ವೀಡಿಯೋ ಪ್ರಕರಣ: ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ನ್ಯಾಯಕ್ಕಾಗಿ ಆಗ್ರಹಿಸಲು ಹಿಂದೂ ಯುವ ಸೇನೆ ಕರೆ

ಉಡುಪಿ: ಇಲ್ಲಿನ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಹಿಂದೂ ಹುಡುಗಿಯರು ಶೌಚಾಲಯ ಬಳಸುವ ದೃಶ್ಯವನ್ನು ಮುಸ್ಲಿಮ್ ಸಹಪಾಠಿ ಹುಡುಗಿಯರು ಗೌಪ್ಯವಾಗಿ ಚಿತ್ರೀಕರಿಸಿ ವ್ಯವಸ್ಥಿತವಾಗಿ ಮುಸ್ಲಿಮ್ ಹುಡುಗರ ಜೊತೆ ಹಂಚಿಕೊಂಡಿರುವ ಮಾಹಿತಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದು ಕಾಲೇಜುಗಳಲ್ಲಿ ನಮ್ಮ ಹಿಂದೂ ಹುಡುಗಿಯರನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ನಡೆಸಿ ಲವ್ ಜಿಹಾದ್ ಗೆ ಬಲಿಯಾಗಿಸುವ ಷಡ್ಯಂತ್ರದಂತೆ ಗೋಚರಿಸುತ್ತಿದೆ. ಆದ್ದರಿಂದ ಈ ಘಟನೆಯ ಬಗ್ಗೆ ಸಮರ್ಪಕವಾಗಿ ತನಿಖೆ ನಡೆದು, ಇದರ ಹಿಂದೆ ಇರುವ ಷಡ್ಯಂತ್ರದ ಜಾಲ […]

‘ಕರ್ನಾಟಕ ಸ್ಟೋರಿ’ಗೆ ಆಸ್ಪದವಿಲ್ಲ; ವೀಡಿಯೋ ಪ್ರಕರಣ ಸಮಗ್ರ ತನಿಖೆ ನಡೆಸಿ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಜಿಹಾದಿ ಮಾನಸಿಕತೆಯ ಕೆಲವು ವಿದ್ಯಾರ್ಥಿನಿಯರು ಉಡುಪಿ‌ಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಳೆದ ಒಂದು ವರ್ಷದಿಂದ ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಶಿಕ್ಷಣ ಮತ್ತು ಸಾಂಸ್ಕೃತಿಕ ನಗರಿ ಉಡುಪಿಯ ಖ್ಯಾತಿಗೆ ಮಸಿ ಬಳಿಯುವ ಪ್ರಯತ್ನದ ಮೂಲಕ ‘ಕೇರಳ ಸ್ಟೋರಿ’ಯಂತೆ ಉಡುಪಿ ಸಹಿತ ‘ಕರ್ನಾಟಕ ಸ್ಟೋರಿ’ಗೆ ಸ್ಕೆಚ್ ಹಾಕಲು ಎಂದಿಗೂ ಅವಕಾಶ ನೀಡಲಾರೆವು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಈಗಾಗಲೇ […]

ಕರಾವಳಿ ತೀರದಲ್ಲಿ ಸಾಗುವ ವೈವಿಧ್ಯ ದೃಶ್ಯಾವಳಿಯ ‘ಆರ’: ಜುಲೈ 28 ರಂದು ಬೆಳ್ಳಿತೆರೆಗೆ; ಕಾಡಿನ ಕಾಡುವ ಕಥೆಯಿದು…

ಉಡುಪಿ: ಕರಾವಳಿ ತೀರದ ಸುಂದರ ಸೊಗಡಿನ ಕಥಾ ಹಂದರದ ಕನ್ನಡ ಚಲನಚಿತ್ರ “ಆರ”ದ ಅಧಿಕೃತ ಟೀಸರ್ ಬಿಡುಗಡೆಯಾಗಿದೆ. ಆರ , ಮುಗ್ಧ ಜೀವನದಲ್ಲಿ ಸುಂದರ ದೈವಿಕ ಹಸ್ತಕ್ಷೇಪದ ದೇವರ ನಾಟಕದ ಕಥಾನಕವನ್ನು ಹೊಂದಿದೆ. ಚಿತ್ರವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶಿಸಿದ್ದಾರೆ ಮತ್ತು ಸುಜಾತಾ ಚಡಗ, ಚಂದ್ರಶೇಖರ್ ಮತ್ತು ರೋಹಿತ್ ನಿರ್ಮಿಸಿದ್ದಾರೆ. ರೋಹಿತ್, ದೀಪಿಕಾ ಆರಾಧ್ಯ, ಆನಂದ್ ನೀನಾಸಂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಹಾಡುಗಳನ್ನು ಗಿರೀಶ್ ಹೋತೂರ್ ಸಂಯೋಜಿಸಿದ್ದಾರೆ. ಅಜಿತ್ ಕೇಶವ, ರೋಹಿತ್, ರಾಕೇಶ್, ಮನು ದೇವರಹಳ್ಳಿ ಸಾಹಿತ್ಯ ಬರೆದಿದ್ದಾರೆ. […]

ಕಾಪು: ಮಹಾಲಕ್ಷ್ಮಿ ಅತಿಥಿ ಗೃಹ ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಕಾಪು: ಇಲ್ಲಿನ ಹಳೆ ಮಾರಿಗುಡಿ ದೇವಸ್ಥಾನದ ಬಳಿ ಹೊಸದಾಗಿ ನಿರ್ಮಾಣಗೊಂಡಿರುವ ಮಹಾಲಕ್ಷ್ಮಿ ಅತಿಥಿ ಗೃಹ ಇದರ ಉದ್ಘಾಟನೆಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು. ಬಳಿಕ ದೇವಸ್ಥಾನದ ಇ-ಹುಂಡಿಗೆ ಚಾಲನೆ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಎಪಿಎಂಸಿ ಜಾಗ ಮಾರಾಟ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ವಲಸೆ ಕಾರ್ಮಿಕರ ಸಂಘ

ಉಡುಪಿ: ಆದಿ ಉಡುಪಿಯಲ್ಲಿರುವಂತಹ ಮಾರುಕಟ್ಟೆ ಕೃಷಿಕರು ಉತ್ಪಾದನೆ ಮಾಡಿದ ಬೆಳೆಗಳನ್ನು ಮಾರಾಟ ಮಾಡುವಂತಹ ಸ್ಥಳ. ಇದು ಸರಕಾರ ಮತ್ತು ಚುನಾಯಿತ ಜನಪ್ರತಿನಿಧಿಗಳ ಸಮಿತಿಯ ಮುಖಾಂತರ ಆಡಳಿತವಾಗುವಂತಹದ್ದು. ಇದುವರೆಗೂ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅದನ್ನು ಲೀಸ್ ಕಮ್ ಸೇಲ್ ವ್ಯವಸ್ಥೆಯಡಿಯಲ್ಲಿ 4 ಸೆನ್ಸ್ ಜಾಗವನ್ನು 11 ಭಾಗಗಳಾಗಿ ಒಟ್ಟು 54 ಸೆನ್ಸ್ ಜಾಗ ಮಾರಾಟ ಮಾಡಿರುವ ಘಟನೆ ನಡೆದಿದ್ದು ತುಂಬಾ ಬೇಸರವಾಗಿದೆ. ಇದು ವರ್ತಕರಿಗೆ ಹಾಗೂ ಕೃಷಿಕರಿಗೆ ಮೀಸಲಿರುವ ಜಾಗ ಮುಂದಿನ ದಿನಗಳಲ್ಲಿ ಎಪಿಎಂಸಿಯ ಜಾಗ […]