ಮೇ 25 ರಂದು ಯಶ್ ಪಾಲ್ ಸುವರ್ಣ ವಿಜಯೋತ್ಸವ ಅಭಿನಂದನಾ ಸಮಾರಂಭ; ಬೃಹತ್ ವಾಹನ ಜಾಥಾ
ಉಡುಪಿ: ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಯಶ್ ಪಾಲ್ ಸುವರ್ಣ ರವರ ವಿಜಯೋತ್ಸವ ವಾಹನ ಜಾಥಾ ಮತ್ತು ಅಭಿಮಾನಿಗಳ ಅಭಿನಂದನಾ ಸಮಾರಂಭವನ್ನು ಉಡುಪಿ ನಗರ ಬಿಜೆಪಿ ವತಿಯಿಂದ ಮೇ 25 ರಂದು ಆಯೋಜಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಪರ್ಕಳ ಹೈಸ್ಕೂಲ್ ಬಳಿ ವಿಜಯೋತ್ಸವದ ವಾಹನ ಜಾಥಾಕ್ಕೆ ಚಾಲನೆ ನೀಡಲಿದ್ದು, ಈ ವಾಹನ ಜಾಥಾ ಉಡುಪಿ ನಗರ ಮಂಡಲದ ಎಲ್ಲಾ ವಾರ್ಡ್ ಹಾಗೂ ಗ್ರಾಮ ಪಂಚಾಯತ್ ಮುಖ್ಯ ರಸ್ತೆಯಲ್ಲಿ ಸಾಗಿ ಬರಲಿದೆ. ಸಂಜೆ ಉಡುಪಿ ಕುಂಜಿಬೆಟ್ಟುವಿನ ಜಿಲ್ಲಾ […]
ಹಿರಿಯ ನಾಯಕರಿಗೆ ಬೇಡವಾದ ಗೃಹ ಖಾತೆ; ನೀರಾವರಿ, ವಿದ್ಯುತ್ ಮತ್ತು ಕಂದಾಯ ಖಾತೆಗಳಿಗೆ ಬಹು ಬೇಡಿಕೆ
ಬೆಂಗಳೂರು: ಸಿಎಂ ಹುದ್ದೆ ಬಳಿಕ ಎರಡನೇ ಶಕ್ತಿಯುತ ಸ್ಥಾನ ಎಂದು ಪರಿಗಣಿಸಲ್ಪಡುವ ಗೃಹ ಖಾತೆ ಪಡೆಯಲು ಯಾವ ಹಿರಿಯ ನಾಯಕರೂ ಮುಂದೆ ಬರುತ್ತಿಲ್ಲ ಎಂದು ವರದಿಯಾಗಿದೆ. ಯಾವುದೇ ಹಿರಿಯ ನಾಯಕರು ಪೊಲೀಸ್ ಇಲಾಖೆಯನ್ನು ನಿಭಾಯಿಸಲು ಉತ್ಸುಕರಾಗಿಲ್ಲ, ಆದರೆ ನೀರಾವರಿ, ವಿದ್ಯುತ್ ಮತ್ತು ಕಂದಾಯದಂತಹ ಖಾತೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ರಾಜ್ಯದಲ್ಲಿ ಸೌಹಾರ್ದತೆ ಕದಡುವವರ ವಿರುದ್ಧ ಕಡಿವಾಣ ಹಾಕುವಂತೆ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪೊಲೀಸ್ ಇಲಾಖೆಗೆ ಸೂಚಿಸಿದ್ದರೂ, ಗೃಹ ಇಲಾಖೆ ಹುದ್ದೆ ವಹಿಸುವವರಿಲ್ಲದೆ ಉಳಿದುಕೊಂಡಿದೆ ಎಂದು ವಿಷಯದ ಬಗ್ಗೆ […]
ವಿಶ್ವ ಥಲಸ್ಸೆಮಿಯಾ ದಿನದ ಅಂಗವಾಗಿ ಕೆ.ಎಂಸಿಯಲ್ಲಿ ಎಚ್ಎಲ್ಎ ಪರೀಕ್ಷಾ ಶಿಬಿರ
ಮಣಿಪಾಲ: ಜಾಗತಿಕವಾಗಿ ಥಲಸ್ಸೆಮಿಯಾ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಮತ್ತು ಥಲಸ್ಸೆಮಿಯಾ ಪೀಡಿತ ಮಕ್ಕಳಿಗೆ ತಮ್ಮ ಆರೈಕೆದಾರರಿಗೆ ಬೆಂಬಲ ವ್ಯಕ್ತಪಡಿಸಲು ಪ್ರತಿ ವರ್ಷ ವಿಶ್ವ ಥಲಸ್ಸೆಮಿಯಾ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ‘”ಎಚ್ಚರಿಕೆಯಿಂದಿರಿ, ಹಂಚಿಕೊಳ್ಳಿ ಕಾಳಜಿ: ಥಲಸ್ಸೆಮಿಯಾ ಕುರಿತು ಆರೈಕೆಯ ಅಂತರವನ್ನು ತಗ್ಗಿಸಲು ಶಿಕ್ಷಣವನ್ನು ಬಲಪಡಿಸುವುದು”. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗವು ಸರ್ಕಾರೇತರ ಸಂಸ್ಥೆ (ಎನ್ಜಿಒ) ಡಿಕೆಎಂಎಸ್ ಸಹಕಾರದೊಂದಿಗೆ ಎಚ್ಎಲ್ಎ ಪರೀಕ್ಷಾ ಶಿಬಿರವನ್ನು ನಡೆಸಿತು. ಶಿಬಿರದಲ್ಲಿ ರೋಗಿಗಳು ಮತ್ತು ಸಂಭಾವ್ಯ […]
ಇತಿಹಾಸ ಪ್ರಸಿದ್ಧ ಉದ್ಯಾವರ ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ: ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಸಂಪನ್ನ
ಉಡುಪಿ: ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಬ್ರಹ್ಮ ಕುಂಭಾಭಿಷೇಕವು ಮೇ 21ರಂದು ಸಂಪನ್ನಗೊಂಡಿತು. ಗೌರವಾಧ್ಯಕ್ಷರಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಅಧಮರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು, ವೇ|ಮೂ|ಪುತ್ತೂರು ಶ್ರೀ ತಂತ್ರಿ, ಕುತ್ಪಾಡಿ ಬಾಲಕೃಷ್ಣ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ಮಹಾಪೂಜೆ ಬಳಿಕ ಸುಮಾರು ಏಳು ಸಾವಿರ ಮಂದಿ ಭಕ್ತರು ಅನ್ನ ಸಂರ್ಪಣೆಯಲ್ಲಿ ಪಾಲ್ಗೊಂಡರು. ಸಂಜೆ ರಂಗ ಪೂಜೆ, ಬಲಿ ಉತ್ಸವವು ಜರುಗಿತು. ದೇವಾಲಯದ ಸುತ್ತುಪೌಳಿ ಮತ್ತು […]
ಎಂಎಲ್ಸಿ ಮಂಜುನಾಥ ಭಂಡಾರಿಗೆ ಸಚಿವ ಸ್ಥಾನ ಖಚಿತ..!
ಮಂಗಳೂರು: ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ದ.ಕ. ಜಿಲ್ಲೆಗೆ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ನ ಕೆಲ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಮಂಗಳೂರು ವಿಧಾನಸಭಾ ಶಾಸಕ ಯು.ಟಿ ಖಾದರ್ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಇತ್ತು. ಆದರೆ ಅನೀರಿಕ್ಷಿತ ಬೆಳವಣಿಗೆಯಲ್ಲಿ ಯು.ಟಿ. ಖಾದರ್ ಅವರಿಗೆ ಸಚಿವ ಸ್ಥಾನದ ಬದಲಾಗಿ ಸ್ಪೀಕರ್ ಸ್ಥಾನ ನೀಡಲಾಗಿದೆ. ಹೀಗಾಗಿ ಕರಾವಳಿಗೆ ಹೊರಭಾಗದವರಿಗೆ ಸಚಿವ ಸ್ಥಾನ ನೀಡುವ ಬದಲು ಇಲ್ಲಿನವರೇ ಆದ ಮಂಜುನಾಥ ಭಂಡಾರಿ […]