ನಟ ಫಹಾದ್​ ಫಾಸಿಲ್​ ಜನ್ಮದಿನದ ಹಿನ್ನೆಲೆ ‘ಪುಷ್ಪ 2’ ಖಳನಾಯಕನ ಫಸ್ಟ್​ ಲುಕ್​ ಔಟ್​

‘ಪುಷ್ಪ 2: ದಿ ರೂಲ್​’ ಭಾರತೀಯ ಚಿತ್ರರಂಗದ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ. ಈ ಸಿನಿಮಾದಲ್ಲಿ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಮತ್ತು ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಮಾಲಿವುಡ್​ ನಟ ಫಹಾದ್​ ಫಾಸಿಲ್ ಅವರ ಫಸ್ಟ್​ ಲುಕ್​ ಇದೀಗ ಬಿಡುಗಡೆಯಾಗಿದೆ. 2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಪುಷ್ಪ: ದಿ ರೈಸ್​ನ ಮುಂದುವರೆದ ಭಾಗ ಇದಾಗಿದೆ.ನಟ ಫಹಾದ್​ ಫಾಸಿಲ್ ಜನ್ಮದಿನದ ಹಿನ್ನೆಲೆ ಪುಷ್ಪ 2: ದಿ ರೂಲ್​ ಚಿತ್ರದ ಫಸ್ಟ್​ […]

ಹಾಲಿವುಡ್​ ನಿರ್ದೇಶಕ , ಆಸ್ಕರ್​ ಪ್ರಶಸ್ತಿ ವಿಜೇತ ವಿಲಿಯಂ ಫ್ರೈಡ್ಕಿನ್ ವಿಧಿವಶ

ವಿಲಿಯಂ ಫ್ರೈಡ್ಕಿನ್ ನಿರ್ದೇಶನದ ‘ದಿ ಕೇನ್​ ಮ್ಯೂಟಿನಿ ಕೋರ್ಟ್​ ಮಾರ್ಷಲ್​’ ಚಿತ್ರದ ಪ್ರಥಮ ಪ್ರದರ್ಶನವನ್ನು ಆಯೋಜಿಸಲು ವೆನಿಸ್​ ಚಲನಚಿತ್ರೋದ್ಯಮ ನಿರ್ಧರಿಸಿದೆ. ಈ ಚಿತ್ರದಲ್ಲಿ ಕೀಫರ್​ ಸದರ್ಲ್ಯಾಂಡ್​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದು ಫ್ರೈಡ್ಕಿನ್ ಅವರ ಕೊನೆಯ ಚಿತ್ರವಾಗಿದೆ. ವಿಲಿಯಂ ಫ್ರೈಡ್ಕಿನ್ ಅವರ ಪತ್ನಿ ಶೆರ್ರಿ ಲ್ಯಾನ್ಸಿಂಗ್​ ಅವರ ಆಪ್ತ ಸ್ನೇಹಿತ, ಚಾಪ್ಮನ್​ ವಿಶ್ಚವಿದ್ಯಾಲಯದ ಡೀನ್​ ಸ್ಟೀಫನ್​ ಗ್ಯಾಲೋವೆ ನಟನ ನಿಧನವನ್ನು ಧೃಢಪಡಿಸಿದ್ದಾರೆ. ಹಾಲಿವುಡ್​ ನಿರ್ದೇಶಕ ವಿಲಿಯಂ ಫ್ರೈಡ್ಕಿನ್​ ಸೋಮವಾರ ಲಾಸ್​ ಏಂಜಲೀಸ್​ನಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. […]

ಫೋನ್​ ಪೇ ಪೇಮೆಂಟ್​ ನೋಟಿಫಿಕೇಶನ್​ : ಇನ್ಮುಂದೆ ಕನ್ನಡ ಸೇರಿದಂತೆ ಈ ಪ್ರಾದೇಶಿಕ ಭಾಷೆಯಲ್ಲೂ ಪಡೆಯಬಹುದು

ಬೆಂಗಳೂರು: ಈ ಹಿಂದೆ ವ್ಯಾಪಾರಿಗಳಿಗೆ ಗ್ರಾಹಕರ ಪೇಮೆಂಟ್​ ಇತಿಹಾಸವನ್ನು ಸುಲಭವಾಗಿ ತಿಳಿಯುವ ಉದ್ದೇಶದಿಂದ ಪಾವತಿ ಕುರಿತು ಸ್ಮಾರ್ಟ್​ ಸ್ಪೀಕರ್​ ನೋಟಿಫಿಕೇಶನ್​ ಅನ್ನು ಪರಿಚಯಿಸಿತು. ಇಷ್ಟು ದಿನ ಇಂಗ್ಲಿಷ್​ನಲ್ಲಿ ಈ ನೋಟಿಫಿಕೇಶನ್​ ಧ್ವನಿ ಕೇಳಿ ಬರುತ್ತಿತ್ತು. ಆದರೆ, ಇದೀಗ ಪ್ರಾದೇಶಿಕ ಭಾಷೆಗಳಲ್ಲೂ ಪರಿಚಯಿಸಿದೆ. ಡಿಜಿಟಲ್​ ಪೇಮೆಂಟ್​ ಪ್ಲಾಟ್​​ಫಾರ್ಮ್​​ನಲ್ಲಿ ಜನಸಾಮಾನ್ಯರ ಜನಪ್ರಿಯ ತಾಣವಾಗಿರುವ ಫೋನ್​ಪೇ ಇದೀಗ ಮತ್ತಷ್ಟು ವ್ಯಾಪಾರಿ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ.ವ್ಯಾಪಾರಿಗಳು ಇದೀಗ ತಮ್ಮ ಗ್ರಾಹಕರ ಹಣದ ವಹಿವಾಟಿನ ಮಾಹಿತಿಯನ್ನು ತಮ್ಮ ಭಾಷೆಗಳಲ್ಲಿ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಈ […]

ಭಾರತದ ಜೂನಿಯರ್‌ ಪುರುಷ, ಮಹಿಳಾ ಹಾಕಿ ತಂಡಕ್ಕೆ ಹೊಸ ಕೋಚ್‌ ಆಗಿ ಹರ್ಮನ್ ಕ್ರೂಸ್

ನವದೆಹಲಿ: ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ಜೂನಿಯರ್ ತಂಡಗಳ ನೂತನ ತರಬೇತುದಾರರಾಗಿ ಎರಡು ದಶಕಗಳ ಕಾಲ ಕೋಚ್​ ಆಗಿ ಕಾರ್ಯನಿರ್ವಹಿಸಿದ ಅನುಭವವಿರುವ ನೆದರ್‌ಲ್ಯಾಂಡ್‌ನ ಹರ್ಮನ್ ಕ್ರೂಸ್ ಅವರನ್ನು ನೇಮಕ ಮಾಡಿರುವುದಾಗಿ ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆಈ ವರ್ಷಾಂತ್ಯದಲ್ಲಿ ಜೂನಿಯರ್​ ಹಾಕಿ ವಿಶ್ವಕಪ್ ನಡೆಯಲಿದ್ದು ಹರ್ಮನ್ ಕ್ರೂಸ್ ಅವರನ್ನು ಭಾರತದ ತಂಡದ ಹೊಸ ಮುಖ್ಯ ಕೋಚ್​ ಆಗಿ ನೇಮಿಸಲಾಗಿದೆ. ಹರ್ಮನ್ ಕ್ರೂಸ್ ನೆದರ್ಲ್ಯಾಂಡ್ಸ್ ಮೂಲದ ಹಾಕಿ ಕ್ಲಬ್ ಡೆನ್ ಬಾಷ್​ನಲ್ಲಿ ಮುಖ್ಯಕೋಚ್​ ಆಗಿ ಕೆಲಸ ಮಾಡಿದ್ದರು. ಇವರು […]

ಪ್ರೇಕ್ಷಕರಿಗೆ ಬಿಗ್​ ಆಫರ್​ ನೀಡಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತಂಡ , ಬುಕ್​ ಮೈ ಶೋನಲ್ಲಿ 2 ಟಿಕೆಟ್​ ತಗೊಂಡ್ರೆ 1 ಫ್ರೀ

ಥಿಯೇಟರ್ ಅಂಗಳದಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್ ಓಟ ಮುಂದುವರೆದಿದೆ. ಮೂರನೇ ವಾರವೂ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ವಿಭಿನ್ನ ಬಗೆಯಲ್ಲಿ ಸಿನಿಮಾ ಪ್ರಮೋಷನ್ ಮಾಡಿ ಗೆದ್ದಿರುವ ಚಿತ್ರತಂಡಕ್ಕೆ ನಟಿ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗೆ ವೀರೇಶ್ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಅನುಶ್ರೀ ಟಿಕೆಟ್ ವಿತರಿಸಿದರು. ಬಳಿಕ ಅಭಿಮಾನಿಯಾಗಿ ಈ ಸಿನಿಮಾದ ಸಕ್ಸಸ್ ಸೆಲೆಬ್ರೇಟ್ ಮಾಡುವುದಾಗಿ ಹೇಳಿದರು. ಯುವ ಪ್ರತಿಭೆಗಳ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬುಕ್​ ಮೈ […]