ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಸ್ವ-ಉದ್ಯೋಗ ಆರಂಭಿಸಲು ಯುವಕ ಹಾಗೂ ಯುವತಿಯರಿಂದ ಅರ್ಜಿ ಆಹ್ವಾನ
ಉಡುಪಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ಯಡಿ ಜಿಲ್ಲೆಯಲ್ಲಿ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ 18 ವರ್ಷ ಮೇಲ್ಪಟ್ಟ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಗರಿಷ್ಠ ಯೋಜನಾ ವೆಚ್ಚ ರೂ. 50.00 ಲಕ್ಷ ಮೊತ್ತದ ಹೊಸ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಹಾಗೂ ಗರಿಷ್ಠ ಯೋಜನಾ ವೆಚ್ಚ ರೂ. 20.00 ಲಕ್ಷ ಮೊತ್ತದ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸಲು ಅವಕಾಶವಿದ್ದು, […]
ಪುತ್ತಿಗೆ ಶ್ರೀಪಾದರಿಂದ ಚತುರ್ಥ ಪರ್ಯಾಯ ಪ್ರಯುಕ್ತ ಸಂಚಾರ
ಮುಂಬೈ: ಮಹಾರಾಷ್ಟ್ರದ ನಾಶಿಕ್ ನಗರದಲ್ಲಿ ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಚತುರ್ಥ ಪರ್ಯಾಯ ಪ್ರಯುಕ್ತ ಸಂಚಾರ ನಡೆಯಿತು. ಈ ಸಂದರ್ಭದಲ್ಲಿ ಉಭಯ ಶ್ರೀಪಾದರು ನಾಶಿಕ್ ನಗರದ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಇಸ್ಕಾನ್ ಭಕ್ತರು ಉಭಯ ಶ್ರೀಪಾದರನ್ನು ವೈಭವದಿಂದ ಬರಮಾಡಿಕೊಂಡು, ಶ್ರೀಪಾದರಿಗೆ ಗೌರವ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ಇಸ್ಕಾನ್ ಭಕ್ತರು ಶ್ರೀಪಾದರಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದುಕೊಂಡರು.
ಜೂನ್ 8 ರಂದು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಜಿಲ್ಲಾ ಯುವ ಉತ್ಸವ ಕಾರ್ಯಕ್ರಮ
ಉಡುಪಿ: ಕೇಂದ್ರ ಸರಕಾರದ ನೆಹರು ಯುವ ಕೇಂದ್ರ ಉಡುಪಿ ಜಿಲ್ಲೆ ಇವರ ವತಿಯಿಂದ ಜಿಲ್ಲಾ ಯುವ ಉತ್ಸವ ಕಾರ್ಯಕ್ರಮವು ಜೂನ್ 8 ರಂದು ನಗರದ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ 15 ರಿಂದ 29 ವರ್ಷದೊಳಗಿನ ಯುವಕ, ಯುವತಿಯರಿಗೆ ಚಿತ್ರಕಲೆ, ಕವನ ಬರವಣಿಗೆ, ಮೊಬೈಲ್ ಫೋಟೋಗ್ರಾಫಿ, ಸಾಂಸ್ಕೃತಿಕ ಜಾನಪದ ಗುಂಪು ನೃತ್ಯ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸುವ ಅಭ್ಯರ್ಥಿಗಳು https://docs.google.com/spreadsheets/d/1NfFMQa4LRvzWQWprDO2qhqQ- HlkBrjA7jSGQHZooCxo/edit?usp=sharing ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ನೆಹರು ಯುವ ಕೇಂದ್ರ, ಜಿಲ್ಲಾಡಳಿತ ಕಚೇರಿ, ರಜತಾದ್ರಿ, […]
ಕಠಿಣ ಪರಿಶ್ರಮ, ಕೆಲಸದ ಬಗ್ಗೆ ಜ್ಞಾನ ಮತ್ತು ಹಣಕಾಸಿನ ಸರಿಯಾದ ನಿರ್ವಹಣೆಯಿಂದ ಯಶಸ್ಸು: ಮೈಕೆಲ್ ಡಿಸೋಜಾ
ಮಂಗಳೂರು: ನಿಮ್ಮ ವ್ಯವಹಾರವು ಆರ್ಥಿಕ ಪಾರದರ್ಶಕತೆಯನ್ನು ಹೊಂದಿರಬೇಕು. ಕಠಿಣ ಪರಿಶ್ರಮ, ನಿಮ್ಮ ಕೆಲಸದ ಬಗ್ಗೆ ಜ್ಞಾನ ಮತ್ತು ಹಣಕಾಸಿನ ಸರಿಯಾದ ನಿರ್ವಹಣೆ ವ್ಯವಹಾರದಲ್ಲಿ ಯಶಸ್ಸಿಗೆ ಪ್ರಮುಖವಾಗಿದೆ. ನಿಮ್ಮ ವ್ಯವಹಾರ ವಿಫಲವಾದರೂ ನಿಮ್ಮ ಹೆಸರು ಖ್ಯಾತಿಯಲ್ಲಿರಬೇಕು ಎಂದು ಎನ್ಆರ್ಐ ಉದ್ಯಮಿ ಮೈಕೆಲ್ ಡಿಸೋಜಾ ಹೇಳಿದರು. ಅವರು ಮೇ 28 ರಂದು ಮಂಗಳೂರು ಕ್ಲಬ್ನಲ್ಲಿ ರಚನಾ ಹಾಗೂ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ವತಿಯಿಂದ ಆಯೋಜಿಸಲಾಗಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪರಿಶ್ರಮದ ಶಕ್ತಿ ಮತ್ತು ವ್ಯವಹಾರದ ಮೂಲಕ […]
ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಹಗರಣ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಸಂಬಂಧಿಸಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರ ಏಕಸದಸ್ಯ ಪೀಠವು, ಸಿಸೋಡಿಯಾ ವಿರುದ್ದದ ಆರೋಪಗಳು “ಗಂಭೀರ ಸ್ವರೂಪದ್ದಾಗಿವೆ” ಎಂದು ಗಮನಿಸಿ ಜಾಮೀನು ನಿರಾಕರಿಸಿದೆ. “ಅರ್ಜಿದಾರರ ವಿರುದ್ಧದ ಆರೋಪಗಳು ತುಂಬಾ ಗಂಭೀರ ಸ್ವರೂಪದ್ದಾಗಿವೆ. ಅಬಕಾರಿ ನೀತಿಯನ್ನು ಸೌತ್ ಗ್ರೂಪ್ನ ನಿದರ್ಶನದಲ್ಲಿ ರಚಿಸಲಾಗಿದೆ ಮತ್ತು […]