ಜೂನ್ 19 ರಂದು ಆರೋಗ್ಯ ಇಲಾಖೆಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಉಡುಪಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲಾ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ಹೆರಿಗೆ ತಜ್ಞರು (ಹಿರಿಯ/ ಅನುಭವವುಳ್ಳ)-2 ಹುದ್ದೆ, ಮಕ್ಕಳ ತಜ್ಞರು, ಆಡಿಯೋಲಾಜಿಸ್ಟ್ ಹಾಗೂ ಇನ್ಸ್ಟ್ರಕ್ಟರ್-ಯಂಗ್ ಹಿಯರಿಂಗ್ ಇಮ್‌ಪೇರ್ಡ್ ಚಿಲ್ಡ್ರನ್ ತಲಾ -1 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಜೂನ್ 19 ರಂದು ಬೆಳಗ್ಗೆ 10.30 ಕ್ಕೆ ನಗರದ ಅಜ್ಜರಕಾಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಮೂಲ […]

ನೀಟ್ ಟಾಪರ್ ನಿತ್ಯ ಗಂಗಾರತಿ ಬೆಳಗುವ ವಿಭು ಉಪಾಧ್ಯಾಯನ ಸಾಧನೆ ಸರ್ವರಿಗೂ ಮಾದರಿ

ಹೊಸದಿಲ್ಲಿ: ಮಳೆ-ಗಾಳಿ-ಛಳಿ ಎಂದು ಲೆಕ್ಕಿಸದೆ ನಿತ್ಯವೂ ಗಂಗಾನದಿಗೆ “ಗಂಗಾರತಿ” ಬೆಳಗುವ ಉತ್ತರ ಪ್ರದೇಶದ ಬದೌನ್‌ನ 17 ವರ್ಷದ ಬಾಲಕ ವಿಭು ಉಪಾಧ್ಯಾಯ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಯಲ್ಲಿ 720 ಕ್ಕೆ 662 ಅಂಕಗಳೊಂದಿಗೆ ಮೊದಲಪ್ರಯತ್ನದಲ್ಲೆ ತೇರ್ಗಡೆಯಾಗಿ ದೇಶದಲ್ಲಿ ಮನೆಮಾತಾಗಿದ್ದಾನೆ. ಉತ್ತರಪ್ರದೇಶದ ಬದೌನ್ ಜಿಲ್ಲೆಯವನಾದ ವಿಧು ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಮಾತನಾಡುತ್ತಾ, ನಾನು ಚಿಕ್ಕಂದಿನಿಂದಲೂ ವೈದ್ಯನಾಗಲು ಬಯಸಿದ್ದೆ ಮತ್ತು ಇದಕ್ಕಾಗಿ ನಾನು 9 ನೇ ತರಗತಿಯಿಂದಲೇ ತಯಾರಿ ಆರಂಭಿಸಿದ್ದೆ ಎಂದಿದ್ದಾನೆ. ನೀಟ್ ಪರೀಕ್ಷೆಯಲ್ಲಿ 720 ರಲ್ಲಿ […]

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ನೇಮಕ

ಬೆಂಗಳೂರು: ಶುಕ್ರವಾರದಂದು ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ಎಂಪಿ ಅವರನ್ನು ನೇಮಿಸಲಾಗಿದೆ. ರವಿ ಕುಮಾರ್ ಎಂ.ಆರ್. ಅವರನ್ನು ವರ್ಗಾಯಿಸಲಾಗಿದೆ. 2013ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಮುಲೈ ಮುಹಿಲನ್ ಎಂಪಿ ಬೆಂಗಳೂರಿನಲ್ಲಿರುವ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ರವಿಕುಮಾರ್ ಎಂ ಆರ್ ಅವರು 2022, ಅಕ್ಟೋಬರ್ 31 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ದಕ್ಷಿಣ […]

ನೀಟ್ ಪರೀಕ್ಷೆ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ನಿತೇಶ್ ಗೆ 564 ಅಂಕ

ಕುಂದಾಪುರ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿತೇಶ್ 564 ಅಂಕಗಳನ್ನು ಪಡೆದು ಅರ್ಹತೆ ಪಡೆದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.

ಕಾರ್ಕಳ‌: ಅಂಗನವಾಡಿಯಲ್ಲಿ ಕಳಪೆ ಆಹಾರ ವಿತರಣೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಶುಭದರಾವ್

ಕಾರ್ಕಳ: ತಾಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ತಾಯಿ ಕಾರ್ಡ್ ಮೂಲಕ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ವಿತರಣೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ. ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರ ಆರೋಗ್ಯದ ದೃಷ್ಟಿಯಿಂದ ಸರಕಾರವು ಅಕ್ಕಿ, ಬೇಳೆ, ಸಾಂಬಾರು ಹುಡಿ ಮತ್ತು ‌ಮೊಟ್ಟೆ ಮೊದಲಾದ ಪೋಷಕಾಂಶದ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದು ಈ ಬಾರಿ ವಿತರಣೆಯಾದ ಸಾಂಬಾರು ಹುಡಿಯ ಗುಣಮಟ್ಟ ತೀರ ಕಳಪೆಯಾಗಿದ್ದು ಉಂಡೆಗಳಾಗಿ ಪರಿವರ್ತನೆಯಾಗಿ ಬಳಕೆಗೆ […]