ಸಾಸ್ತಾನ: ಜು. 13ರಂದು ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ದಾಸವಾಣಿ

ಸಾಸ್ತಾನ: ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂಟಪದಲ್ಲಿ ದೇಶದ ಹೆಸರಾಂತ ಹಿಂದೂಸ್ಥಾನಿ ಗಾಯಕರಾದ ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ದಾಸವಾಣಿ ಕಾರ್ಯಕ್ರಮ ಜುಲೈ 13ರ ಗುರುವಾರ ಸಂಜೆ 7ರಿಂದ ನಡೆಯಲಿದೆ. ಭಕ್ತಾಭಿಮಾನಿಗಳಿಗೆ ಇದು ಉಚಿತ ಕಾರ್ಯಕ್ರಮವಾಗಿದ್ದು, ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಹಾರ್ಮೊನಿಯಂನಲ್ಲಿ ಪ್ರೊ. ನರೇಂದ್ರ ಎಲ್. ನಾಯಕ್, ತಬ್ಲಾದಲ್ಲಿ ಕೇಶವ ಜೋಶಿ ಹಾಗೂ ಶ್ರೀಧರ ಪ್ರಭು, ತಾಳದಲ್ಲಿ ಪ್ರತೀಕ್ಷಾ ಪ್ರಭು ಸಹಕರಸಲಿದ್ದಾರೆ ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ

ಹೆಬ್ರಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಹೆಬ್ರಿ ಸಂತೆಕಟ್ಟೆಯ ಅರ್ಬೆಟ್ಟು ಭೀಮರಾಯ ಕಾಮತ್ ಮತ್ತು ಭಾಗ್ಯಶ್ರೀ ಕಾಮತ್ ದಂಪತಿಯ ಪುತ್ರ ಗಣೇಶ ಕಾಮತ್ ಅವರು ಉತ್ತೀರ್ಣರಾಗಿದ್ದಾರೆ. ಇವರು ಸಿಎ ಎಂ. ರವಿ ರಾವ್ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ ಶಿಪ್ ಮುಗಿಸಿದ್ದಾರೆ.

ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ

ಮಂಗಳೂರು: ಲೆಕ್ಕ ಪರಿಶೋಧಕರ ಸಂಸ್ಥೆ ಮೇ ತಿಂಗಳಲ್ಲಿ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತುಂಬೆಯ ಮಹಮ್ಮದ್ ಫಾರೀಸ್, ಬಂಟ್ವಾಳದ ಜೋಶ್ವಾ ಡಿಸೋಜ ತೇರ್ಗಡೆ ಹೊಂದಿದ್ದಾರೆ. ಇವರು ಸಿಎ ಚಂದ್ರಕಾಂತ್ ರಾವ್ ಮಾರ್ಗದರ್ಶನದಲ್ಲಿ ಆರ್ಟಿಕಲ್’ಶಿಪ್ ಮಾಡಿದ್ದಾರೆ.

ಸೆನ್ಸಾರ್ ಪಾಸಾದ ‘ಯಾನ್ ಸೂಪರ್‌ಸ್ಟಾರ್’ ತುಳು ಚಲನಚಿತ್ರ; ಆಗಸ್ಟ್ ನಲ್ಲಿ ತೆರೆಗೆ

ಆನಂದ್ ಫಿಲಂಸ್ ಮತ್ತು ಮಂಗಳೂರು ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಂಡು ಸಂತೋಷ್ ಶೆಟ್ಟಿ ನಿರ್ದೇಶನದ, ರಾಮ್ ಶೆಟ್ಟಿ ಪ್ರಸ್ತುತಪಡಿಸುತ್ತಿರುವ ತುಳು ಚಲನಚಿತ್ರ ‘ಯಾನ್ ಸೂಪರ್‌ಸ್ಟಾರ್’ ಚಿತ್ರೀಕರಣ ಮತ್ತು ಡಬ್ಬಿಂಗ್ ಪೂರ್ಣಗೊಂಡಿದೆ. ಆಗಸ್ಟ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ಉಡುಪಿ ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಜನಪ್ರಿಯ ಧಾರಾವಾಹಿ ‘ಸಿಐಡಿ’ ಖ್ಯಾತಿಯ ದಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ದಯಾನಂದ ಶೆಟ್ಟಿ ಜೊತೆಗೆ ಹರೀಶ್ ವಾಸು ಶೆಟ್ಟಿ, ಸಾಯಿ ಬಲ್ಲಾಳ್, ಖ್ಯಾತ ಹಾಸ್ಯ ನಟರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, […]

ಸತತ 14ನೇ ಬಾರಿಗೆ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ: ಬಜೆಟ್ ಮುಖ್ಯಾಂಶಗಳು ಇಂತಿವೆ

ಬೆಂಗಳೂರು: ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಸಿದ್ದರಾಮಯ್ಯ ಅವರು ಇಂದು 14ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಪೂರೈಕೆಗಾಗಿ ಬಜೆಟ್ ನ ಗಾತ್ರವನ್ನು 18,565 ಕೋಟಿ ರೂ ಹೆಚ್ಚಳ ಮಾಡಲಾಗಿದೆ. ಈ ಬಾರಿ 3,27,747 ಕೋಟಿ ರೂ ಗಾತ್ರದ ಬಜೆಟ್ ಮಂಡನೆಯಾಗಿದೆ. ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಜಾರಿಗೆ ಐದು ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಗೃಹ ಲಕ್ಷ್ಮಿ ಯೋಜನೆ – […]