ವೀಡಿಯೋ ಪ್ರಕರಣ: ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ನ್ಯಾಯಕ್ಕಾಗಿ ಆಗ್ರಹಿಸಲು ಹಿಂದೂ ಯುವ ಸೇನೆ ಕರೆ

ಉಡುಪಿ: ಇಲ್ಲಿನ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಹಿಂದೂ ಹುಡುಗಿಯರು ಶೌಚಾಲಯ ಬಳಸುವ ದೃಶ್ಯವನ್ನು ಮುಸ್ಲಿಮ್ ಸಹಪಾಠಿ ಹುಡುಗಿಯರು ಗೌಪ್ಯವಾಗಿ ಚಿತ್ರೀಕರಿಸಿ ವ್ಯವಸ್ಥಿತವಾಗಿ ಮುಸ್ಲಿಮ್ ಹುಡುಗರ ಜೊತೆ ಹಂಚಿಕೊಂಡಿರುವ ಮಾಹಿತಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ಇದು ಕಾಲೇಜುಗಳಲ್ಲಿ ನಮ್ಮ ಹಿಂದೂ ಹುಡುಗಿಯರನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ನಡೆಸಿ ಲವ್ ಜಿಹಾದ್ ಗೆ ಬಲಿಯಾಗಿಸುವ ಷಡ್ಯಂತ್ರದಂತೆ ಗೋಚರಿಸುತ್ತಿದೆ.

ಆದ್ದರಿಂದ ಈ ಘಟನೆಯ ಬಗ್ಗೆ ಸಮರ್ಪಕವಾಗಿ ತನಿಖೆ ನಡೆದು, ಇದರ ಹಿಂದೆ ಇರುವ ಷಡ್ಯಂತ್ರದ ಜಾಲ ಬಯಲಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವವರೆಗೆ ಉಡುಪಿ ಜಿಲ್ಲೆಯ ಎಲ್ಲಾ ಹಿಂದೂ ವಿದ್ಯಾರ್ಥಿನಿಯರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ತರಗತಿಗಳನ್ನು ಬಹಿಷ್ಕರಿಸಿ ಸರಕಾರವನ್ನು ಶೀಘ್ರ ನ್ಯಾಯಕ್ಕಾಗಿ ಓತ್ತಾಯಿಸಬೇಕು ಎಂದು ಹಿಂದೂ ಯುವ ಸೇನೆ ಅಧ್ಯಕ್ಷ ಅಜಿತ್ ಕುಮಾರ್
ಕರೆ ನೀಡಿದ್ದಾರೆ.

ಏತನ್ಮಧ್ಯೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಜುಲೈ 27 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರು ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಈ ಬಗ್ಗೆ ವಿವರವಾದ ತನಿಖೆಗೆ ಒತ್ತಾಯಿಸಿದ್ದಾರೆ.