ಮೇ. 10 ರಂದು ಸಂತೆ ಜಾತ್ರೆ ಉತ್ಸವ ನಿಷೇಧ

ಉಡುಪಿ: ಕರ್ನಾಟಕ ವಿಧಾನ ಸಭಾ ಚುನಾವಣೆ 2023ರ ಸಂಬಂಧ ಮೇ 10 ರಂದು ಬೆಳಿಗ್ಗೆ 6 ಗಂಟೆಯಿಂದ, ಚುನಾವಣೆ ಮತದಾನ ಮುಕ್ತಾಯವಾಗುವವರೆಗೆ ಉಡುಪಿ ಜಿಲ್ಲೆಯಾದ್ಯಂತ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ಹಾಗೂ ಪೂರ್ವಾನುಮತಿ ಪಡೆಯದೆ ಉತ್ಸವಗಳನ್ನು ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

ದೊಡ್ಡಣ್ಣಗುಡ್ಡೆ: ದುರ್ಗಾ ಆದಿ ಶಕ್ತಿ ಕ್ಷೇತ್ರದಲ್ಲಿ ಸಪರಿವಾರ ನಾಗದೇವರ ಪುನರ್ ಪ್ರತಿಷ್ಠೆ ಸಂಪನ್ನ

ದೊಡ್ಡಣ್ಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಮೇ.3 ರಿಂದ 6 ರವರೆಗೆ ನವೀಕೃತ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನರ್ ಪ್ರತಿಷ್ಠೆ ಶ್ರೀ ಕಾಲಭೈರವ ಬಿಂಬ ಪ್ರತಿಷ್ಠಾಪನೆ ಹಾಗೂ ದುರ್ಗಾ ಆದಿಶಕ್ತಿ ದೇವಿಗೆ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ, ರಂಗ ಪೂಜಾ ಮಹೋತ್ಸವ, ಬಲಿ ಉತ್ಸವ, ಮಹಾಚಂಡಿಕಾಯಾಗ, ನಿರಂತರ ಮಹಾ ಅನ್ನಸಂತರ್ಪಣೆಯು ಜರುಗಲಿದೆ. ಆ ಪ್ರಯುಕ್ತ ಗುರುವಾರದಂದು ನವೀಕೃತ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಜರುಗಿತು. ಇಂದು ದುರ್ಗಾ ಆದಿಶಕ್ತಿ ದೇವಿಗೆ ಅಷ್ಟೋತ್ತರ […]

ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಕೋಟೇಶ್ವರ ಪೇಟೆಯಲ್ಲಿ ಮತಯಾಚನೆ

ಕುಂದಾಪುರ: ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಅವರು ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟೇಶ್ವರ ಪೇಟೆಯಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಅವರು ಮತದಾರರನ್ನು ಬಿಜೆಪಿ ಪಕ್ಷಕ್ಕೆ ಮತ ಹಾಕಿ ಬೆಂಬಲಿಸಿ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ವಿನಂತಿಸಿದರು.

ಬೆಳ್ತಂಗಡಿಯನ್ನು ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಪಣ: ಹರೀಶ್ ಪೂಂಜಾ

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರು ನಡ, ಮಡಂತ್ಯಾ ರು ಮತ್ತು ಕಲ್ಲೇರಿಯಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗಿಯಾದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಹರೀಶ್ ಪೂಂಜಾ, ಕ್ಷೇತ್ರದ ಮತದಾರರು ಮೊದಲ ಬಾರಿಗೆ ಗೆಲ್ಲಿಸಿದಾಗ ರಸ್ತೆ, ಕಿಂಡಿ ಅಣೆಕಟ್ಟು, ಶಾಲಾ- ಕಾಲೇಜುಗಳ ಅಭಿವೃದ್ದಿ, ಗ್ರಂಥಾಲಯ ಹಾಗೂ ಧಾರ್ಮಿಕ ಕೇಂದ್ರಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯೂ ಗೆಲ್ಲಿಸಿದಲ್ಲಿ ಬೆಳ್ತಂಗಡಿಯನ್ನು ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುತ್ತೇನೆ ಎಂದು ಅವರು ಹೇಳಿದರು. ಸಭೆಯಲ್ಲಿ ಮಂಡಲ ಬಿಜೆಪಿ […]

ಸಚಿವ ಸುನಿಲ್ ಕುಮಾರ್ ದುರ್ಗಾ ಮತ್ತು ನಲ್ಲೂರು ಗ್ರಾಮದ ಮತದಾರರಲ್ಲಿ ಮತಯಾಚನೆ

ಕಾರ್ಕಳ: ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದ ದುರ್ಗಾ ಹಾಗೂ ನಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿದರು. ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡಿದರ ಮೂಲಕ ಕಾರ್ಕಳವನ್ನು ಅಭಿವೃದ್ಧಿಗೊಳಿಸುವಂತೆ ಕೋರಿದರು.