ಆಗಸ್ಟ್ 25 ರಂದು ತೆರೆಗೆ ಬರಲಿದ್ದಾನೆ ‘ಟೋಬಿ’: ಮಾರಿಗೆ ದಾರಿ ಮಾಡಿಕೊಡಿ ಎಂದ ರಾಜ್ ಬಿ ಶೆಟ್ಟಿ

ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಂತಹ ಆಫ್ ಬೀಟ್ ಸಿನಿಮಾಗಳನ್ನು ನೀಡಿ ಜನಮನ ಗೆದ್ದಂತಹ ರಾಜ್ ಬಿ ಶೆಟ್ಟಿ ಅವರ ಮುಂದಿನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸೇಡಿನ ಕಥಾಹಂದರ ಹೊಂದಿರುವ ‘ಟೋಬಿ’ ಶೀರ್ಷಿಕೆಯ ಈ ಚಿತ್ರವನ್ನು ಬಾಸಿಲ್ ಅಲ್ಚಕ್ಕಲ್ ನಿರ್ದೇಶಿಸಲಿದ್ದಾರೆ. ಚಿತ್ರದ ಕಥೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದು, ಮುಖ್ಯಭೂಮಿಕೆಯಲ್ಲಿ ಖುದ್ದು ಅಭಿನಯಿಸಲಿದ್ದಾರೆ. ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣವಿರುವ ಟೋಬಿಗೆ ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಒಂದು ಕುರಿಯ ಮೇಲೆ ತುಂಬಾ ಒತ್ತಡ […]

ಬಾಲ ಕಾರ್ಮಿಕ ಪದ್ಧತಿಯಿಂದ ಯುವ ಸಂಪತ್ತು ವ್ಯರ್ಥವಾಗಿ ದೇಶದ ಅಭಿವೃದ್ದಿಗೆ ತೊಡಕು: ಶಾಸಕ ಯಶ್ಪಾಲ್ ಸುವರ್ಣ

ಉಡುಪಿ: ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿ ದಾರಿ ತಪ್ಪಲಿದ್ದು, ಇದರಿಂದ ದೇಶದ ಯುವ ಸಂಪತ್ತು ವ್ಯರ್ಥವಾಗುವುದರಿಂದ ದೇಶದ ಅಭಿವೃದ್ಧಿಗೆ ತೊಡಕಾಗಲಿದೆ. ಆದ್ದರಿಂದ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು. ಅವರು ಸೋಮವಾರ ನಗರದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ […]

ಮುಂಗಾರು ಋತುವಿನ ಎಫೆಕ್ಟು: ಕರಾವಳಿಯಲ್ಲಿ ಮೀನಿನ ದರ ದುಪ್ಪಟ್ಟು!!

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆಯ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ಹಾಗೂ ಎರಡು ತಿಂಗಳುಗಳವರೆಗೆ ಮೀನುಗಾರಿಕೆಗೆ ನಿಷೇಧ ಹೇರಿರುವುದರಿಂದ ನಿರೀಕ್ಷೆಯಂತೆಯೆ ಮೀನಿನ ದರ ದುಪ್ಪಟ್ಟಾಗಿದೆ. ನಗರದ ಕೆಎಫ್‌ಡಿಸಿ ಯಲ್ಲಿ ಒಂದು ಕೆಜಿ ಬೊಳೆಂಜಿರ್ 1,600 ರೂ, ಅಂಜಲ್ ಮೀನು ಪ್ರತಿ ಕೆಜಿಗೆ 1300 ರೂಗೆ ಮಾರಾಟವಾಗಿದೆ. ಕೇವಲ 12 ದಿನಗಳ ಹಿಂದೆ ಈ ಮೀನುಗಳ ದರ ಈಗಿನ ದರದ ಅರ್ಧದಷ್ಟಿತ್ತು. ದೊಡ್ಡ ಸಿಗಡಿ ಕೆಜಿಗೆ 475 ರೂ ಹಾಗೂ ಬೂತಾಯಿ-ಬಂಗುಡೆ ಮೀನುಗಳು ಕ್ರಮವಾಗಿ ಪ್ರತಿ ಕೆಜಿಗೆ 250 ರೂ ಮತ್ತು […]

ಐಲೇಸಾ ತಂಡದಿಂದ ಊರಿಗೊಂದು ಕೆರೆ ಅಭಿಯಾನಕ್ಕೆ ಚಾಲನೆ

ಉಡುಪಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸದಸ್ಯ ಕಾರ್ಯದರ್ಶಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆರೆ ಸಂರಕ್ಷಣಾ ಇಲಾಖೆಯ ಸದಸ್ಯ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಇವರ ನೇತೃತ್ವದಲ್ಲಿ ಐಲೇಸಾ ತಂಡ ನೀರು ಮತ್ತು ಕೆರೆ ಸಂರಕ್ಷಣೆಯ ಸಲುವಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಂಗಳೂರು ಜೊತೆ ಸೇರಿ ಊರಿಗೊಂದು ಕೆರೆ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಜೂನ್ 11 ರಂದು ಝೂಮ್ ವರ್ಚುವಲ್ ವೇದಿಕೆಯಲ್ಲಿ ಉದ್ಘಾಟಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ […]

ಬ್ರಹ್ಮಾವರ: ಜೆಸಿ ಕೃಷ್ಣಮೂರ್ತಿ ಹೈಕಾಡಿ ಇವರಿಗೆ ಅತ್ಯುನ್ನತ ಅಧ್ಯಕ್ಷ ರನ್ನರ್‌ ಪ್ರಶಸ್ತಿ

ಬ್ರಹ್ಮಾವರ: ಜೆಸಿಐ ಇಂಡಿಯಾ ವಲಯ15ರ ನಿಲುಮೆ 2023 ಮಧ್ಯಂತರ ಸಮ್ಮೇಳನದಲ್ಲಿ ಜೆಸಿ ಕೃಷ್ಣಮೂರ್ತಿ ಹೈಕಾಡಿ ಇವರಿಗೆ ಉತ್ತಮ ಘಟಕ ಅಧ್ಯಕ್ಷ ರನ್ನರ್‌ ಪ್ರಶಸ್ತಿ ಮತ್ತು ವಿಶೇಷ ಯೋಜನೆಯಲ್ಲಿ ವಿನ್ನರ್‌ ಪ್ರಶಸ್ತಿ ಸೇರಿದಂತೆ ಸುಮಾರು 12 ಪ್ರಶಸ್ತಿಗಳನ್ನು ಪಡೆದುಕೊಂಡರು. 2023ರ ಜೆಸಿಐ ಬ್ರಹ್ಮಾವರ ಸೇವಾಮೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸಂಸ್ಥೆಯಿಂದ ಹಲವಾರು ತರಬೇತಿ ಕಾರ್ಯಕ್ರಮ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ತರಬೇತಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಪುರಸ್ಕಾರ, ಅಶಕ್ತರಿಗೆ ವೈದೈಕೀಯ ನೆರವು, ವಿದ್ಯಾರ್ಥಿಗಳಗೆ ಉತ್ತಮ ತರಬೇತಿ, ಮಹಿಳೆಯರಿಗೆ ಆರೋಗ್ಯ […]