ಪಕ್ಷ ಪ್ರಚಾರಕ್ಕೆ ಕರುನಾಡ ಸಿಂಘಂ ಖ್ಯಾತಿಯ ಅಣ್ಣಾಮಲೈ ಸಾಥ್: ಇಂದು ಕೇಸರಿ ಕಲರವ ಬೃಹತ್ ರೋಡ್ ಶೋ

ಉಡುಪಿ: ಇಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಮತ್ತು ಕರ್ನಾಟಕದ ಸಿಂಘಂ ಖ್ಯಾತಿಯ ಅಣ್ಣಾಮಲೈ ನೇತೃತ್ವದಲ್ಲಿ ಬೃಹತ್ ರೋಡ್ ಶೋ ಏಳೂರು ಮೊಗವೀರ ಭವನದಿಂದ ಹೊರಟು ವಡಭಾಂಡೇಶ್ವರ ಬಲರಾಮ ದೇವಸ್ಥಾನವನ್ನು ತಲುಪಲಿದೆ. ಆ ಬಳಿಕ ನಡೆಯುವ ಬೃಹತ್ ಸಮಾವೇಶದಲ್ಲಿ ಕೆ. ಅಣ್ಣಾಮಲೈ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಚಾಣಕ್ಯ ಏಜ್ಯುಕೇಶನ್ & ಕಲ್ಚರಲ್ ಅಕಾಡೆಮಿ ವತಿಯಿಂದ ಅಮ್ಮಂದಿರೊಂದಿಗೆ ಒಂದು ದಿನ ವಿನೂತನ ಕಾರ್ಯಕ್ರಮ

ಹೆಬ್ರಿ: ರಜಾ ದಿನಗಳಲ್ಲಿ ಮಕ್ಕಳು ಮನೆಯಲ್ಲಿ ಸುಮ್ಮನೆ ಕಾಲಹರಣ ಮಾಡುವ ಬದಲು ಬದುಕಿನ ಶಿಕ್ಷಣ ನೀಡುವ ಶಿಬಿರದಲ್ಲಿ ತೊಡಗಿಸಿಕೊಳ್ಳಬೇಕು. ಅದರಲ್ಲೂ ತಾಯಿ ಮಕ್ಕಳ ಬಂಧವನ್ನು ಬೆಸೆಯುವ ಈ ಕಾಯ೯ಕ್ರಮ ಮಾದರಿಯಾಗಿದೆ ಎಂದು ಹೆಬ್ರಿ ಬಂಟರ ಸೌಹಾಧ೯ ಸಹಕಾರಿ ಸಂಘದ ನಿರ್ದೇಶಕಿ ಶುಭವತಿ ವಾದಿರಾಜ್ ಶೆಟ್ಟಿ ಹೇಳಿದರು. ಅವರು ಹೆಬ್ರಿ ಸೂಪರ್ ಮಾಕೆ೯ಟ್ ಕಟ್ಟಡದ ಶಾರದಾ ನಂದ್ಯಪ್ಪ ಶೆಟ್ಟಿ ಸಭಾಭವನದಲ್ಲಿ ಚಾಣಕ್ಯ ಏಜ್ಯುಕೇಶನ್ &ಕಲ್ಚರಲ್ ಅಕಾಡೆಮಿ ಹೆಬ್ರಿ ಇವರ ನೇತೃತ್ವದಲ್ಲಿ ನಡೆದ ಬೇಸಗೆ ಶಿಬಿರದ ಅಂಗವಾಗಿ ‘ಅಮ್ಮಂದಿರೊಂದಿಗೆ ಒಂದು […]
ಮೇ 6 ರಂದು ಅವಿಭಜಿತ ದ.ಕ ಜಿಲ್ಲೆಯಲ್ಲಿ ಉತ್ತರಪ್ರದೇಶದ ಸಂತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಭರ್ಜರಿ ಪ್ರಚಾರ

ಮಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇ 6 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಂಗಳೂರು ವಿಭಾಗದ ಬಿಜೆಪಿ ಉಸ್ತುವಾರಿ ಕೆ.ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ. ಬುಲ್ಡೋಜರ್ ಬಾಬಾ ಖ್ಯಾತಿಯ ಉತ್ತರಪ್ರದೇಶದ ಸಂತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೇ 6 ರಂದು ಮಧ್ಯಾಹ್ನ ಪುತ್ತೂರು ಹಾಗೂ ಬಂಟ್ವಾಳದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ 3 ಗಂಟೆಗೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸಮಾವೇಶವನ್ನು ಉದ್ದೇಶಿಸಿ […]
ಇಂದಿನಿಂದ ಮೇ. 10ರ ವರೆಗೆ ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ದೇವಸ್ಥಾನ ಸಿರಿಜಾತ್ರಾ ಮಹೋತ್ಸವ

ಹಿರಿಯಡ್ಕ: ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಶ್ರೀ ಕ್ಷೇತ್ರ ಹಿರಿಯಡ್ಕ ಉಡುಪಿ ತಾಲೂಕು ಮತ್ತು ಜಿಲ್ಲೆ 576113. ಮೊಬೈಲ್ 9481440240 ಭಗವದ್ಭಕ್ತರೇ ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮೇಷ ಮಾಸ ದಿನ 21 ಸಲುವ ವೈಶಾಖ ಮಾಸದ ಪೂರ್ಣಮಿ ತಾ.05-05-2023ನೇ ಶುಕ್ರವಾರ ಮೊದಲ್ಗೊಂಡು ವೈಶಾಖ ಬಹುಳ ಪಂಚಮಿ ತಾ. 10-05-2023ನೇ ಬುಧವಾರ ಪರ್ಯಂತ ಶ್ರೀ ಕ್ಷೇತ್ರ ಹಿರಿಯಡ್ಕ ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ ಸಂಪ್ರದಾಯದಂತೆ ಧ್ವಜಾರೋಹಣ ಮಹೋತ್ಸವಗಳು […]