Virat Kohli: ದಾಖಲೆಯ ಸೆಂಚುರಿ ಸಿಡಿಸಿದ ಕಿಂಗ್ ಕೊಹ್ಲಿ

Virat Kohli Century: ಅಲ್ಲದೆ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಶತಕ ಬಾರಿಸಿದ RCB ತಂಡದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.   IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. […]

Ragini Dwivedi: ಅಂತರಾಷ್ಟ್ರೀಯ ಚಹಾ ದಿನ, ‘ಟೀ’ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

ಅಂತರಾಷ್ಟ್ರೀಯ ಚಹಾ ದಿನದಂದು ರಾಗಿಣಿ ಟೀ ಕುಡಿದು, ಫೋಟೋಗೆ ಪೋಸ್ ನೀಡಿದ್ದಾರೆ. ರಾಗಿಣಿ ದ್ವಿವೇದಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ರೂಪದರ್ಶಿ. 2009 ರಲ್ಲಿ ಕಿಚ್ಚ ಸುದೀಪ್ ಅಭಿನಯದ `ವೀರ ಮದಕರಿ’ ಚಿತ್ರದಿಂದ ಸಿನಿಪಯಣ ಆರಂಭಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಅಂತರಾಷ್ಟ್ರೀಯ ಚಹಾ ದಿನದಂದು ಟೀ ಕುಡಿಯುವ ಮೂಲಕ ಫೋಟೋಗೆ ಪೋಸ್ ನೀಡಿದ್ದಾರೆ. ಟೀಯಿಂದ ನನ್ನ ದಿನ ಆರಂಭ ಎಂದ ಬರೆದುಕೊಂಡಿದ್ದಾರೆ. ಪ್ರತೀ ವರ್ಷ ಮೇ 21 ಅಂತರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ನೀರಿನ ನಂತರ […]

ಬೈಂದೂರಿನಲ್ಲಿ ವಸ್ತು ಮರು ಪಡೆಯುವ ಸೌಲಭ್ಯ ಕೇಂದ್ರ ಸ್ಥಾಪನೆ

ಉಡುಪಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ನವೀಕರಿಸಿ ಮರು ಬಳಸಬಹುದಾದ ವಸ್ತುಗಳ ಸಂಗ್ರಹ ಮಾಡಲು ಮೇ 20 ರಿಂದ ಜೂನ್ 5 ರ ವರೆಗೆ ಬೈಂದೂರು ಪಟ್ಟಣ ಪಂಚಾಯತ್ ಕಚೇರಿ ಬಳಿ ವಸ್ತು ಮರು ಪಡೆಯುವ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರು ಮೇಲ್ಕಂಡ ಕೇಂದ್ರದಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸೇರಿದಂತೆ ಆಟಿಕೆ ವಸ್ತುಗಳನ್ನು, ಬಳಸಿದ ಬಟ್ಟೆ, ದಿನ ಪತ್ರಿಕೆಗಳು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ […]

ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ ಸ್ಥಳಾಂತರಗೊಂಡ ಕಚೇರಿಯ ಉದ್ಘಾಟನೆ 

ಉಡುಪಿ: ನಗರದ ರಾಜ್ ಟವರ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರಿ ಸಂಘದ ಕಚೇರಿಯು ರವಿವಾರ ಪಿಪಿಪಿ ಕ್ರಾಸ್ ರಸ್ತೆಯ ಆಶಾ ಚಂದ್ರ ಟ್ರೇಡ್ ಸೆಂಟರ್ ಗೆ ಸ್ಥಳಾಂತರಗೊಂಡು ಉದ್ಘಾಟನೆಗೊಂಡಿತು. ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ನೂತನ ಕಚೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಸಂಸ್ಥೆಯ ಉತ್ತರೋತ್ತರ ಅಭಿವೃದ್ಧಿಗೆ ಹಾರೈಸಿದರು. ಶಾಸಕ ಯಶ್ ಪಾಲ್ ಎ. ಸುವರ್ಣ ಮಾತನಾಡಿ, ಹೋಟೆಲ್ ಉದ್ಯಮಕ್ಕೆ ಉಡುಪಿಯು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ಸಹಕಾರ ಕ್ಷೇತ್ರದಲ್ಲಿಯೂ […]

ಕಾಪು: ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವಿಜಯಯಾತ್ರೆ

ಕಾಪು: ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ ನೂತನ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವಿಜಯೋತ್ಸವ ಶನಿವಾರ ಕ್ಷೇತ್ರದ ದಕ್ಷಿಣ ಬ್ಲಾಕ್ ನಲ್ಲಿ ಜರುಗಿತು. ಶನಿವಾರ ಬೆಳಗ್ಗೆ ಮಟ್ಟು ಬೀಚ್ ನಿಂದು ಆರಂಭಗೊಂಡ ರೋಡ್ ಶೋ ಕೋಟೆ, ಕಟಪಾಡಿ, ಉದ್ಯಾವರ, ಸಂಪಿಗೆ ನಗರ, ಕಟಪಾಡಿ, ಕುರ್ಕಾಲು, ಬಂಟಕಲ್ಲು, ಶಿರ್ವ, ಕುತ್ಯಾರು, ಪಲಿಮಾರು, ಪಡುಬಿದ್ರಿ, ಹೆಜಮಾಡಿ, ಪಡುಬಿದ್ರಿ ತೆಂಕ, ಅದಮಾರು, ಎಲ್ಲೂರು, ಪಣಿಯೂರು, ಉಚ್ಚಿನ, ಮೂಳೂರು, ದೀಪ ಸ್ತಂಭ, ಕೈಪುಂ ಜಾಲು, ಕೋತಲ್ ಕಟ್ಟೆ ಕಾಪು ಪೇಟೆ […]