ಪರ್ಸನಲೈಸ್ಡ್ ಲಾಕ್​ಸ್ಕ್ರೀನ್, ವಿಜೆಟ್ಸ್​ : ಆಯಪಲ್​ iPadOS 17 ಲಾಂಚ್

ಕ್ಯಾಲಿಫೋರ್ನಿಯಾ (ಅಮೆರಿಕ): ಆಯಪಲ್ ತನ್ನ ಹೊಸ ಆಪರೇಟಿಂಗ್ ಸಿಸ್ಟಂ ಸಾಫ್ಟವೇರ್ iOS 17 ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಹಲವಾರು ಆಕರ್ಷಕ ಹೊಸ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಹಲವಾರು ಹೊಸ ಫೀಚರ್​ಗಳೊಂದಿಗೆ ಆಯಪಲ್ ತನ್ನ iPadOS 17 ಅನ್ನು ಲಾಂಚ್ ಮಾಡಿದೆ.

ವರ್ಲ್ಡ್​ವೈಡ್ ಡೆವಲಪರ್ಸ್​ ಕಾನ್ಫರೆನ್ಸ್​ -2023 ತಂತ್ರಜ್ಞಾನ ಸಮಾವೇಶದಲ್ಲಿ ಆಯಪಲ್ ಹೊಸ OS ಅನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಹೊಸ ಟ್ಯಾಬ್ಲೆಟ್ ಸಾಫ್ಟವೇರ್ ಅಪ್ಡೇಟ್ iOS 17 ನಲ್ಲಿರುವ ಹಲವಾರು ಫೀಚರ್​ಗಳನ್ನೇ ಒಳಗೊಂಡಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.

ಉದಾಹರಣೆಗೆ ಹೊಸ ಸಂದೇಶಗಳ ವೈಶಿಷ್ಟ್ಯಗಳು (new Messages features) (ಸ್ವಯಂಚಾಲಿತ ಧ್ವನಿ ಟಿಪ್ಪಣಿ ಪ್ರತಿಲೇಖನಗಳಂತಹವು), ಸುಧಾರಿತ ಏರ್‌ಡ್ರಾಪ್ ಸಾಮರ್ಥ್ಯಗಳು ಮತ್ತು ಪಠ್ಯ ಇನ್‌ಪುಟ್‌ಗಾಗಿ ಉತ್ತಮ ಸ್ವಯಂ ಸರಿಪಡಿಸುವಿಕೆ ಫೀಚರ್​ಗಳನ್ನು ಇದು ಹೊಂದಿರಬಹುದು.

ಲಾಕ್​ಸ್ಕ್ರೀನ್ ಅನ್ನು ಪರ್ಸನಲೈಸ್ ಮಾಡುವ ಆಪ್ಷನ್​ನೊಂದಿಗೆ ಐಪ್ಯಾಡ್​ iOS ಗೆ ಮತ್ತೂ ಹತ್ತಿರವಾಗುತ್ತಿದೆ. ಇದು ಐಫೋನ್‌ನಲ್ಲಿ ಕಾರ್ಯನಿರ್ವಹಿಸುವಂತೆಯೇ ಕೆಲಸ ಮಾಡಲಿದೆ.

ಆಯಪಲ್‌ನ ಸಾಫ್ಟ್‌ವೇರ್ ವಿಭಾಗದ ವೈಸ್ ಪ್ರೆಸಿಡೆಂಟ್ ಆಗಿರುವ ಕ್ರೇಗ್ ಫೆಡೆರಿಘಿ ಅವರು ಹೋಮ್ ಸ್ಕ್ರೀನ್‌ನಲ್ಲಿ ಸ್ಥಾಪಿಸಬಹುದಾದ ಹೊಸ ಇಂಟರ್ಯಾಕ್ಟಿವ್ ವಿಜೆಟ್‌ಗಳನ್ನು ಸಹ ಪ್ರದರ್ಶಿಸಿದರು.

iPadOS 17 ನಲ್ಲಿ ಹೆಲ್ತ್ ಆಯಪ್ ಅನ್ನು ಸಹ ಸೇರಿಸಲಾಗುತ್ತದೆ.

ಐಪ್ಯಾಡ್ ಇನ್ನು ಮುಂದೆ iOS ನಂತೆಯೇ ಲೈವ್ ಆಯಕ್ಟಿವಿಟೀಸ್​ಗಳನ್ನು ಸಹ ತೋರಿಸಲಿದೆ. ಭವಿಷ್ಯದ ಆವೃತ್ತಿಗಳಲ್ಲಿ The Notes app ಮತ್ತು PDF annotation ಗಳನ್ನು ಕೂಡ ಹೈಲೈಟ್ ಮಾಡಲಾಗುವುದು. ಮಷಿನ್ ಲರ್ನಿಂಗ್ ಮಾಡೆಲ್​ಗಳ ಮೂಲಕ iPadOS ಇನ್ನು ಮುಂದೆ PDF ನಲ್ಲಿನ ಫೀಲ್ಡ್​ಗಳನ್ನು ಗುರುತಿಸಲು ಸಾಧ್ಯವಾಗಲಿದೆ ಎಂದು ಫೆಡೆರಿಘಿ ತಿಳಿಸಿದರು.

iPadOS 17 ನಲ್ಲಿನ Notes app ನಲ್ಲಿ PDF ಗಳನ್ನು ನೈಜ ಸಮಯದಲ್ಲಿ ಆರ್ಗನೈಸ್ ಮಾಡಲು, annotate ಮಾಡಲು ಮತ್ತು collaborate ಮಾಡಲು ಹೊಸ ಸೌಲಭ್ಯಗಳನ್ನು ಹೊಂದಿರಲಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಸಮಯದಲ್ಲಿ ಬಳಕೆದಾರರ ಗಮನವನ್ನು ಕೇಂದ್ರೀಕರಿಸಲು ಸಹಾಯಕವಾಗುವ stage manager ಅನ್ನು ಸುಧಾರಿಸಲು ತಾನು ಪ್ರಯತ್ನಿಸುತ್ತಿರುವುದಾಗಿ ಆಯಪಲ್ ಹೇಳಿದೆ. iOS 17 ನಲ್ಲಿ ಕೇವಲ Siri ಎಂದು ಹೇಳುವ ಮೂಲಕ ಸಿರಿಯನ್ನು ಆಯಕ್ಟಿವೇಟ್ ಮಾಡುವಂತೆಯೇ ಇದರಲ್ಲೂ ಮಾಡಬಹುದು. ಬಳಕೆದಾರರು ಯಾವುದೇ ಕಮಾಂಡ್​ಗಳನ್ನು ರಿಸ್ಟಾರ್ಟ್​ ಮಾಡುವ ಅಗತ್ಯವಿರದೆ ಹಲವಾರು ಕಮಾಂಡ್​ಗಳನ್ನು ಒಂದರ ಹಿಂದೊಂದರಂತೆ ನೀಡಬಹುದು.

ಆಯಪಲ್ ಕಳೆದ ತಿಂಗಳು ಐಪ್ಯಾಡ್​ಗಾಗಿ Final Cut Pro ಮತ್ತು Logic Pro ಗಳನ್ನು ಪರಿಚಯಿಸಿತ್ತು. ಇವನ್ನು ಪರಿಚಯಿಸುವಂತೆ ಟ್ಯಾಬ್ಲೆಟ್​ಗಳಲ್ಲಿ ಪ್ರೊಫೆಶನಲ್ ಗ್ರೇಡ್ ಸಾಫ್ಟವೇರ್​ ಬಳಸುವ ಗ್ರಾಹಕರು ಹಲವಾರು ದಿನಗಳಿಂದ ಬೇಡಿಕೆ ಇಟ್ಟಿದ್ದರು. ಆದಾಗ್ಯೂ iPadOS 17 ಅನ್ನು ಆರಂಭಿಕವಾಗಿ ಗಮನಿಸಿದಾಗ ಪವರ್ ಬಳಕೆದಾರರಿಗೆ ತುಸು ನಿರಾಶೆಯಾಗಬಹುದು. ಐಪ್ಯಾಡ್​ನಲ್ಲಿ ಬಹಳ ಸುಲಭವಾಗಿ ಮಲ್ಟಿಟಾಸ್ಕಿಂಗ್ ಮಾಡುವ ಉದ್ದೇಶದಿಂದ ಕಳೆದ ವರ್ಷ ಲಾಂಚ್ ಮಾಡಲಾಗಿದ್ದ Stage Manager ಸಾಧನವು ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ ಮತ್ತು ಸಾಕಷ್ಟು ಬಾರಿ ಕೆಲಸಕ್ಕೆ ಅಡೆತಡೆ ಮಾಡುತ್ತದೆ. iPadOS 17 ನಲ್ಲಿನ Stage Manager ವಿಂಡೋ ಸೈಜಿಂಗ್ ಮತ್ತು ಲೊಕೇಶನ್ ವಿಚಾರದಲ್ಲಿ ಹೆಚ್ಚುವರಿ ಸ್ವಾತಂತ್ರ್ಯವನ್ನು ನೀಡಲಿದೆ ಎಂದು ಕ್ರೇಗ್ ಫೆಡೆರಿಘಿ ಹೇಳಿದ್ದಾರೆ.