ಕಾಪು; ಮನೆಗೊಂದರಂತೆ ಉದ್ಯೋಗ ಒದಗಿಸಿಕೊಡುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಚಾಲನೆ: ಸೊರಕೆ
ಕಾಪು : ಸಣ್ಣ ಕೈಗಾರಿಕೆಗೆ ಒತ್ತು ಕೊಟ್ಟು ಮನೆಗೊಬ್ಬರಿಗೆ ಉದ್ಯೋಗ ನೀಡುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಶಾಸಕನಾದ ಕೂಡಲೇ ಚಾಲನೆ ನೀಡಲಾಗುವುದು ಎಂದು ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಮಣಿಪಾಲ ಟೆಕ್ನಾಲಜಿ ಸಮೂಹ ಸಂಸ್ಥೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಅವರು ಕಾರ್ಮಿಕರೇ ಈ ದೇಶದ ನಿಜವಾದ ಸಂಪತ್ತು. ಮಣಿಪಾಲ ಗ್ರೂಫ್ಸ್ ತಾಂತ್ರಿಕ ಸಂಸ್ಥೆಗಳು ದೇಶ ಮಾತ್ರವಲ್ಲದೇ ಪ್ರಪಂಚದಾದ್ಯಂತ ಸುದ್ಧಿಯಲ್ಲಿವೆ. ಗ್ರಾಮೀಣ ಭಾಗದ ಸಾವಿರಾರು ಮಂದಿಗೆ ಉದ್ಯೋಗ ನೀಡುವ ಮಹತ್ಕಾರ್ಯ ಮಣಿಪಾಲ ಸಮೂಹ […]
Karnataka Election ನಾಲ್ಕು ದಿನ ಬಾಕಿ: ರೋಡ್ ಶೋ ಮೂಲಕ ಮೋದಿ, ಭರ್ಜರಿ ಮೋಡಿ
ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯ ರಾಜಧಾನಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು, ಮಾರ್ಗದ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಅಪಾರ ಸಂಖ್ಯೆಯ ಉತ್ಸಾಹಿ ಜನರತ್ತ ಕೈ ಬೀಸಿದರು.ಬೆಂಗಳೂರು ದಕ್ಷಿಣದ ಸೋಮೇಶ್ವರ ಭವನ ಆರ್ಬಿಐ ಮೈದಾನದಿಂದ ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್ವರೆಗೆ 26 ಕಿ.ಮೀ ರೋಡ್ಶೋ ಸುಮಾರು ಮೂರು ಗಂಟೆಗಳಲ್ಲಿ ಮುಕ್ತಾಯವಾಯಿತು. ರೋಡ್ಶೋ ದಕ್ಷಿಣ ಮತ್ತು ಮಧ್ಯ ಬೆಂಗಳೂರಿನ ಭಾಗಗಳಲ್ಲಿ ಸಂಚರಿಸಿ ಸುಮಾರು ಹನ್ನೆರಡು ವಿಧಾನಸಭಾ […]
ಹರೀಶ್ ಪೂಂಜ ಪರವಾಗಿ ಬೃಹತ್ ರೋಡ್ ಶೋ ಮೂಲಕ ಮತಯಾಚಿಸಿದ ಹಿಂದೂ ಫಯರ್ ಬ್ರಾಂಡ್ ಖ್ಯಾತಿಯ ಅಸ್ಸಾಂ ಮುಖ್ಯಮಂತ್ರಿ
ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್ ಪೂಂಜ ಅವರ ಪರವಾಗಿ ಹಿಂದೂ ಫಯರ್ ಬ್ರಾಂಡ್ ಖ್ಯಾತಿಯ, ಬೆಂಕಿ ಚೆಂಡಿನ ಮಾತುಗಳಿಂದ ಪ್ರಸಿದ್ಧಿ ಪಡೆದಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ಅವರು ಇಂದು ದಿನಾಂಕ 06.05.2023 ರಂದು ಉಜಿರೆಯಲ್ಲಿ ಬೃಹತ್ ರೋಡ್ ಶೋ ಮೂಲಕ ಮತಯಾಚಿಸಿದರು. ಉಜಿರೆ ಎಸ್ಡಿಎಂ ಕಾಲೇಜು ಮೈದಾನದಿಂದ ಆರಂಭಗೊಂಡು ಜನಾರ್ಧನ ಸ್ವಾಮಿ ದೇವಸ್ಥಾನದ ಬೀದಿಯವರೆಗೆ ಬೃಹತ್ ರೋಡ್ ಶೋ ನಡೆಯಿತು. ಉಜಿರೆ ಮತ್ತು ಧರ್ಮಸ್ಥಳ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ […]
ಸಚಿವ ಸುನಿಲ್ ಕುಮಾರ್ ಹೊಸ್ಮಾರಿನಲ್ಲಿ ಪಾದಯಾತ್ರೆಯ ಮೂಲಕ ಮತಯಾಚನೆ
ಕಾರ್ಕಳ: ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಹೊಸ್ಮಾರಿನ ಪೇಟೆಯಲ್ಲಿ ಪಾದಯಾತ್ರೆಯ ಮೂಲಕ ಮತಯಾಚಿದರು. ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡಿದರ ಮೂಲಕ ಕಾರ್ಕಳವನ್ನು ಅಭಿವೃದ್ಧಿಗೊಳಿಸುವಂತೆ ಮತದಾರರಲ್ಲಿ ಕೋರಿದರು.
ಚುನಾವಣೆ ಮುಗಿದ ನಂತರ ಎರಡು ದಿನಕ್ಕೊಮ್ಮೆ ನೀರು ಪೂರೈಕೆ..!!
ಉಡುಪಿ: ನಗರಕ್ಕೆ ನೀರು ಪೂರೈಸುವ ಹಿರಿಯಡಕ ಸ್ವರ್ಣ ನದಿ ಬಜೆ ಡ್ಯಾಂನಲ್ಲಿ ನೀರು ಬರಿದಾಗುತ್ತಿದೆ. ಇನ್ನೂ 10 ದಿನಕ್ಕೆ ಪಂಪ್ ಮಾಡುವಷ್ಟು ನೀರಿನ ಪ್ರಮಾಣ ಲಭ್ಯವಿದೆ. ದಿನೇದಿನೇ ಬಿಸಿಲ ಪ್ರಮಾಣಕ್ಕೆ ನೀರಿನ ಮೂಲಗಳು ಬತ್ತುತ್ತಿವೆ. ಮಳೆ ಬಾರದಿದ್ದಲ್ಲಿ ನಗರದಲ್ಲಿಯೂ ನೀರಿಗೆ ಆಹಕಾರ ಸೃಷ್ಟಿಯಾಗುವ ಸಾಧ್ಯತೆ ಇದೆ. ಚುನಾವಣೆ ಮುಗಿದ ಕೂಡಲೆ ಮೇ 10ರ ಅನಂತರ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಬಹುದು ಎಂದು ನಗರಸಭೆ ಮೂಲಗಳು ತಿಳಿಸಿದೆ. ಪ್ರಸ್ತುತ ಬಜೆ ಡ್ಯಾಂನಲ್ಲಿ 3 ಮೀ. ನಷ್ಟು ನೀರಿದೆ. […]