ದೇವಾಲಯಗಳ ಒಳಗಡೆ ಮೊಬೈಲ್ ಫೋನ್ ಬಳಕೆ ನಿಷೇಧ
ಬೆಂಗಳೂರು: ರಾಜ್ಯದ ಮುಜುರಾಯಿ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ ಎಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶ ಪ್ರಕಟಿಸಿದೆ. ಕರ್ನಾಟಕದ ದೇವಾಲಯಗಳ ಒಳಗಡೆ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ಮೊಬೈಲ್ ಬಳಕೆ ನಿಷೇಧದ ಬಗ್ಗೆ ಈ ಹಿಂದೆ ಕೂಡ ಸಾಕಷ್ಟು ಚರ್ಚೆ ನಡೆದಿದ್ದು, ಈಗ ಅಧಿಕೃತವಾಗಿ ಮೊಬೈಲ್ ಫೋನ್ ಬಳಕೆಗೆ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿಷೇಧಹೇರಿ ಆದೇಶ ಪ್ರಕಟಿಸಿದೆ. ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್ ಬಳಕೆ ಮಿತಿ […]
ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದು ಹಾಗೆಯೇ ಎಳೆದೊಯ್ದ ಟಿಪ್ಪರ್
ಉಡುಪಿ: ಸ್ಯಾಂಟ್ರೋ ಕಾರನ್ನು ಕನ್ನಂಗಾರ್ ಬೈಪಾಸ್ ಬಳಿ ಟಿಪ್ಪರ್ ಹಿಂದಿನಿಂದ ಢಿಕ್ಕಿ ಹೊಡೆದು ಗಮನಿಸದೆ ಹೆಜಮಾಡಿಯ ಟೋಲ್ ಗೇಟ್ ವರೆಗೂ ಎಳೆದುಕೊಂಡು ಹೋಗಿರುವ ಪ್ರಸಂಗ ವರದಿಯಾಗಿದೆ. ಟಿಪ್ಪರ್ ಬೆಳ್ಮಣಿನಿಂದ ಬೈಕಂಪಾಡಿಗೆ ಸಾಗುತ್ತಿತ್ತು .ಕಾರು ಅಪಘಾತಕ್ಕೊಳಗಾದ ನಂತರ ಕಾರು ಸಿಲುಕಿಕೊಂಡದ್ದು ಗೊತ್ತಿಲ್ಲದ ಟಿಪ್ಪರ್ ಚಾಲಕ ಟಿಪ್ಪರನ್ನು ಚಲಾಯಿಸಿದ್ದಾನೆ. ಬೇರೊಂದು ಕಾರಿನವರು ಓವರ್ ಟೆಕ್ ಮಾಡಿ ನಿಲ್ಲಿಸಲು ಸೂಚಿಸಿದರೂ ಟಿಪ್ಪರನ್ನು ಚಲಾಯಿಸುತ್ತಲೇ ಇರುವ ದೃಶ್ಯ ವೈರಲ್ ಆಗಿದೆ. ಬೇರೆ ಕಾರಿನವರು ಹೇಳಿದ ಬಳಿಕ ಟಿಪ್ಪರ್ ಚಾಲಕ ಹೆಜಮಾಡಿಯಲ್ಲಿ ನಿಲ್ಲಿಸಿದ್ದಾನೆ. ಪಡುಬಿದ್ರಿ […]
ವಿಶ್ವದ ಮೋಸ್ಟ್ ವಾಂಟೆಡ್ ಕಾರು Tesla ಮೊದಲ ಸ್ಥಾನದಲ್ಲಿ: 2ನೇ ಸ್ಥಾನದಲ್ಲಿ JEEP
ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಯುಕೆ ಮೂಲದ ಸಂಸ್ಥೆ ಆಟೋ ಟ್ರೇಡರ್ ಪ್ರಕಾರ, ಟೆಸ್ಲಾ ವಿಶ್ವದಲ್ಲಿ ಅತಿ ಹೆಚ್ಚು ಜನರ ಖರೀದಿಸಲು ಬಯಸುವ ಕಾರ್ ಬ್ರ್ಯಾಂಡ್ ಆಗಿದೆ. ಕಾರು ಕೊಳ್ಳಲು 39 ದೇಶಗಳಲ್ಲಿ ಗೂಗಲ್ ಮೂಲಕ ಅತಿ ಹೆಚ್ಚು ಹುಡುಕಲಾದ ಕಾರ್ ಟೆಸ್ಲಾ ಆಗಿದೆ. ಇಡೀ ಪ್ರಪಂಚದಲ್ಲಿ ಜನ ಅತಿ ಹೆಚ್ಚಾಗಿ ಖರೀದಿಸಲು ಬಯಸುವ ಕಾರುಗಳನ್ನು ಕಂಡುಹಿಡಿಯಲು 180 ಕ್ಕೂ ಹೆಚ್ಚು ದೇಶಗಳಲ್ಲಿ 200 ಕ್ಕೂ ಹೆಚ್ಚು ಕಾರ್ ಬ್ರ್ಯಾಂಡ್‌ಗಳಿಗಾಗಿ ಜಾಗತಿಕ ಸರ್ಚ್ ಡೇಟಾವನ್ನು ವಿಶ್ಲೇಷಿಸಲಾಗಿದೆ.ಎಲೋನ್ ಮಸ್ಕ್ […]
ಅನಾರೋಗ್ಯದಿಂದ ಬಳಲುತ್ತಿದ್ದಖ್ಯಾತ ಗಣಿತಶಾಸ್ತ್ರಜ್ಞೆ ಡಾ. ಮಂಗಳಾ ನಾರ್ಲಿಕರ್ ನಿಧನ
ಪುಣೆ(ಮಹಾರಾಷ್ಟ್ರ): ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಹಾರಾಷ್ಟ್ರದ ಪುಣೆ ನಗರದ ತಮ್ಮನಿವಾಸದಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಖ್ಯಾತ ಖಗೋಳ, ಭೌತಶಾಸ್ತ್ರಜ್ಞ ಡಾ.ಜಯಂತ್ ನಾರ್ಲಿಕರ್ ಅವರ ಪತ್ನಿ ಖ್ಯಾತ ಗಣಿತಶಾಸ್ತ್ರಜ್ಞೆ ಮತ್ತು ವಿಜ್ಞಾನಿ ಡಾ.ಮಂಗಳಾ ನಾರ್ಲಿಕರ್(80) ಅವರು ವಿಧಿವಶರಾಗಿದ್ದಾರೆ. ಡಾ. ಮಂಗಳಾ ನಾರ್ಲಿಕರ್ ಅವರಿಗೆ ಕೆಲವು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಚಿಕಿತ್ಸೆಯ ನಂತರ ಅವರು ಗುಣಮುಖರಾಗಿದ್ದರು. ಆದರೆ, ಆ ನಂತರ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದಿತು. ಅದಕ್ಕೆ ಕಳೆದ ಒಂದು ವರ್ಷದಿಂದ […]
ಲಡಾಖ್‌ನಲ್ಲಿ ಭಾನುವಾರ ಬೌದ್ಧ ಸನ್ಯಾಸಿಗಳ ಬೃಹತ್ ಶಾಂತಿ ನಡಿಗೆ; ಪ್ರಧಾನಿ ಮೋದಿ ಕರೆಗೆ ಶ್ಲಾಘನೆ
ಲಡಾಖ್: ಭಾರತದಲ್ಲಿ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ತೆಗೆದುಕೊಂಡ ಪ್ರಮುಖ ಕ್ರಮಗಳಿಗೆ ಬೌದ್ಧ ಸನ್ಯಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬೌದ್ಧ ಸನ್ಯಾಸಿಗಳು ಭಾನುವಾರ ಲಡಾಖ್‌ನಲ್ಲಿ ಶಾಂತಿ ನಡಿಗೆಯಲ್ಲಿ ನಡೆಸಿದರು. ವಿಶ್ವ ಶಾಂತಿ ಮತ್ತು ಭಾರತದಲ್ಲಿ ಬೌದ್ಧ ಸ್ಥಳಗಳ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯನ್ನು ಅವರು ಶ್ಲಾಘಿಸಿದರು. ಮಹಾಬೋಧಿ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರದ (ಎಂಐಎಂಸಿ) ಸಂಸ್ಥಾಪಕ ಮತ್ತು ಅಧ್ಯಕ್ಷ ಭಿಕ್ಕು ಸಂಘಸೇನ ಶಾಂತಿ ಮೆರವಣಿಗೆ ಉದ್ದೇಶಿಸಿ ಮಾತನಾಡಿ, “ಇಡೀ ಜಗತ್ತು ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಶಾಂತಿ, […]