ಉಡುಪಿ ಜಿಲ್ಲೆಯ ವಿವಿಧಡೆ ಮೇ.25, 26 ರಂದು ವಿದ್ಯುತ್ ವ್ಯತ್ಯಯ

ಉಡುಪಿ: ಉದ್ಯಾವರ ಎಂ.ಯು.ಎಸ್.ಎಸ್ ನಿಂದ ಹೊರಡುವ ಬೊಳ್ಜೆ ಮತ್ತು ಮೇಲ್ಪೇಟೆ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೊರಂಗ್ರಪಾಡಿ, ಬೊಳ್ಜೆ, ಕೇದಾರ್, ಕೆಮ್ತೂರು, ಕಟಪಾಡಿ, ಮಠದಂಗಡಿ, ಅಂಕುದ್ರು, ಬೋಳಾರ್ ಗುಡ್ಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 25 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಲೈನ್ ಶಿಫ್ಟಿಂಗ್ ಕಾಮಗಾರಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 110 ಕೆ.ವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬೈಲೂರು ಎಕ್ಸ್ಪ್ರೆಸ್, ಕೆ.ಹೆಚ್.ಬಿ, ಪದವು […]

ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಬ್ರಹ್ಮಕಲಶೋತ್ಸವ’ ಪ್ರಯುಕ್ತ ದೇಗುಲದಲ್ಲಿ ನಡೆದ ಗಣಹೋಮ, ಮಹಾರುದ್ರಯಾಗ

ಉಡುಪಿ: ಕಾರ್ಕಳ ತಾಲೂಕಿನ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ದೇವರಿಗೆ ಮೇ.25 ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲ್ಲಿದ್ದು, ಆ ಪ್ರಯುಕ್ತ ದೇಗುಲದಲ್ಲಿ ಮೇ 23ರ ಬೆಳಿಗ್ಗೆ ಗಂಟೆ 8.00ರಿಂದ ಗಣಪತಿ ಹೋಮ, ಶ್ರೀ ಮಹಾರುದ್ರಯಾಗ, ಮಹಾತತ್ವ ಹೋಮ, ತತ್ವ ಕಲಶಾಭಿಷೇಕ, ತತ್ವನ್ಯಾಸ, ಮಹಾಪೂಜೆ, ಸಹಸ್ರ ಬ್ರಹ್ಮಕಲಶದ ಮಂಡಲ ರಚನೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಮಂಟಪ ಸಂಸ್ಕಾರ, ಸಹಸ್ರಕಲಶಾಧಿವಾಸ, ಕಲಶಾಧಿವಾಸ ಹೋಮಗಳು ಹಾಗೂ ಅಷ್ಟಾವಧಾನ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ […]

ಶಾಂತಿ ಕದಡಿದರೆ ಭಜರಂಗದಳ ಮತ್ತು ಆರ್‌ಎಸ್‌ಎಸ್‌ ನಿಷೇಧ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡಿದರೆ ಭಜರಂಗದಳ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ತಮ್ಮ ಸರ್ಕಾರ ನಿಷೇಧಿಸಲಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ಖರ್ಗೆ, ‘ಬಿಜೆಪಿಗೆ ಕಷ್ಟವಾದರೆ ಪಾಕಿಸ್ತಾನಕ್ಕೆ ಹೋಗಲಿ’ ಎಂದು ಹೇಳಿದರು. ಕರ್ನಾಟಕವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ಶಾಂತಿ ಕದಡಿದರೆ ಅದು ಭಜರಂಗದಳ ಅಥವಾ ಆರ್‌ಎಸ್‌ಎಸ್ ಎಂದು ಪರಿಗಣಿಸುವುದಿಲ್ಲ, ಕಾನೂನು ಕೈಗೆತ್ತಿಕೊಂಡಾಗ ಬಜರಂಗದಳ, ಆರ್‌ಎಸ್‌ಎಸ್ ಸೇರಿದಂತೆ ಯಾವುದೇ ಸಂಘಟನೆಗೆ ನಿಷೇಧ ಹೇರಲಾಗುವುದು ಎಂದು […]

ಬೆಳ್ತಂಗಡಿ: ಗಡಾಯಿಕಲ್ಲಿಗೆ ಬಡಿದ ಸಿಡಿಲು; ಬೆಟ್ಟದಲ್ಲಿ ಅಗ್ನಿಸ್ಪರ್ಶ

ಬೆಳ್ತಂಗಡಿ: ಮಂಗಳವಾರ ಸಂಜೆ ತಾಲೂಕಿನಾದ್ಯಂತ ಭಾರೀ ಸಿಡಿಲು ಮಿಂಚಿನಿಂದೊಡಗೂಡಿದ ಮಳೆಯಾಗಿದ್ದು, 1800 ಅಡಿ ಎತ್ತರದ ಗಡಾಯಿಕಲ್ಲಿಗೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡಿದೆ. ಕಳೆದೆರಡು ದಿನಗಳಿಂದ ಶಿಬಾಜೆ ಮತ್ತು ಅಳದಂಗಡಿ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ಗಾಳಿ ಮಳೆ ಸಿಡಿಲಿನ ಆರ್ಭಟಕ್ಕೆ ಗಡಾಯಿಕಲ್ಲಿನಲ್ಲಿ ಕೆಲ ಕಾಲ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಗುಡುಗು ಮಿಂಚು ಸಾಮಾನ್ಯವಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

ಜೂನ್ 4 ರಂದು ಕೋಸ್ಟಲ್ ಫಿಲ್ಮ್ ಅವಾರ್ಡ್ ಪ್ರದಾನ ಸಮಾರಂಭ

ಮಂಗಳೂರು: ತುಳು ಸಿನೆಮಾ ರಂಗದ ಕೋಸ್ಟಲ್ ಫಿಲ್ಮ್ ಅವಾರ್ಡ್ ಪ್ರದಾನ ಸಮಾರಂಭ ಜೂನ್ 4 ರಂದು ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕ ಸಂದೇಶ್‌ ರಾಜ್‌ ಬಂಗೇರ ಹೇಳಿದರು. ಅವರು ನಗರದ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 2020ರ ಜನವರಿಯಿಂದ 2022ರ ಡಿಸೆಂಬರ್‌ವರೆಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸಲಿದ್ದೇವೆ. ಒಟ್ಟು 28 ವರ್ಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಒಟಿಟಿಗಳಲ್ಲಿ ಮಾತ್ರ ಬಿಡುಗಡೆಯಾದ ಚಿತ್ರಗಳನ್ನು ಪರಿಗಣಿಸುವುದಿಲ್ಲ. ಜೀವಮಾನ ಸಾಧನೆ ಪ್ರಶಸ್ತಿ, ತೀರ್ಪುಗಾರರ […]