ಆಯಶಸ್ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಸೇರಿದ ಮೋಯಿನ್ ಅಲಿ: ನಿವೃತ್ತಿ ವಾಪಸ್
ಲಂಡನ್: 2021ರಲ್ಲಿ ನಿವೃತ್ತಿ ಘೋಷಿಸಿದ್ದ 35 ವರ್ಷದ ಮೋಯಿನ್ ಅಲಿ ಅವರನ್ನು ಆಯಶಸ್ ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡ್ – ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಕ್ರಿಕೆಟ್ ಸರಣಿ ಆಯಶಸ್ನ ಮೊದಲೆರಡು ಪಂದ್ಯಗಳಿಗೆ ಮೋಯಿನ್ ಅಲಿ ಅವರನ್ನು ಸೇರಿಸಿಕೊಳ್ಳಲಾಗಿದೆ. 35 ವರ್ಷ ವಯಸ್ಸಿನ ಅನುಭವಿ ಸ್ಪಿನ್ನರ್ 2021ರಲ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇಂಗ್ಲೆಂಡ್ ತಂಡದಲ್ಲಿ ಆಟಗಾರರ ಗಾಯದ ಸಮಸ್ಯೆಯಿಂದಾಗಿ ಮತ್ತೆ ಅಲಿಗೆ ಮಣೆ ಹಾಕಲಾಗಿದೆ. ಆಸ್ಟ್ರೇಲಿಯಾ- ಭಾರತ ತಂಡಗಳ ನಡುವೆ ಲಂಡನ್‌ನ ಓವಲ್ ಮೈದಾನದಲ್ಲಿ […]
ಹವಾಮಾನ ಇಲಾಖೆ ಮುನ್ಸೂಚನೆ:ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮುಂದಿನ 48 ಗಂಟೆಗಳ ಕಾಲ ಮಳೆ:
ಬೆಂಗಳೂರು: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮುಂದಿನ 48 ಗಂಟೆಗಳವರೆಗೆ ಮಳೆಯಾಗಲಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-50 ಕಿಮೀಯಿಂದ 60 ಕಿ. ಮೀ ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಮುಂಗಾರು ಮಳೆ ವಿಳಂಬವಾಗಿದ್ದು, ರಾಜ್ಯದ ರೈತರನ್ನು ಚಿಂತೆಗೀಡು ಮಾಡಿದೆ. ಹೊಲಗಳನ್ನು ಬಿತ್ತನೆಗೆ ಅಣಿಗೊಳಿಸಿರುವ ಅನ್ನದಾತರು ಬೀಜ, ಗೊಬ್ಬರ ಖರೀದಿಸಿ ಆಕಾಶದತ್ತ ಮುಖ ಮಾಡಿ ಮಳೆರಾಯನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದೀಗ […]
ನೈವೇದ್ಯ ಸಲ್ಲಿಸುವ ಅವಕಾಶ : ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಶಬರಿಮಲೆ ಅಯ್ಯಪ್ಪನಿಗೆ ಇ-ಕಾಣಿಕಾ ಸೌಲಭ್ಯ
ಶಬರಿಮಲೆ (ಕೇರಳ): ಈ ಹಿಂದೆ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ವರ್ಚುವಲ್ ಸರತಿಯ ವ್ಯವಸ್ಥೆಯಲ್ಲಿ ದೇವಸ್ವಂ ಮಂಡಳಿ ಪ್ರಾರಂಭಿಸಿತ್ತು. ದೇವಾಲಯಗಳಲ್ಲಿ ದೇವರಿಗೆ ನೈವೇದ್ಯ, ಪೂಜೆ ಸಲ್ಲಿಸಬೇಕಾದರೆ ದೇವಸ್ಥಾನಕ್ಕೇ ಹೋಗಬೇಕೆಂದಿಲ್ಲ. ಈಗ ಮನೆಯಲ್ಲೇ ಕುಳಿತು ದೇವರಿಗೆ ಸಲ್ಲಿಸುವಂತಹ ತಂತ್ರಜ್ಞಾನಗಳು ಬೆಳೆದಿವೆ. ಆ ತಂತ್ರಜ್ಞಾನವನ್ನು ಹಲವು ದೇವಾಲಯಗಳು ಕೂಡ ಅಳವಡಿಸಿಕೊಂಡಿವೆ ಕೂಡ. ಅದರಂತೆಯೇ ಇನ್ಮುಂದೆ ಅಯ್ಯಪ್ಪ ಸ್ವಾಮಿಯ ಭಕ್ತರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅಯ್ಯಪ್ಪ ಸ್ವಾಮಿಗೆ ನೈವೇದ್ಯ ಸಲ್ಲಿಸಬಹುದು. ಶಬರಿಮಲೆಯ ಅಯ್ಯಪ್ಪನಿಗೆ ಭಕ್ತರು ಕಾಣಿಕೆ ಸಲ್ಲಿಸಲು ತಿರುವಾಂಕೂರು ದೇವಸ್ವಂ ಮಂಡಳಿಯು ಇ-ಕಾಣಿಕಾ […]
ಟೀ ಬ್ರೇಕ್ಗೆ 170ಕ್ಕೆ 3 ವಿಕೆಟ್ ಕಳೆದುಕೊಂಡ ಆಸಿಸ್ ICC WTC Final
ಲಂಡನ್: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಎರಡನೇ ಅವಧಿಯಲ್ಲಿ 97 ರನ್ ಬಿಟ್ಟು ಕೊಟ್ಟು, 1 ವಿಕೆಟ್ ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಟಿ ಬ್ರೇಕ್ ವೇಳೆಗೆ ಆಸ್ಟ್ರೇಲಿಯಾ ಉತ್ತಮ ಕಮ್ಬ್ಯಾಕ್ ಮಾಡಿದೆ. ದಿನದ ಎರಡನೇ ಸೆಷನ್ನಲ್ಲಿ ಕೇವಲ ಒಂದು ವಿಕೆಟ್ ಬಿಟ್ಟುಕೊಟ್ಟು 97 ರನ್ ಕಲೆಹಾಕಿದೆ. ಎರಡನೇ ಸೆಷ್ನ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದೆ. ಪ್ರಸ್ತುತ ಕ್ರೀಸ್ನಲ್ಲಿ ಸ್ಮಿತ್ ಮತ್ತು ಹೆಡ್ ಇದ್ದಾರೆ. ಮೊದಲ ಸೆಷನ್ನಲ್ಲಿ […]
2023 ಸಿಇಟಿ ಪರೀಕ್ಷೆಯ ಆರ್‌ಡಿ ಸಂಖ್ಯೆ ತಿದ್ದುಪಡಿಗೆ ಮತ್ತೊಂದು ಅವಕಾಶ
ಬೆಂಗಳೂರು : ಆರ್‌ಡಿ ಸಂಖ್ಯೆ ತಿದ್ದುಪಡಿಗೆ ಜೂನ್ 7 ರಿಂದ ಜೂನ್ 12 ರವರೆಗೆ ಅವಕಾಶ ನೀಡಲಾಗಿದೆ. ಸಿಇಟಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿರುವ ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್‌ಡಿ ಸಂಖ್ಯೆಯನ್ನು ಕಂದಾಯ ಇಲಾಖೆಯ ಆರ್.ಡಿ ಸಂಖ್ಯೆ ಜೊತೆ ನಮೂದಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಆದರೆ, ಸಾವಿರಾರು ಅಭ್ಯರ್ಥಿಗಳ ಈ ಸಂಖ್ಯೆಗಳು ನಾನಾ ಕಾರಣಗಳಿಗಾಗಿ ತಾಳೆಯಾಗದೆ ಇರುವ ಹಿನ್ನೆಲೆಯಲ್ಲಿ ಸೂಕ್ತ ತಿದ್ದುಪಡಿಗೆ ಜೂನ್ 7ರ ಸಂಜೆ 4 ಗಂಟೆಯಿಂದ ಜೂನ್ 12ರ ಬೆಳಿಗ್ಗೆ […]