ಆರೂರು ಗ್ರಾ.ಪಂ ವ್ಯಾಪ್ತಿಯ ಪರಿಷ್ಕೃತ ಕಟ್ಟಡ ತೆರಿಗೆ ಪ್ರಕಟ: ಆಕ್ಷೇಪಣೆ ಆಹ್ವಾನ

ಕುಂದಾಪುರ: ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಕಟ್ಟಡ ಮತ್ತು ನಿವೇಶನ ಮಾಲೀಕರು ಹಾಗೂ ಅನುಭೋಗದಾರರ ಕಟ್ಟಡಗಳಿಗೆ ಸಂಬಂಧಿಸಿದಂತೆ, ತೆರಿಗೆಯನ್ನು ಪರಿಷ್ಕರಿಸಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರ ಪರಿಶೀಲನೆಗೆ ಪ್ರಕಟಿಸಲಾಗಿದ್ದು, ಈ ಕುರಿತು ಆಕ್ಷೇಪಣೆಗಳು ಇದ್ದಲ್ಲಿ ಪ್ರಕಟಣೆಯ ದಿನಾಂಕದಿಂದ 30 ದಿನಗಳ ಒಳಗಾಗಿ ಗ್ರಾಮ ಪಂಚಾಯತ್ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ ಎಂದು ಗ್ರಾಮ ಪಂಚಾಯತ್‌ನ ಪ್ರಕಟಣೆ ತಿಳಿಸಿದೆ.

ಅದೃಷ್ಟದಿಂದ ಒಲಿಯಿತು, ಕರ್ಮದಿಂದ ಕಳೆಯಿತು ಎಂತಾಗದಿರಲಿ!

ಅದೃಷ್ಟದಿಂದ ಒಲಿಯಿತು, ಕರ್ಮದಿಂದ ಕಳೆಯಿತು ಎಂತಾಗದಿರಲಿ! ಟಿ.ದೇವಿದಾಸ್ ಕಟ್ಟರ್ ಹಿಂದುತ್ವ ವಿರೋಧಿ, ಮುಸ್ಲಿಂ ಪಕ್ಷಪಾತಿ, ನಾಸ್ತಿಕವಾದಿ ಚಿಂತಕ, ದ್ವೇಷ ರಾಜಕಾರಣದ ರಾಯಭಾರಿ, ದುರಹಂಕಾರಿ, ಜಾತ್ಯತೀತ ಎನಿಸಿದ ಜಾತಿವಾದಿ ರಾಜಕಾರಣಿ, ರಾಜಕೀಯ ದಾಳಗಳನ್ನು ಬೇಕಾದಂತೆ ಬೇಕಾದ ಹಾಗೆ ಉರುಳಿಸುವ ಚಾಣಾಕ್ಷ.. ಹೀಗೆ ಅನ್ಯಾನ್ಯ ರೀತಿಯಲ್ಲಿ‌‌‌ ಆರೋಪ, ನಿಂದನೆ, ಹಳಹಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೊಂದಿದ್ದರೂ, ಎಂತಹ ಪ್ರತಿಕೂಲ‌ ಪರಿಸ್ಥಿತಿಯಲ್ಲೂ ಸಿದ್ಧರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೇ ಅಲ್ಲ, ೧೫ ವರ್ಷಗಳ ರಾಜ್ಯ ಕಾಂಗ್ರೆಸ್ಸಿನ ಶಾಸಕಾಂಗ ಪಕ್ಷದ ನಾಯಕರಾಗಿ ದಾಖಲೆಯನ್ನೂ ಬರೆದಿದ್ದಾರೆ. ಇದೇನು […]

ಉಡುಪಿ: ಸೆ. 9 ರಂದು ರಾಷ್ಟ್ರೀಯ ಲೋಕ್ ಅದಾಲತ್

ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ರಾಜ್ಯಾದ್ಯಂತ ಸೆಪ್ಟಂಬರ್ 9 ರಂದು ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ತಕ್ಷಣ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದಾಲತ್‌ನಲ್ಲಿ ಸಾರ್ವಜನಿಕರು ವ್ಯಾಜ್ಯ ಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯದ ಪ್ರಕರಣ, ಬ್ಯಾಂಕ್ ವಸೂಲಾತಿ ಪ್ರಕರಣ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣ, ವಿದ್ಯುತ್ ಹಾಗೂ ನೀರಿನ ಶುಲ್ಕಕ್ಕೆ ಸಂಬಂಧಿಸಿದ ಪ್ರಕರಣ, ರಾಜಿಯಾಗಬಲ್ಲ […]

ಮಿಜೋರಾಂನಲ್ಲಿ ಸಶಸ್ತ್ರ ಕುಕಿ ಒಳನುಸುಳುವಿಕೆ ಸಮಸ್ಯೆ: ಜಂಟಿ ಕಾರ್ಯಾಚರಣೆಗೆ ಮುಂದಾದ ಭಾರತ ಮತ್ತು ಬಾಂಗ್ಲಾದೇಶ

ನವದೆಹಲಿ: ಈಶಾನ್ಯ ಭಾರತದ ಪ್ರಕ್ಷುಬ್ಧ ಮಿಜೋರಾಂ ರಾಜ್ಯಕ್ಕೆ ಸಶಸ್ತ್ರ ಬಂಡುಕೋರರು ನಿರಾಶ್ರಿತರಾಗಿ ನುಸುಳುತ್ತಿರುವ ಆತಂಕಕಾರಿ ಸುದ್ದಿಯಿಂದ ಬಾಂಗ್ಲಾದೇಶ ಮತ್ತು ಭಾರತ ಆತಂಕಗೊಂಡಿವೆ. ದೆಹಲಿ ಮತ್ತು ಢಾಕಾ ಎರಡೂ ಪ್ರದೇಶದಲ್ಲಿನ ಹೊಸ ಭದ್ರತಾ ಸವಾಲುಗಳನ್ನು ಎದುರಿಸಲು ಗುಪ್ತಚರ ವರದಿಗಳನ್ನು ಹಂಚಿಕೊಳ್ಳುತ್ತಿದ್ದು, ಸ್ಥಳೀಯ ಪತ್ರಿಕೆ ಮತ್ತು ಸ್ಥಳೀಯ ಮೂಲಗಳಿಂದ ಮಾಹಿತಿ ಕ್ರೋಢೀಕರಿಸುತ್ತಿದೆ. ಕುಕಿ-ಚಿನ್ ರಾಷ್ಟ್ರೀಯ ಸೇನೆಯು (KNA) ಬಾಂಗ್ಲಾದೇಶ ಸೇನೆ ಮತ್ತು ಗಣ್ಯ ಅಪರಾಧ-ವಿರೋಧಿ ಪಡೆ ರಾಪಿಡ್ ಆಕ್ಷನ್ ಬೆಟಾಲಿಯನ್ (RAB) ನೊಂದಿಗೆ ಹಲವಾರು ಕದನಗಳಲ್ಲಿ ತೊಡಗಿದೆ. ದಾಳಿಯ ಸಮಯದಲ್ಲಿ, […]

ಉಡುಪಿ ವೀಡಿಯೋ ಪ್ರಕರಣ: ಆ. 4 ರಂದು ರಾಜ್ಯಪಾಲರನ್ನು ಭೇಟಿಯಾಗಿ ವಿಶೇಷ ತನಿಖೆಗೆ ಕೋರಿಕೆ ಸಲ್ಲಿಸಲಿರುವ ಉಡುಪಿ ಶಾಸಕರು

ಉಡುಪಿ: ಶೌಚಾಲಯದಲ್ಲಿ ಮೊಬೈಲ್ ಬಳಸಿ ಮೂವರು ವಿದ್ಯಾರ್ಥಿನಿಯರು ಸಹ ವಿದ್ಯಾರ್ಥಿನಿಯ ವೀಡಿಯೋ ಚಿತ್ರೀಕರಣ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲೆಯ ಐವರು ಶಾಸಕರು ಆಗಸ್ಟ್ 4 ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ತಿಳಿಸಲಿದ್ದು, ವಿಶೇಷ ತನಿಖೆಗೆ ಕೋರಿಕೆ ಸಲ್ಲಿಸಲಿದ್ದಾರೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನೇತ್ರ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಆಡಳಿತಾಧಿಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವ ಮೂಲಕ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು […]