ಪರ್ಸನಲೈಸ್ಡ್ ಲಾಕ್​ಸ್ಕ್ರೀನ್, ವಿಜೆಟ್ಸ್​ : ಆಯಪಲ್​ iPadOS 17 ಲಾಂಚ್

ಕ್ಯಾಲಿಫೋರ್ನಿಯಾ (ಅಮೆರಿಕ): ಆಯಪಲ್ ತನ್ನ ಹೊಸ ಆಪರೇಟಿಂಗ್ ಸಿಸ್ಟಂ ಸಾಫ್ಟವೇರ್ iOS 17 ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಹಲವಾರು ಆಕರ್ಷಕ ಹೊಸ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಹಲವಾರು ಹೊಸ ಫೀಚರ್​ಗಳೊಂದಿಗೆ ಆಯಪಲ್ ತನ್ನ iPadOS 17 ಅನ್ನು ಲಾಂಚ್ ಮಾಡಿದೆ. ವರ್ಲ್ಡ್​ವೈಡ್ ಡೆವಲಪರ್ಸ್​ ಕಾನ್ಫರೆನ್ಸ್​ -2023 ತಂತ್ರಜ್ಞಾನ ಸಮಾವೇಶದಲ್ಲಿ ಆಯಪಲ್ ಹೊಸ OS ಅನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಹೊಸ ಟ್ಯಾಬ್ಲೆಟ್ ಸಾಫ್ಟವೇರ್ ಅಪ್ಡೇಟ್ iOS 17 ನಲ್ಲಿರುವ ಹಲವಾರು ಫೀಚರ್​ಗಳನ್ನೇ ಒಳಗೊಂಡಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. […]

ಮಾರುಕಟ್ಟೆಗೆ ಬಂತು 5 ಬಾಗಿಲಿನ ಮಾರುತಿ ಸುಜುಕಿ ಜಿಮ್ನಿ: ದರ, ವಿಶೇಷತೆ ಹೀಗಿದೆ ನೋಡಿ

ಕಳೆದ ಕೆಲವು ತಿಂಗಳಿಂದ ಕಾರುಪ್ರಿಯರಲ್ಲಿ ಸಾಕಷ್ಟು ರೋಮಾಂಚನ, ನಿರೀಕ್ಷೆ ಹುಟ್ಟಿಸಿದ್ದ ಮಾರುತಿ ಸುಜುಕಿ ಜಿಮ್ನಿ ಕಾರು ಕೊನೆಗೂ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಜಿಮ್ನಿ ಎಸ್​ಯುವಿ ಕಾರು ಬಿಡುಗಡೆಯಾಗಿದೆ. ಗ್ರಾಹಕರು ಆರ್ಡರ್‌ಗೆ ಮುಗಿಬೀಳುತ್ತಿದ್ದಾರೆ. ಅಂಥದ್ದೇನಿದೆ? ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ. ಹೊಚ್ಚ ಹೊಸ ಅತ್ಯಾಧುನಿಕ ವಾಹನದ ಬೆಲೆಗಳನ್ನು ಪ್ರಕಟಿಸಲಾಗಿದೆ. ಈಗಾಗಲೇ ಇದರ ಬುಕ್ಕಿಂಗ್ ಸಹ ಆರಂಭವಾಗಿದೆ. ಈವರೆಗೆ 30 ಸಾವಿರ ಆರ್ಡರ್‌ಗಳು ಬಂದಿವೆ ಎಂದು ತಿಳಿದುಬಂದಿದೆ. ಜಿಮ್ನಿ ಬೆಲೆ 12.74 ಲಕ್ಷ ರೂಪಾಯಿಯಿಂದ ಶುರುವಾಗಿ 15.05 […]

ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ: ಭಾರತ- ಆಸ್ಟ್ರೇಲಿಯಾ ಟೆಸ್ಟ್‌ ಚಾಂಪಿಯನ್‌ಶಿಪ್‌

ಲಂಡನ್​: ಲಂಡನ್‌ನ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಇತ್ತೀಚಿನ ವರದಿಯಂತೆ ಆಸೀಸ್ ತಂಡ 5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 13 ರನ್‌ ಗಳಿಸಿ ಆಡುತ್ತಿದೆ.ಬಹುನೀರೀಕ್ಷಿತ 2021-23 ರ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಪ್ರತಿಷ್ಟಿತ​ ಪಂದ್ಯಕ್ಕೆ ಓವಲ್​ ಮೈದಾನ ಆತಿಥ್ಯ ವಹಿಸಿದೆ. ಟಾಸ್ ಗೆದ್ದ ಭಾರತ ತಂಡ ಬೌಲಿಂಗ್​ ಆಯ್ದುಕೊಂಡಿದೆ. ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರೈಲು […]

ಕೇಂದ್ರ ಸರ್ಕಾರ : ತೊಗರಿ, ಭತ್ತ, ರಾಗಿ ಸೇರಿದಂತೆ ಮುಂಗಾರು ಹಂಗಾಮಿನ ಬೆಳೆಗಳಿಗೆ MSP ಹೆಚ್ಚಿಳ

ನವದೆಹಲಿ: ಕೇಂದ್ರ ಸರ್ಕಾರ ದೇಶದ ರೈತರಿಗೆ ಸಿಹಿ ಸುದ್ದಿ ನೀಡಿದೆ. ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದೆ. ಕೇಂದ್ರ ಸರ್ಕಾರ 2023- 24ನೇ ಸಾಲಿನ ಮಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಿದೆ. ಜೋಳ, ರಾಗಿ, ಮೆಕ್ಕೆಜೋಳ, ಹೆಸರು, ತೊಗರಿ, ಭತ್ತ, ಸೂರ್ಯಕಾಂತಿ ಹಾಗೂ ಎಣ್ಣೆ ಕಾಳುಗಳ ಎಂಎಸ್​ಪಿಯನ್ನು ಶೇ.6ರಿಂದ 7ರವರೆಗೆ ಹೆಚ್ಚಿಸಲಾಗಿದೆ. ಪ್ರತಿ ಭತ್ತದ ಬೆಲೆ ಕ್ವಿಂಟಲ್‌ಗೆ 143 ರೂ. ಏರಿಕೆ ಮಾಡಲಾಗಿದೆ. ಇದರಿಂದ ಕನಿಷ್ಠ ಬೆಲೆ ಕ್ವಿಂಟಲ್‌ಗೆ 2,183 […]

ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನ ನಿರಾಕರಣೆ : ಬರಗೂರು ರಾಮಚಂದ್ರಪ್ಪ

ಬೆಂಗಳೂರು : ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಗೆ ತಾತ್ಕಾಲಿಕ ಸಮಿತಿ ರಚನೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಆದರೆ ಸಮಿತಿಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸಾಹಿತಿ ನಿರಾಕರಿಸಿದ್ದಾರೆ. ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಸಮಿತಿ ರಚನೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ತಿಳಿಸಿದ್ದಾರೆ. ಈ ಮೂಲಕ ಹಿಂದಿನ ಬಿಜೆಪಿ ಸರ್ಕಾರದ […]