ಕುಂದಾಪುರ: ಬಸ್ರೂರು ಸೊಸೈಟಿಯ ಅಧ್ಯಕ್ಷ ಗೋಪಾಲ ಪೂಜಾರಿ ನಿಧನ

ಕುಂದಾಪುರ: ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಬಸ್ರೂರು ಕೋಟಿ ಚೆನ್ನಯ್ಯ ಗರಡಿಯ ಮುಖ್ಯಸ್ಥರಾದ ಗೋಪಾಲ ಪೂಜಾರಿ (68) ಅವರು ಆ.8ರಂದು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಗೋಪಾಲ ಪೂಜಾರಿ ಅವರು ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಅವಧಿಯಿಂದ ಗುರುತಿಸಿಕೊಂಡಿದ್ದು, ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಬಸ್ರೂರು ಗರಡಿಯ ಪಾತ್ರಿಗಳಾಗಿ, ಗರಡಿಯ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಸ್ರೂರು ಪರಿಸರದ ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮೃತರು ಪತ್ನಿ, […]

ರಣ್​ವೀರ್ ಸಿಂಗ್​ ಜೊತೆ ಕಿಯಾರಾ ಅಭಿನಯ: ‘ಡಾನ್​​ 3’ ಸಿನಿಮಾ ಘೋಷಣೆ

ಡಾನ್​ 3 ಸಿನಿಪ್ರಿಯರ ಮೊಗದಲ್ಲಿ ಸಂತಸ ಮೂಡಿಸಿದೆ.ನಿರ್ದೇಶಕ ಫರ್ಹಾನ್​ ಅಖ್ತರ್ ‘ಡಾನ್​​ 3’ ಸಿನಿಮಾ ಘೋಷಿಸಿದ್ದಾರೆ. ಆದ್ರೆ ಬಾಲಿವುಡ್​ ಕಿಂಗ್​ ಖಾನ್​ ಅವ್ರ ಕಟ್ಟಾ ಅಭಿಮಾನಿಗಳ ಹೃದಯ ಛಿದ್ರಗೊಳಿಸಿದೆ. ಏಕೆಂದರೆ ಡಾನ್​ 1 ಮತ್ತು ಡಾನ್​ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಎಸ್​ಆರ್​ಕೆ ಡಾನ್​ 3ರ ಭಾಗವಾಗುತ್ತಿಲ್ಲ. ರಾಕಿ ಔರ್​ ರಾಣಿ ಕಿ ಪ್ರೇಮ ಕಹಾನಿಯ ಯಶಸ್ಸಿನಲೆಯಲ್ಲಿ ತೇಲುತ್ತಿರುವ ರಣ್​ವೀರ್​ ಸಿಂಗ್​​ ಅವರನ್ನು ಬಾಲಿವುಡ್​ನ ಮುಂದಿನ ಡಾನ್​ ಆಗಿ ಸ್ವೀಕರಿಸಲಾಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ಸಮಯದಿಂದ ಕಾದು […]

ವಿಜ್ಞಾನಿಗಳಿಂದ ಎಚ್ಚರಿಕೆ ಅಂಟಾರ್ಕ್ಟಿಕಾದಲ್ಲಿ ಶಾಖದ ಅಲೆ, ಕರಗುತ್ತಿರುವ ಹಿಮಗಡ್ಡೆಗಳು

ಲಂಡನ್ : ಅಂಟಾರ್ಕ್ಟಿಕಾದಲ್ಲಿ ಸಮುದ್ರದ ಶಾಖದ ಅಲೆಗಳು ಉಂಟಾಗುವುದು ಮತ್ತು ಮಂಜುಗಡ್ಡೆ ಕರಗುವಿಕೆಯಂಥ ವಿಕೋಪದ ಸಾಧ್ಯತೆಗಳು ಹೆಚ್ಚು ಸಾಮಾನ್ಯ ಮತ್ತು ಹೆಚ್ಚು ತೀವ್ರವಾಗಲಿವೆ ಎಂದು ಸಂಶೋಧಕರು ಹೇಳಿದ್ದಾರೆ. ಜಾಗತಿಕ ತಾಪಮಾನ ಏರಿಕೆಯನ್ನು ಪ್ಯಾರಿಸ್ ಒಪ್ಪಂದದ ಗುರಿಯಾದ 1.5 ಡಿಗ್ರಿ ಸೆಲ್ಸಿಯಸ್​ಗೆ ಸೀಮಿತಗೊಳಿಸಲು ಈಗ ಕಠಿಣ ಕ್ರಮದ ಅಗತ್ಯ ಎಂದು ಹೇಳಿರುವ ವಿಜ್ಞಾನಿಗಳು, ಹಿಮಗಡ್ಡೆಗಳ ಕರಗುವಿಕೆಯು ಭಾರಿ ವಿಕೋಪದ ಮುನ್ಸೂಚನೆಯಾಗಿರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ಹವಾಮಾನ ಬದಲಾವಣೆಗಳ ಕಾರಣದಿಂದ ಅಂಟಾರ್ಕ್ಟಿಕಾದಲ್ಲಿ ಉಷ್ಣದ ಅಲೆಗಳು ಏಳುತ್ತಿದ್ದು, ಹಿಮಗಡ್ಡೆಗಳು ತೀವ್ರವಾಗಿ ಕರಗುತ್ತಿವೆ […]

ಭಾರತ ಮೂಲದ ವೈಭವ್ ತನೇಜಾ ಟೆಸ್ಲಾ ಸಿಎಫ್​ಒ ಆಗಿ ನೇಮಕ

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ):ತನೇಜಾ ಪ್ರಸ್ತುತ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಹೆಚ್ಚುವರಿ ಜವಾಬ್ದಾರಿಯಾಗಿ ಸಿಎಫ್‌ಒ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಟೆಸ್ಲಾ ಕಂಪನಿಯಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಜಕಾರಿ ಕಿರ್ಕ್ಹಾರ್ನ್ ಅವರ ಸ್ಥಾನವನ್ನು ತನೇಜಾ ತುಂಬಲಿದ್ದಾರೆ. ಎಲೋನ್ ಮಸ್ಕ್ ನೇತೃತ್ವದ ಟೆಸ್ಲಾ ಕಂಪನಿಯು ಭಾರತೀಯ ಮೂಲದ ವೈಭವ್ ತನೇಜಾ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ನೇಮಕ ಮಾಡಿದೆ.ಟೆಸ್ಲಾ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಭಾರತ ಮೂಲದ ವೈಭವ್ ತನೇಜಾ ನೇಮಕಗೊಂಡಿದ್ದಾರೆ. ಟೆಸ್ಲಾ ಭಾರತದಲ್ಲಿ […]

ಷೇರು ಮಾರುಕಟ್ಟೆಯಲ್ಲಿ 93 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್​

ಮುಂಬೈ: ಪವರ್ ಗ್ರಿಡ್, ಮಹೀಂದ್ರಾ, ಭಾರ್ತಿ ಏರ್‌ಟೆಲ್, ನೆಸ್ಲೆ, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟಿಸಿಎಸ್, ಐಟಿಸಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಕುಸಿತ ಕಂಡಿವೆ. ಮತ್ತೊಂದೆಡೆ, ಟೈಟಾನ್, ಎಸ್‌ಬಿಐ, ಟಾಟಾ ಸ್ಟೀಲ್, ಎನ್‌ಟಿಪಿಸಿ, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಮೋಟಾರ್ಸ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಲಾಭ ಗಳಿಸಿದವು. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ USD 85.49 ಕ್ಕೆ ಅಂದರೆ 0.18 ಶೇಕಡಾ ಏರಿಕೆಯಾಗಿದೆ. ಮಿಶ್ರ […]