ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ರಜನಿಕಾಂತ್ ಜೈಲರ್ ಸಿನಿಮಾ ನೋಡಲು ರಜೆ

ಭಾರತ ಮಾತ್ರವಲ್ಲ, ವಿಶ್ವದ ನಾನಾ ಕಡೆಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಯಾರೆಂಬ ಪ್ರಶ್ನೆಗೆ ಬಹುತೇಕ ಸಿನಿರಸಿಕರ ಬಾಯಲ್ಲಿ ಮೊದಲು ಬರುವ ಉತ್ತರವೇ ರಜನಿಕಾಂತ್. ಹೀಗಿರುವಾಗ ಅವರ ಹೊಸ ಸಿನಿಮಾಗಳ ಬಗ್ಗೆ ಫ್ಯಾನ್ಸ್ ಕ್ರೇಜ್ ಹೇಗಿರಬಹುದು ಎಂಬುದನ್ನು ನೀವೇ ಒಮ್ಮೆ ಊಹಿಸಿ. ತಮ್ಮ ಮೆಚ್ಚಿನ ನಟನ ಹೊಚ್ಚ ಹೊಸ ಸಿನಿಮಾ ವೀಕ್ಷಿಸಲು ಇದೀಗ ಕಟ್ಟಾ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.ರಜನಿಕಾಂತ್. ಈ ಹೆಸರು ಕೇಳುತ್ತಿದ್ದಂತೆ ವಿಶಿಷ್ಟ ಮ್ಯಾನರಿಸಂ ಹೊಂದಿರುವ ವ್ಯಕ್ತಿಯೊಬ್ಬರು ಥಟ್ಟನೆ ನೆನಪಾಗುತ್ತಾರೆ.ಜೈಲರ್ ಸಿನಿಮಾ ವೀಕ್ಷಿಸಲು ಚೆನ್ನೈ, ಮಧುರೈ […]
ಸಿಎ ಅರ್ಹತಾ ಪರೀಕ್ಷೆ: ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕಾರ್ಕಳ: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ (CA) ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುದೀಪ್ ಕೆ, ಸುಮಾ, ಸುಚಿತಾ ಬಿ ಸಿ, ಅನಘಾ, ಬಿ ಸಿದ್ದಾರ್ಥ್ ಪೈ, ಹೆಗ್ಡೆ ಅನಿರುದ್ಧ್ ರಮೇಶ್, ಅಭಿಷೇಕ್ ಪಿ ಎಸ್, ವಿಂದ್ಯಾ ವಿನಯ್ ಹೆಗಡೆ, ಎಸ್ ಅನುರಾಜ್ ಇವರು ತೇರ್ಗಡೆ ಹೊಂದಿ ಸಿ ಎ ಇಂಟರ್ ಮೀಡಿಯೆಟ್ ಗೆ ಅರ್ಹತೆ ಗಳಿಸಿದ್ದಾರೆ. ಸುದೀಪ್ ಕೆ 261 ಅಂಕ, […]
ಸಿ.ಎ ಫೌಂಡೇಶನ್ ಪರೀಕ್ಷೆ: ವಿದ್ಯೋದಯ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಆರ್. ಭಟ್ ಉತ್ತೀರ್ಣ

ಉಡುಪಿ: 2023 ಜೂನ್ ನಲ್ಲಿ ನಡೆದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉಡುಪಿ ವಿದ್ಯೋದಯ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಆರ್. ಭಟ್ ಉತ್ತೀರ್ಣರಾಗಿದ್ದಾರೆ. ಇವರು ಮಣಿಪಾಲದ ಉದ್ಯಮಿ ರಾಜ್ಕುಮಾರ್ ಭಟ್ ಹಾಗೂ ಸೌಮ್ಯ ಭಟ್ ದಂಪತಿಯ ಪುತ್ರಿ.
ಕಾಶ್ಮೀರದ ನಿವೃತ್ತ ನ್ಯಾಯಮೂರ್ತಿ ನೀಲಕಂಠ ಗಂಜೂ ಹತ್ಯೆ ಪ್ರಕರಣದ ಮರು ತನಿಖೆ

ಶ್ರೀನಗರ: ಮೂರು ದಶಕಗಳ ಹಿಂದೆ ನಿವೃತ್ತ ನ್ಯಾಯಮೂರ್ತಿ ನೀಲಕಂಠ ಗಂಜೂ ಅವರ ಹತ್ಯೆಯ ಹಿಂದಿನ ದೊಡ್ಡ ಕ್ರಿಮಿನಲ್ ಪಿತೂರಿಯನ್ನು ಬಯಲಿಗೆಳೆಯುವ ಸಲುವಾಗಿ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ), ಈ ಕೊಲೆ ಪ್ರಕರಣದ ಸತ್ಯ ಅಥವಾ ಸಂದರ್ಭಗಳ ಪರಿಚಯವಿರುವ ಎಲ್ಲ ವ್ಯಕ್ತಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದೆ. ತತ್‌ಕ್ಷಣದ ಪ್ರಕರಣದ ತನಿಖೆಯ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಘಟನೆಗಳ ಯಾವುದೇ ವಿವರಗಳನ್ನು ಹಂಚಿಕೊಳ್ಳಲು ಮುಂದೆ ಬರುವಂತೆ ಹೇಳಿದೆ. ಅಂತಹ ಎಲ್ಲಾ ವ್ಯಕ್ತಿಗಳ ಗುರುತನ್ನು ಸಂಪೂರ್ಣವಾಗಿ […]
ದೊಡ್ಡಣ್ಣಗುಡ್ಡೆ: ಆಗಸ್ಟ್ 10 ರಂದು ವಿಷ್ಣು ಸಹಸ್ರನಾಮ ಯಾಗ ಮತ್ತು ಲಕ್ಷ್ಮೀ ನಾರಾಯಣ ಹೃದಯ ಹೋಮ

ದೊಡ್ಡಣ್ಣಗುಡ್ಡೆ: ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ವಿಷ್ಣು ಸಹಸ್ರನಾಮ ಯಾಗ ಮತ್ತು ಲಕ್ಷ್ಮೀನಾರಾಯಣ ಹೃದಯ ಹೋಮ ಕ್ಷೇತ್ರದ ಧರ್ಮದರ್ಶಿರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಆ.10 ರಂದು ನಡೆಯಲಿದೆ. ಬಹು ಫಲಪ್ರದವಾದ ಅಧಿಕ ಮಾಸದಲ್ಲಿ ಸಂಪನ್ನಗೊಳ್ಳಲಿರುವ ಈ ಮಹಾನ್ ಯಾಗವು ಬೆಳಿಗ್ಗೆ 8ರಿಂದ ಆರಂಭಗೊಳ್ಳಲಿದೆ. ಅಧಿಕ ಮಾಸದಲ್ಲಿ ಶ್ರೇಷ್ಠ ವಿಪ್ರರಿಗೆ ಕೊಡಲ್ಪಡುವ ವಿಶೇಷ ದಾನಾದಿ ಆಚರಣೆಗಳು ಅಂದು ನೆರವೇರಲಿದ್ದು ಮಧ್ಯಾಹ್ನ ಮಹಾ […]