ಚಾಣಕ್ಯ ಏಜ್ಯುಕೇಶನ್ & ಕಲ್ಚರಲ್ ಅಕಾಡೆಮಿ ವತಿಯಿಂದ ಅಮ್ಮಂದಿರೊಂದಿಗೆ ಒಂದು ದಿನ ವಿನೂತನ ಕಾರ್ಯಕ್ರಮ

ಹೆಬ್ರಿ: ರಜಾ ದಿನಗಳಲ್ಲಿ ಮಕ್ಕಳು ಮನೆಯಲ್ಲಿ ಸುಮ್ಮನೆ ಕಾಲಹರಣ ಮಾಡುವ ಬದಲು ಬದುಕಿನ ಶಿಕ್ಷಣ ನೀಡುವ ಶಿಬಿರದಲ್ಲಿ ತೊಡಗಿಸಿಕೊಳ್ಳಬೇಕು. ಅದರಲ್ಲೂ ತಾಯಿ ಮಕ್ಕಳ ಬಂಧವನ್ನು ಬೆಸೆಯುವ ಈ ಕಾಯ೯ಕ್ರಮ ಮಾದರಿಯಾಗಿದೆ ಎಂದು ಹೆಬ್ರಿ ಬಂಟರ ಸೌಹಾಧ೯ ಸಹಕಾರಿ ಸಂಘದ ನಿರ್ದೇಶಕಿ ಶುಭವತಿ ವಾದಿರಾಜ್ ಶೆಟ್ಟಿ ಹೇಳಿದರು.

ಅವರು ಹೆಬ್ರಿ ಸೂಪರ್ ಮಾಕೆ೯ಟ್ ಕಟ್ಟಡದ ಶಾರದಾ ನಂದ್ಯಪ್ಪ ಶೆಟ್ಟಿ ಸಭಾಭವನದಲ್ಲಿ ಚಾಣಕ್ಯ ಏಜ್ಯುಕೇಶನ್ &ಕಲ್ಚರಲ್ ಅಕಾಡೆಮಿ ಹೆಬ್ರಿ ಇವರ ನೇತೃತ್ವದಲ್ಲಿ ನಡೆದ ಬೇಸಗೆ ಶಿಬಿರದ ಅಂಗವಾಗಿ ‘ಅಮ್ಮಂದಿರೊಂದಿಗೆ ಒಂದು ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ವಹಿಸಿದ್ದರು.

ಈ ಸಂದರ್ಭದಲ್ಲಿ ಚಿತ್ರಕಲಾವಿದೆ ವೃಂದಾ ನಾಯಕ್ , ರಕ್ಷಿತಾ ಪುಟ್ಟಣ್ಣ ಭಟ್ ,ವಿಜಯ ಸಂತೋಷ ,ದೀಪ್ತಿ ದಿನಕರ್ ಪ್ರಭು,ರಾಧಿಕಾ ಸುದೀಪ್ ಭಂಡಾರಿ,ಆಶಾ ಪ್ರಮೋದ್,ವೀಣಾ ರಮಾನಂದ ಶೆಟ್ಟಿ ,ಅನಿಕಾ,ಸ್ವಾತಿ ಶೆಟ್ಟಿ ಸೀತಾನದಿ, ದಿವ್ಯವಿಜಯ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.

ಬಳಿಕ ಮಕ್ಕಳು ಹಾಗೂ ಅವರ ತಾಯಿಂದಿರಿಗೆ ವಿನೂತನ ಮನೋರಂಜಾ ಆಟಗಳು ನಡೆಯಿತು.