ಮೂಲಭೂತ ಸೌಕರ್ಯದ ಕೊರತೆ: ಉಭಯ ಜಿಲ್ಲೆಗಳ 55 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ
ಉಡುಪಿ/ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಸರ್ಕಾರಿ ಪ್ರಾಥಮಿಕ ಶಾಲೆಗಳು 2023-24ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಗೆ ‘ಶೂನ್ಯ ಪ್ರವೇಶಾತಿ’ ದಾಖಲಿಸಿವೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಾರ ಉಭಯ ಜಿಲ್ಲೆಗಳ 55 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ಯಾವುದೇ ವಿದ್ಯಾರ್ಥಿ ದಾಖಲಾಗಿಲ್ಲ. ಪುತ್ತೂರು ತಾಲೂಕಿನ ಎರಡು, ಬಂಟ್ವಾಳದ ನಾಲ್ಕು, ಬೆಳ್ತಂಗಡಿಯಲ್ಲಿ ಮೂರು, ಮಂಗಳೂರು ಉತ್ತರದಲ್ಲಿ ಎರಡು, ಮಂಗಳೂರು ದಕ್ಷಿಣದಲ್ಲಿ ಎರಡು, ಮೂಡುಬಿದಿರೆಯಲ್ಲಿ ಮೂರು ಮತ್ತು ಸುಳ್ಯ ತಾಲೂಕಿನ ಎಂಟು ಶಾಲೆ ಸೇರಿ ದಕ್ಷಿಣ […]
ಅರ್ಜಿದಾರರ ಮನೆ ಬಾಗಿಲಿಗೆ ಜನನ ಮರಣ ಪ್ರಮಾಣ ಪತ್ರ ಯೋಜನೆಗೆ ಚಾಲನೆ
ಉಡುಪಿ: ನಗರಸಭೆವತಿಯಿಂದ ಜನನ ಮರಣ ಪ್ರಮಾಣಪತ್ರಗಳನ್ನು ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವ ವಿಶಿಷ್ಠ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜೂನ್ 8 ರಂದು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೂತನವಾಗಿ ಆರಂಭಿಸಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಚೇರಿಯನ್ನು ಉದ್ಘಾಟಿಸಿದರು ಮತ್ತು ಜಿಲ್ಲಾ ಪಂಚಾಯತ್ ನ ಸಂಪನ್ಮೂಲ ಕೇಂದ್ರದಲ್ಲಿ ಮಹಿಳೆಯರಿಗಾಗಿ ನಡೆಯುತ್ತಿರುವ ಕೈ […]
ಅವಿಭಜಿತ ದ.ಕ ಜಿಲ್ಲೆಯಲ್ಲಿ ಧಾರಾಕಾರ ಮಳೆ; ಹೊಂಡ ಗುಂಡಿಯಿಂದ ಅಪಾಯಕ್ಕೆ ಆಹ್ವಾನವೀಯುತ್ತಿದೆ ರಾಷ್ಟ್ರೀಯ ಹೆದ್ದಾರಿ
ಉಡುಪಿ/ ಮಂಗಳೂರು: ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಉಡುಪಿ ಹಾಗೂ ಮಂಗಳೂರಿನ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ಥವಾಗಿದ್ದಲ್ಲದೆ, ಅಲ್ಲಲ್ಲಿ, ಮರ-ಮನೆಮಟ್ಟುಗಳು ಉರುಳಿ ಹಲವರು ಪ್ರಾಣ ಕಳೆದುಕೊಂಡ ಘಟನೆಗಳು ವರದಿಯಾಗಿವೆ. ಇದರ ಜೊತೆಗೆ ಧಾರಾಕಾರ ಮಳೆಯಿಂದಾಗಿ ಮುಲ್ಕಿ-ಮಂಗಳೂರು ಹಾಗೂ ನಂತೂರು-ಬಿ.ಸಿ ರೋಡು ರಾ.ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ಕಾಣಿಸಿಕೊಂಡಿದ್ದು ಅಪಾಯಕ್ಕೆ ಆಹ್ವಾನವೀಯುತ್ತಿದೆ. ಕುಂದಾಪುರ-ಉಡುಪಿ-ಮುಲ್ಕಿ ಮಾರ್ಗವಾಗಿ ಹಲವಾರು ವಾಹನಗಳು ಮಂಗಳೂರಿಗೆ ಪ್ರಯಾಣಿಸುತ್ತವೆ. ನಿತ್ಯ ಸಂಚಾರ ನಡೆಸುವ ಈ ವಾಹನಗಳು ರಾ.ಹೆದ್ದಾರಿಯ ಹೊಂಡ ಗುಂಡಿಗಳನ್ನು ತಪ್ಪಿಸಿಕೊಂಡು ಚಲಿಸಬೇಕಾದ ಪರಿಸ್ಥಿತಿ […]