ಅಡಿಕೆ ಕೊಳೆ ರೋಗ ಹಾಗೂ ಎಲೆಚುಕ್ಕಿ ರೋಗಗಳ ನಿರ್ವಹಣಾ ಕ್ರಮಗಳು

ಉಡುಪಿ: ಪ್ರಸಕ್ತ ಸಾಲಿನ ಮುಂಗಾರು ಚುರುಕಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆ ರೋಗ ಹಾಗೂ ಎಲೆಚುಕ್ಕೆ ರೋಗಗಳು ಬಾಧಿಸುವ ಸಾಧ್ಯತೆಯಿದ್ದು, ಮುಂಜಾಗೃತಾ ಕ್ರಮವಾಗಿ ಈ ಕೆಳಕಂಡ ರೋಗಗಳ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ತೋಟಗಾರಿಕೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ. ಅಡಿಕೆ ಕೊಳೆ ರೋಗದ ನಿರ್ವಹಣಾ ಕ್ರಮಗಳು: ಕೆಳಗೆ ಬಿದ್ದಿರುವ ರೋಗ ಪೀಡಿತ ಅಡಿಕೆ ಕಾಯಿ ಹಾಗೂ ಒಣಗಿದ ಹಿಂಗಾರಗಳನ್ನು ಆರಿಸಿ ತೆಗೆದು ಸುಡಬೇಕು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು. ತೋಟಗಳಲ್ಲಿ […]
ಮಾನನಷ್ಟ ಮೊಕದ್ದಮೆ: ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಗಾಂಧಿನಗರ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಸಾಮಾನ್ಯ ಜೈಲು ಶಿಕ್ಷೆ ವಿಧಿಸಲಾಗಿದ್ದು, ತಮ್ಮ ದೋಷಾರೋಪಣೆಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕ ಸಲ್ಲಿಸಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್, ತೀರ್ಪಿನ ಆಪರೇಟಿವ್ ಭಾಗವನ್ನು ಗಟ್ಟಿಯಾಗಿ ಓದುವಾಗ, ಈ ಹಿಂದೆ ಶಿಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವು “ನ್ಯಾಯಯುತ ಮತ್ತು ಕಾನೂನುಬದ್ದವಾಗಿದೆ” ಎಂದು ಹೇಳಿದರು. ಅಂತಹ ತಡೆಗಳು ಒಂದು ಅಪವಾದ ಎಂದು ಗಮನಿಸಿದರೆ, ನ್ಯಾಯಾಲಯವು […]
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಲಾವೃತ

ಮಂಗಳೂರು: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮೂಲ್ಕಿಯಲ್ಲಿರುವ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಲಾವೃತವಾಗಿದ್ದು, ಜನರು ಮೊಣಕಾಲು ಮಟ್ಟದ ನೀರಿನಲ್ಲಿ ತೆರಳಿ ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ದೇವಸ್ಥಾನದ ಕಡೆಗೆ ಹೋಗುವ ರಸ್ತೆ ಕೂಡಾ ಲಾವೃತವಾಗಿದ್ದು, ದೇಗುಲದ ಸುತ್ತಮುತ್ತಲಿನ ಹಲವು ಮನೆಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ.
ಮಣಿಪಾಲ ಪ್ರೆಸ್ಸಿನಲ್ಲಿ ಉದ್ಯೋಗಾವಕಾಶ

ಮಣಿಪಾಲ: ಮಣಿಪಾಲ ಪ್ರೆಸ್ಸಿನಲ್ಲಿ 2 ತಿಂಗಳ ಮಟ್ಟಿಗೆ ಬೈಂಡಿಂಗ್ ಕೆಲಸಕ್ಕೆ 100 ಜನ ಹುಡುಗಿಯರು/ಹೆಂಗಸರು ಬೇಕಾಗಿದ್ದು, ಉತ್ತಮ ಕಾರ್ಯದಕ್ಷತೆ ಹೊಂದಿರುವ 50 ಜನರಿಗೆ ಕಂಪನಿ ಕೆಲಸ ಮುಂದುವರಿಸಲು ಅವಕಾಶ ಇದೆ. ವೇತನ 16800 ಪಿ.ಎಫ್/ ಇ.ಎಸ್.ಐ ಸೌಲಭ್ಯವಿದೆ (8 ಗಂಟೆ ಕೆಲಸ) ಓವರ್ ಟೈಮ್: ಓವರ್ ಟೈಮ್ ಮಾಡಿದಲ್ಲಿ ಗಂಟೆಗೆ 70ರೂ ಹೆಚ್ಚು ಗಳಿಸಬಹುದು. ಕೆಲಸದ ಸಮಯ ಬೆಳಿಗ್ಗೆ 8.30 ರಿಂದ ಸಂಜೆ 5+ಓಟಿ. ಸ್ಥಳೀಯರಿಗೆ ಡ್ರಾಪ್ ಸೌಲಭ್ಯ ಇರುತ್ತದೆ. ದೂರದಿಂದ ಬರುವವರಿಗೆ ಪಿಜಿ ಸೌಲಭ್ಯ ಇದ್ದು, […]
ಬಸ್ ಡಿಪೋ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್

ಮಂಡ್ಯ: ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಜಗದೀಶ್ ಎಂಬುವರು ಬಸ್ ಡಿಪೋ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಂದ ವರ್ಗಾವಣೆ ಸೂಚನೆ ಪಡೆದಿದ್ದ ಜಗದೀಶ್, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಸಚಿವರೇ ಹೊಣೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ನಾಗಮಂಗಲದ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಈ ಘಟನೆ ನಡೆದಿದ್ದು, ಗುರುವಾರ ಜಗದೀಶ್ ಅವರ ವರ್ಗಾವಣೆ ಆದೇಶವನ್ನು ನೀಡಲು ಸಾರಿಗೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ತಮ್ಮ ವರ್ಗಾವಣೆಗೆ ಸಚಿವರು ಆದೇಶ […]