ಶ್ರೀವೆಂ.ಪ.ಪೂ ಕಾಲೇಜಿನ ಅನುಷಾ ಪ್ರಭು ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣ

ಕುಂದಾಪುರ: 2023 ರ ಜೂನ್ ನಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನುಷಾ ಪ್ರಭು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ಕೌಂಡಿಣ್ಯ ಗೋತ್ರ ನಾಯಕ ಕುಲಪುರಷ ಕಮಿಟಿ(ರಿ) ರಮಾನಾಥ್ ಗೋವಾ, ಉಡುಪಿ ಸಮಿತಿ ವತಿಯಿಂದ ದಿವಂಗತ ಬಿ ಜಯರಾಮ್ ನಾಯಕ್ ಮೆಮೋರಿಯಲ್ ಸ್ಮರಣಾರ್ಥ ಈ ಬಾರಿಯ ಹತ್ತನೇ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ 12 ವಿದ್ಯಾರ್ಥಿಗಳನ್ನು ಭಾನುವಾರದಂದು ಒಳಕಾಡಿನ ಅನಂತ ವೈದಿಕ ಕೇಂದ್ರದಲ್ಲಿ 5000 ರೂ ನಗದು ಸಹಿತ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಮೋಹನ್ ನಾಯಕ್ ಬೆಳಗಾಂ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಉಪಾಧ್ಯಕ್ಷ ಅಜೆಕಾರ್ ಪ್ರೇಮಾನಂದ್ ನಾಯಕ್ , […]
ಟೊಮೆಟೊ ಮಾರಿ ಎಸ್.ಯು.ವಿ ಖರೀದಿಸಿದ ರೈತ: ಉದ್ಯೋಗಪತಿಗಳು ಮಾತ್ರವಲ್ಲ, ರೈತರಿಗೂ ಒಂದು ಕಾಲ ಬರುವುದೆಂದು ತೋರಿದ ಟೊಮೆಟೊ!!

ಚಾಮರಾಜನಗರ: ಕೃಷಿ ಜೀವನ, ರೈತರಾಗಿರುವುದೆಂದರೆ ಸದಾ ಬಡತನದಲ್ಲೇ ದಿನಗಳೆಯುವುದು ಎನ್ನುವ ಮಾತಿಗೆ ಗಗನಕ್ಕೇರಿದ ಟೊಮೆಟೊ ಬೆಲೆ ಛಾಟಿ ಬೀಸಿದೆ. ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಟೊಮೆಟೊ ಬೆಳೆದು ಮಂಡಿಗಳಲ್ಲಿ ಟೊಮೆಟೋವನ್ನು ಭಾರಿ ಬೆಲೆಗೆ ಮಾರಾಟ ಮಾಡಿ ಅನೇಕ ರೈತರು ಕೋಟ್ಯಾಧಿಪತಿಗಳಾಗಿದ್ದಾರೆ. ಇದೇ ರೀತಿಯ ಘಟನೆಯಲ್ಲಿ, ಚಾಮರಾಜನಗರದ ರೈತ ರಾಜೇಶ್ ತಾನು ಬೆಳೆದ ಟೊಮೆಟೊ ಮಾರಾಟ ಮಾಡುವ ಮೂಲಕ ಸುಮಾರು 40 ಲಕ್ಷ ರೂ. ಸಂಪಾದಿಸಿದ್ದಾರೆ. ಬೆಲೆ ಹೆಚ್ಚಾಗುವ ಮೊದಲು ಅವರು ತಮ್ಮ 12 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದರು. […]
ಉಡುಪಿ: ಆ. 10 ರಂದು ನೇರ ಸಂದರ್ಶನ

ಉಡುಪಿ: ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಆಗಸ್ಟ್ 10 ರಂದು ಬೆಳಗ್ಗೆ 10.30 ಕ್ಕೆ ಶಾಂತ ಎಲೆಕ್ಟ್ರಿಕಲ್ಸ್ ಪ್ರೈ.ಲಿ, ಆಭರಣ ಜುವೆಲ್ಲರ್ಸ್ ಬಳಿ, ಕಾರ್ಪೊರೇಶನ್ ಬ್ಯಾಂಕ್ ರೋಡ್, ಅನುರಾಗ ಕಾಂಪ್ಲೆಕ್ಸ್, ಉಡುಪಿ ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ ಮತ್ತು ಡಿಪ್ಲೋಮಾ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, […]
ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಎಕೌಂಟೆಂಟ್ಸ್ ಆಫ್ ಇಂಡಿಯಾ ರಾಷ್ಟ್ರಮಟ್ಟದಲ್ಲಿ ನಡೆಸುವ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾದ ವಾಣಿಜ್ಯ ವಿಭಾಗದ 5 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವ ಮೂಲಕ ಮುಂದಿನ ಸಿಎ ಇಂಟರ್ ಮಿಡಿಯೆಟ್ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳಾದ ಸಂಕೇತ್.ವಿ.ಕಾಮತ್ (271), ಶರಣ್ಯ ಎಸ್ ಹೆಗ್ಡೆ (258), ಬ್ರಾಯನ್ ವಿಕ್ಕಿ ಡಿ’ಸೋಜ (245), ಬಿ.ಅನೂಪ್ ಕಾಮತ್(232), ರಾಯನ್ ಮೆಂಡೋನ್ಸಾ (200) ಇವರು ಅಂಕ ಗಳಿಸಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ […]