ಇತಿಹಾಸ ಪ್ರಸಿದ್ಧ ಉದ್ಯಾವರ ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ: ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಸಂಪನ್ನ

ಉಡುಪಿ: ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಬ್ರಹ್ಮ ಕುಂಭಾಭಿಷೇಕವು ಮೇ 21ರಂದು ಸಂಪನ್ನಗೊಂಡಿತು.

ಗೌರವಾಧ್ಯಕ್ಷರಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಅಧಮರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು, ವೇ|ಮೂ|ಪುತ್ತೂರು ಶ್ರೀ ತಂತ್ರಿ, ಕುತ್ಪಾಡಿ ಬಾಲಕೃಷ್ಣ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ಮಹಾಪೂಜೆ ಬಳಿಕ ಸುಮಾರು ಏಳು ಸಾವಿರ ಮಂದಿ ಭಕ್ತರು ಅನ್ನ ಸಂರ್ಪಣೆಯಲ್ಲಿ ಪಾಲ್ಗೊಂಡರು. ಸಂಜೆ ರಂಗ ಪೂಜೆ, ಬಲಿ ಉತ್ಸವವು ಜರುಗಿತು. ದೇವಾಲಯದ ಸುತ್ತುಪೌಳಿ ಮತ್ತು ಅಗ್ರ ಸಭಾ ಮಂಟಪವನ್ನು ನವೀಕರಿಸಿ ತಾಮ್ರದ ಮುಚ್ಚಿಗೆ, ಗರ್ಭಗುಡಿಯ ಸುತ್ತು ಹಾಸು ಕಲ್ಲಿನ ನವೀಕರಣ ವ್ಯವಸ್ಥೆ, ಒಳ ಮತ್ತು ಹೊರ ಸುತ್ತಿನ ತಗಡಿನ ಚಪ್ಪರದ ನವೀಕರಣ ಹಾಗೂ ದೇವಸ್ಥಾನದ ಎದುರಿನ ಕಾಂಕ್ರೀಟೀಕರಣಗೊಳಿಸಿದ ರಥಬೀದಿಯನ್ನು ದೇವಾಲಯಕ್ಕೆ ಸಮರ್ಪಿಸಲಾಯಿತು.

ಈ ಸಂದರ್ಭ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ ಪಾಲ್ ಎ. ಸುವರ್ಣ, ದೇಗುಲದ ವ್ಯವಸ್ಥಾಪನ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ಎ.ಪ್ರಭಾಕರ ರಾವ್, ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಕಿದಿಯೂರು ಉದಯಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯು. ಸುರೇಶ ಆಚಾರ್ಯ, ಕೋಶಾಧಿಕಾರಿ ಶ್ರೀನಿವಾಸ ಯು.ಬಿ. ಗೌರವಾಧ್ಯಕ್ಷರಾದ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್, ಮಾಜಿ ಶಾಸಕ ಬಾಲಾಜಿ ಆರ್. ಮೆಂಡನ್, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಜತೆ ಕಾರ್ಯದರ್ಶಿಗಳಾದ ವಿನೋದ್ ಕುಮಾರ್ ಭಟ್, ಪ್ರಭಾಕರ್ ಗಾಣಿಗ, ಶೇಖರ್ ಬಿ. ಸಾಲ್ಯಾನ್, ಪ್ರಧಾನ ಸಂಚಾಲಕ ಗಣಪತಿ ಕಾರಂತ್, ದೇಗುಲದ ವ್ಯವಸ್ಥಾಪನ ಸಮಿತಿಯ ಶ್ರೀನಿವಾಸ ಯು. ಬಿ., ಸಂತೋಷ್ ಕುಮಾರ್, ಪಟೇಲರ ಮನೆ ಯತಿರಾಜ್ ಶೆಟ್ಟಿ, ಕೃಷ್ಣ ಎಲ್., ಯಶು ಕುಮಾರ್, ರೇಖಾ ಎಸ್. ಕಾಂಚನ್, ಸುಲೋಚನಾ ಎಸ್. ಆಚಾರ್ಯ, ಅನುವಂಶಿಕ ಅರ್ಚಕರಾದ ಯು.ಗಣಪತಿ ಭಟ್, ಯು. ರಂಗನಾಥ ಭಟ್, ಯು.ಚಂದ್ರಕಾಂತ ಭಟ್, ಪವಿತ್ರಪಾಣಿ ರಮೇಶ್ ಭಟ್, ವಿವಿಧ ಸಮಿತಿಗಳ ಸಂಚಾಲಕ ಪ್ರಮುಖರಾದ ಶ್ರೀಶ ಭಟ್ ಕಡೆಕಾರು ಮಠ, ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ಜಿತೇಂದ್ರ ಶೆಟ್ಟಿ, ಗಿರೀಶ್ ಕುಮಾರ್, ಸುರೇಶ್ ಜೋಷಿ, ಗಂಗಾಧರ ಆಚಾರ್ಯ, ಕೃಷ್ಣ ಜಿ. ಕೋಟ್ಯಾನ್, ಮಿಥೇಶ್ ಸುವರ್ಣ, ಗಣೇಶ್ ಕುಮಾರ್, ಪ್ರತಾಪ್ ಕುಮಾರ್, ಉಮೇಶ್ ಕರ್ಕೇರ ಪಿತ್ರೋಡಿ, ರಾಘು ಸುವರ್ಣ, ದಿವಾಕರ ಬೊಳ್ಜೆ, ವನಿತ ಶೆಟ್ಟಿ, ಶರತ್ ಕುಮಾರ್, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರು, ಗೌರವ ಸಲಹೆಗಾರರು, ಲೆಕ್ಕಪರಿಶೋಧಕರು, ಲೆಕ್ಕಪತ್ರ ನಿರ್ವಹಣೆಗಾರರು, ಗೌರವ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.