19,300ಕ್ಕಿಂತ ಕೆಳಗಿಳಿದ ನಿಫ್ಟಿ: ಬಿಎಸ್ಇ ಸೆನ್ಸೆಕ್ಸ್ 365 ಪಾಯಿಂಟ್ ಕುಸಿತ

ಮುಂಬೈ : ಭಾರತದ ಷೇರು ಮಾರುಕಟ್ಟೆಗಳು ಇಂದು (ಶುಕ್ರವಾರ) ಇಳಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ. ಸೆನ್ಸೆಕ್ಸ್ನಲ್ಲಿ ಲಾರ್ಸೆನ್ ಆಂಡ್ ಟರ್ಬೋ, ಜೆಎಸ್ಡಬ್ಲ್ಯೂ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್, ಐಟಿಸಿ, ಮಹೀಂದ್ರಾ & ಮಹೀಂದ್ರಾ, ಎನ್ಟಿಪಿಸಿ, ಎಚ್ಡಿಎಫ್ಸಿ ಬ್ಯಾಂಕ್, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಮೋಟಾರ್ಸ್ ಪ್ರಮುಖವಾಗಿ ಕುಸಿತ ಕಂಡವು.ದೇಶೀಯ ಬೆಂಚ್ ಮಾರ್ಕ್ ಬಿಎಸ್ಇ ಸೆನ್ಸೆಕ್ಸ್ 365 ಪಾಯಿಂಟ್‌ಗಳಷ್ಟು ಕುಸಿದಿದೆ ಮತ್ತು ನಿಫ್ಟಿ ಶುಕ್ರವಾರದ ಅಸ್ಥಿರ ವಹಿವಾಟಿನಲ್ಲಿ 19,300 ಮಟ್ಟಕ್ಕಿಂತ ಕೆಳಗಿಳಿದಿದೆ.ಶುಕ್ರವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು […]

ಅಮೆರಿಕವು ಉಕ್ರೇನ್ ಪೈಲಟ್ಗಳಿಗೆ ಎಫ್-16 ಫೈಟರ್ ಜೆಟ್ ತರಬೇತಿ 

ವಾಶಿಂಗ್ಟನ್ : ಉಕ್ರೇನ್ನ ಪೈಲಟ್ಗಳಿಗೆ ಎಫ್-16 ಫೈಟರ್ ಜೆಟ್ ತರಬೇತಿ ನೀಡಲು ಅಮೆರಿಕ ಮುಂದಾಗಿದೆ. ಯುಎಸ್ ನೀಡಲಿರುವ ತರಬೇತಿಯು ಮೂಲಭೂತ ಫೈಟರ್ ಪೈಲಟ್ ತರಬೇತಿಯಾಗಿರುತ್ತದೆ ಎಂದು ಅವರು ಹೇಳಿದರು. ಉಕ್ರೇನಿಯನ್ ಪೈಲಟ್ಗಳ ಪಠ್ಯಕ್ರಮವು ಅವರ ಅನುಭವದ ಮಟ್ಟವನ್ನು ಅವಲಂಬಿಸಿರುತ್ತದೆ. ಇದರಲ್ಲಿ ಮೌಲ್ಯಮಾಪನವು ತರಬೇತಿ ಕಾರ್ಯಕ್ರಮದ ಭಾಗವಾಗಿದೆ ಎಂದು ವರದಿಗಳು ತಿಳಿಸಿವೆ. ದೇಶದ ದಕ್ಷಿಣದ ಎರಡು ರಾಜ್ಯಗಳಲ್ಲಿರುವ ವಾಯುಪಡೆಯ ನೆಲೆಗಳಲ್ಲಿ ಉಕ್ರೇನ್ ಪೈಲಟ್ಗಳಿಗೆ ಅಮೆರಿಕ ಸೆಪ್ಟೆಂಬರ್ನಿಂದ ಎಫ್-16 ಫೈಟರ್ ಜೆಟ್ ತರಬೇತಿ ನೀಡಲಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ […]

ವಯನಾಡಿನಲ್ಲಿ ಕಂದಕಕ್ಕೆ ಬಿದ್ದ ಜೀಪ್ ಹಿನ್ನೆಲೆ : 9 ಮಂದಿ ಮಹಿಳಾ ಕಾರ್ಮಿಕರು ಸಾವು

ವಯನಾಡು (ಕೇರಳ): ಕೇರಳದ ವಯನಾಡು ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಜೀಪ್ ಅಪಘಾತದಲ್ಲಿ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್ ಕಂದಕಕ್ಕೆ ಬಿದ್ದು 9 ಜನರು ಮೃತಪಟ್ಟ ಘಟನೆ ಕೇರಳದ ವಯನಾಡು ಜಿಲ್ಲೆಯಲ್ಲಿ ಇಂದು ನಡೆದಿದೆ. ಅಪಘಾತಕ್ಕೀಡಾದ ಜೀಪ್ ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಒಟ್ಟು 12 ಜನ ಮಹಿಳೆಯರು ಜೀಪ್ನಲ್ಲಿದ್ದರು. ಇವರು ಚಹಾ ತೋಟದ ಕೆಲಸ ಮುಗಿಸಿ ತಮ್ಮ ಮನೆಗಳಿಗೆ ಮರಳುತ್ತಿದ್ದರು. ಮಧ್ಯಾಹ್ನ 3:30ರ ಸುಮಾರಿಗೆ ಮಾರ್ಗ ಮಧ್ಯೆ 30 ಅಡಿ […]

50 ಮೀಟರ್ ಪಿಸ್ತೂಲ್ ISSF ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ‘ಭಾರತೀ’ಯರಿಗೆ ಬಂಗಾರ

ಬಾಕು (ಅಜರ್‌ಬೈಜಾನ್): ಇಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ನ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ವನಿತೆಯರ ಗುಂಪು ಚಿನ್ನದ ಪದಕ ಸಾಧಿಸಿದೆ. ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ನಲ್ಲಿ ತಿಯಾನಾ, ಸಾಕ್ಷಿ ಸೂರ್ಯವಂಶಿ ಮತ್ತು ಕಿರಣದೀಪ್ ಕೌರ್ ಅವರ ತಂಡ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿತು. ತಿಯಾನಾ, ಸಾಕ್ಷಿ ಸೂರ್ಯವಂಶಿ ಮತ್ತು ಕಿರಣದೀಪ್ ಕೌರ್ ಅವರಿದ್ದ ತಂಡ ಚೀನಾ ಮತ್ತು ಮಂಗೋಲಿಯಾವನ್ನು ಮಣಿಸಿ ಪ್ರಶಸ್ತಿ ಗೆದ್ದಿದೆ. ಭಾರತದ ಈ ಮೂವರು […]

ರಷ್ಯಾ ಅಧ್ಯಕ್ಷ ಪುಟಿನ್ ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಮಾಹಿತಿ ನೀಡಿದ ರಷ್ಯಾ

ಮಾಸ್ಕೋ (ರಷ್ಯಾ): ಭಾರತದ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸುತ್ತಿಲ್ಲ.ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ರಷ್ಯಾ ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲೂ ಪುಟಿನ್ ಭಾಗವಹಿಸಿರಲಿಲ್ಲ. ಶೃಂಗದಲ್ಲಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಪಾಲ್ಗೊಂಡಿದ್ದರು. ಉಕ್ರೇನಿಯನ್ ಮಕ್ಕಳನ್ನು ರಷ್ಯಾಕ್ಕೆ ಗಡಿಪಾರು ಮಾಡುವ ಆಪಾದಿತ ಯೋಜನೆಗೆ […]