನ್ ಸಂಘರ್ಷದ ಹಿನ್ನೆಲೆ: 20 ಲಕ್ಷ ಮಕ್ಕಳು ಸ್ಥಳಾಂತರ, ಆಹಾರ ಕ್ಷಾಮ

ಜಿನೀವಾ : ಸುಡಾನ್‌ನಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷದಿಂದಾಗಿ 20 ಲಕ್ಷಕ್ಕೂ ಅಧಿಕ ಮಕ್ಕಳು ತಮ್ಮ ಮನೆಗಳಿಂದ ಬಲವಂತವಾಗಿ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.ಸುಡಾನ್ನಲ್ಲಿ ಭೀಕರ ಸಶಸ್ತ್ರ ಸಂಘರ್ಷ ಮುಂದುವರೆದಿದೆ. ದೇಶದಲ್ಲಿನ ಮಕ್ಕಳ ಸ್ಥಿತಿ ತೀರಾ ಆತಂಕಕಾರಿಯಾಗಿದೆ. “ಹಿಂಸಾಚಾರದಿಂದ ದೇಶದ ವಿನಾಶ ಮುಂದುವರೆದಿದ್ದು, 1.7 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಸುಡಾನ್ ಗಡಿ ದಾಟಿ ಹೋಗಲು ಕಾಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಮತ್ತು ಮತ್ತು 470,000 ಕ್ಕೂ ಹೆಚ್ಚು ಮಕ್ಕಳು ಈಗಾಗಲೇ ನೆರೆಯ ದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ ” ಎಂದು ಯುನಿಸೆಫ್ ಗುರುವಾರ […]
ಸಿ.ಎಸ್ ಪ್ರೊಫೆಷನಲ್ ಪರೀಕ್ಷೆ: ತ್ರಿಶಾ ಸಂಸ್ಥೆಯ ಚೈತನ್ಯ ಎಸ್.ಎಂ ಅಪರೂಪದ ಸಾಧನೆ

ಉಡುಪಿ: ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟಿರೀಸ್ ಆಫ್ ಇಂಡಿಯಾ ನಡೆಸಿರುವ ಸಿ.ಎಸ್ ಪ್ರೊಫೆಷನಲ್ ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಚೈತನ್ಯ ಎಸ್.ಎಂ ಇವರು 464 ಅಂಕಗಳೊಂದಿಗೆ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಇವರು ಸಾಗರದ ಮೋಹನ್ ಎಸ್ ಹಾಗೂ ಆಶಾ ಎಲ್.ಆರ್ ದಂಪತಿಯ ಪುತ್ರಿ. ತಮ್ಮ ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ನಡೆಸುತ್ತಿದ್ದು ಎರಡನೇ ವರ್ಷದ ಬಿ.ಕಾಂ ವ್ಯಾಸಂಗ ಪೂರ್ಣಗೊಳಿಸುತ್ತಿರುವಾಗಲೇ ಸಿ.ಎಸ್ ಕೋರ್ಸ್ ನ ಎಲ್ಲಾ ಹಂತಗಳನ್ನು ಮುಗಿಸಿರುವುದು ಅಪರೂಪದ ಸಾಧನೆಯಾಗಿದೆ. ಈ […]
ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ. 12.5% ಡಿವಿಡೆಂಡ್ ಘೋಷಣೆ

ಬೈಂದೂರು: ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ವಿಜಯಶಾಸ್ತ್ರೀ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಘವು ದಿನೇ ದಿನೇ ಪ್ರಗತಿ ಪಥದತ್ತ ಮುನ್ನೆಡೆಯುತ್ತಿದೆ. ಸದಸ್ಯರಿಗೆ ಸಾಲ ನೀಡುವಿಕೆಯಲ್ಲಿ ಹೆಚ್ಚಳ, ಠೇವಣಾತಿಯಲ್ಲಿ ಹೆಚ್ಚಳ ಸಾಧಿಸಿದ್ದು ರೈತರಿಗೆ ಬೇಕಾದ ಅನುಕೂಲತೆಗಳನ್ನು ಸಂಘವು ಒದಗಿಸಿಕೊಡುತ್ತಿದೆ. ರೈತರಿಗೆ ಬೇಕಾದ ರಸಗೊಬ್ಬರ ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಸದಸ್ಯರಿಂದ ಜನೌಷಧಿ ಕೇಂದ್ರ, ಪೆಟ್ರೋಲ್ ಬಂಕ್, ಸೂಪರ್ ಮಾರ್ಕೆಟ್ ಆರಂಭಿಸುವ ಬಗ್ಗೆ ಸಲಹೆ […]